Advertisement

ನೀರಜ್ ಚೋಪ್ರಾ ‘ಚಿನ್ನ’ದ ಸಾಧನೆಗೆ ಅಪ್ಪಟ‌ ಕನ್ನಡಿಗನ ಕೊಡುಗೆ ಕೂಡ ಇದೆ

09:03 PM Aug 07, 2021 | Team Udayavani |

ಶಿರಸಿ: ಒಲಿಂಪಿಕ್ ನಲ್ಲಿ ಚಿನ್ನ ಗೆಲ್ಲಬೇಕೆನ್ನುವುದು ನನ್ನ ಕನಸಾಗಿತ್ತು. ಅದನ್ನು ನೀರಜ್ ಚೋಪ್ರಾ ಈಡೇರಿಸಿದ್ದಾರೆ ಎಂಬುದೇ ನನಗೆ‌ ಹೆಮ್ಮೆ, ಸಂಭ್ರಮ ಎಂದು ಪ್ರಸಿದ್ದ ಜಾವಲಿನ ಎಸೆತಗಾರ, ಚೋಪ್ರಾದ ತರಬೇರುದಾರಲ್ಲಿ ಒಬ್ಬರಾದ ಕಾಶಿನಾಥ್ ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಒಲಿಂಪಿಕ್ಸ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅಥ್ಲೆಟಿಕ್ಸನಲ್ಲಿ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟು ಇತಿಹಾಸ ನಿರ್ಮಾಣ ಮಾಡಿದ ಹರಿಯಾಣದ ನೀರಜ್ ಚೋಪ್ರಾ ಅವರ ಸಾಧನೆಗೆ ಅಪ್ಪಟ‌ ಕನ್ನಡಿಗರ ಕೊಡುಗೆ ಕೂಡ ಇದೆ. ಮೂರು ವರ್ಷಗಳ‌ ಕಾಲ ಚೋಪ್ರಾ ಅವರಿಗೆ ತರಬೇತು ನೀಡಿದ್ದು  ಶಿರಸಿ‌ ಸಮೀಪದ ಬೆಂಗಳೆ  ಮೂಲದ, ಭಾರತೀಯ ಸೇನೆಯಲ್ಲಿ‌ ಸುಬೇದುದಾರ ಆಗಿರುವ ಕಾಶಿನಾಥ್  ನಾಯ್ಕ‌ ‘ಉದಯವಾಣಿ’ ಜೊತೆ ಸಂಭ್ರಮ ಹಂಚಿಕೊಂಡರು.

ಸಾಧಿಸುವ ಗುಣವಿದೆ:

ಒಲಿಂಪಿಕ್ ನಲ್ಲಿ ಚಿನ್ನ ಗೆಲ್ಲಬೇಕೆನ್ನುವ ಕನಸನ್ನು ನನ್ನ ಶಿಷ್ಯ ಈಡೇರಿಸಿದ್ದಾನೆ. ಈ ಸಂಭ್ರಮಕ್ಕೆ ಪಾರವೇ‌ ಇಲ್ಲ. ಕರೆಗಳ ಮೂಲಕ ಅಭಿನಂದನೆ ಹೊಳೆಯೇ ಬರುತ್ತಿದೆ ಎಂದು‌ ಕಾಶೀನಾಥ ಪ್ರತಿಕ್ರಿಯೆ ನೀಡಿದ್ದಾರೆ. ಹರಿಯಾಣ ಮೂಲದ‌ ಚೋಪ್ರಾ  ಅವರಿಗೆ ಜಾವಲಿನ ಎಸೆತಕ್ಕೆ ಬೇಕಾದ ದೈವದತ್ತವಾದ ಪ್ರತಿಭೆ‌ ಇದೆ. ಅವರಿಗೆ ಗುರಿ ಸಾಧಿಸುವ‌ ಕಲೆ ಗೊತ್ತಿದೆ. ಜಾವಲಿನ ಎಸೆತದಲ್ಲಿ ಇರಬೇಕಾದ ತಂತ್ರಗಾರಿಕೆ, ಗುರಿಯ ಬಗ್ಗೆ‌ ಹೆಚ್ಚು ಲಕ್ಷ್ಯ ಹಾಕುತ್ತಿದ್ದರು. ದಿನಕ್ಕೆ‌ ಕನಿಷ್ಠ ಐದಾರು ತಾಸು ನಿರಂತರ ಹಾಗೂ‌ ಕಠಿಣ ಅಭ್ಯಾಸ ಮಾಡುತ್ತಿದ್ದರು. ಅದೇ ಈ ಸಾಧನೆಗೆ ‌ಕಾರಣ ಎಂದಿದ್ದಾರೆ ಕಾಶಿನಾಥ್ .

Advertisement

ಮೂರು ವರ್ಷಗಳ ಕಾಲ: ಛೋಪ್ರಾ‌ ಅವರು 2015 ರಿಂದ 2017ರ ತನಕ‌ ಮೂರು ವರ್ಷಗಳ‌ಕಾಲ ಜಾವಲಿನ ಎಸೆತದ ತರಬೇತಿ ಪಡೆದಿದ್ದರು. ಆಗಿಂದಲೇ ನನ್ನೊಂದಿಗೆ‌ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಅವರಿಗೆ‌ ಕಲಿಯುವ ಗುಣ ಇದೆ. ಅದೇ ಈ ಸಾಧನೆ ಸಾಧಿಸಲು ಕಾರಣವಾಗಿದೆ ಎಂದು ಹೇಳಿದರು.

ಶಿಕ್ಷಕರು ಎಲ್ಲ‌ ಮಕ್ಕಳಿಗೂ ಪಾಠ‌ ಮಾಡುತ್ತಾರೆ. ಎಲ್ಲರಿಗೂ ಒಂದೇ ರೀತಿ ಕಲಿಸುತ್ತಾರೆ. ಆದರೆ, ಒಂದಿಬ್ಬರು ಅಷ್ಟೇ ನಂಬರ್ ೧ ಆಗಬಹುದು. ಕಲಿಯುವವರಿಗೂ ಆ ಗುಣ ದೈವದತ್ತವಾಗಿ ಬಂದಿರಬೇಕು. ಅಂಥ ಗುಣ ಛೋಪ್ರಾ ಅವರಲ್ಲಿ ಇದೆ. ಎಷ್ಟು‌ ಮೆಡಲ್ ಬಂದಿದ್ದರೂ ವಿಧೇಯ ವಿದ್ಯಾರ್ಥಿ ಆಗಿದ್ದರು ಛೋಪ್ರಾ.  ಅವರಿಗೆ ಅಹಂ ಎನ್ನುವದೇ ಇಲ್ಲ. ಆ ಗುಣವೇ ನನಗೆ ಅತ್ಯಂತ‌ ಇಷ್ಟವಾಗಿದ್ದು.

ಛೋಪ್ರಾ ಅವರು‌ ಇಲ್ಲಿ‌ ತರಬೇತಿ‌ ಪಡೆದ ಬಳಿಕ ಸ್ವೀಡನ್ ನಲ್ಲೂ‌ ಮೂರು  ತಿಂಗಳ ವಿಶೇಷ ತರಬೇತಿ ‌ಪಡೆದಿದ್ದರು. ಕಳೆದ ಎರಡು ತಿಂಗಳ ಹಿಂದೆ‌ ಮತ್ತೆ ಕೆಲವು ಎಸೆತದ ತಂತ್ರ ಕಲಿಕೆಗೆ ಬಂದಿದ್ದರು‌ ಎಂದಿದ್ದಾರೆ.

ಯಾರಿವರು?:

23  ವರ್ಷದಿಂದ ಸೈನ್ಯದಲ್ಲಿ ಇರುವ ಕಾಶಿನಾಥ ಕಾಮವೆಲ್ತ ಕ್ರೀಡಾಕೂಟದಲ್ಲಿ 2010ರಲ್ಲಿ ಜಾವಲಿನ ಎಸೆತದಲ್ಲಿ ಕಂಚು‌ ಗೆದ್ದಿದ್ದರು.

2013 ರಿಂದ‌ ಅಂತರಾಷ್ಟ್ರೀಯ ಮಟ್ಟದ ಕ್ರಿಡಾಡಾಕೂಟದಲ್ಲಿ ದೇಶವನ್ನು‌ ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. 39 ವಯಸ್ಸಿನ ಕಾಶೀನಾಥ ಒಲಿಂಪಿಕ್ಸನಲ್ಲಿ ಚಿನ್ನದ ಬೇಟೆ ಆಡುವ ಜಾವಲಿನ ಎಸೆತಗಾರರಿಗೆ ಪುಣೆಯಲ್ಲಿ ತರಬೇತಿ ನೀಡುತ್ತಿದ್ದರು. ಉತ್ತರ‌ ಕ‌ನ್ನಡದ ಶಿರಸಿ ಬೆಂಗಳೆ ಊರಿನವರು. ಕ್ರೀಡಾ ತರಬೇತಿ ಶಾಲೆಯನ್ನು‌ , ಕ್ರೀಡೆಯಲ್ಲಿ ‌ಮಿಂಚುವವರಿಗೆ ಸೂಕ್ತ ತರಬೇತಿ, ವೇದಿಕೆ ಕಲ್ಪಿಸಬೇಕು ಎಂಬ ಕನಸು ಹೊತ್ತವರು  ಎಂಬುದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next