Advertisement
ಶಿರಸಿ: ವಿಧಾನ ಸಭಾ ಉಪ ಚುನಾವಣೆ, ಗ್ರಾಪಂ ಚುನಾವಣೆ, ಕೊರೊನಾಘಾತ, ಎಪಿಎಂಸಿ ಕಾಯಿದೆ ತಿದ್ದುಪಡಿ ಗೊಂದಲಗಳ ನಡುವೆ ಇಲ್ಲಿನ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಗದ್ದುಗೆ ಅವಧಿ ಮುಗಿದಿದೆ.
Related Articles
Advertisement
ಶಿರಸಿ ಎಪಿಎಂಸಿಗೆ ಇಬ್ಬರು ಶಾಸಕರ ಕ್ಷೇತ್ರ ಬರಲಿದೆ. ಒಂದು ಶಿರಸಿ ಸಿದ್ದಾಪುರ, ಇನ್ನೊಂದು ಯಲ್ಲಾಪುರ ವಿಧಾನ ಸಭೆ. ಬನವಾಸಿ ಹೋಬಳಿಯ ಎಲ್ಲ ಪಂಚಾಯ್ತಿಗಳೂ ಯಲ್ಲಾಪುರ ವಿಧಾನ ಸಭೆಗೆ ಸೇರಲಿದೆ. ಒಂದುಕಡೆ ಸ್ಪೀಕರ್ ಕಾಗೇರಿ ಕ್ಷೇತ್ರ, ಇನ್ನೊಂದೆಡೆ ಸಚಿವ ಹೆಬ್ಟಾರ್ ಕ್ಷೇತ್ರ. ಇಂಥ ಬಲಾಡ್ಯರಿದ್ದೂ ಕೆಲಸ ತರಿಸಿಕೊಳ್ಳಲು ಕೊರೊನಾ ಏಟು ನೀಡಿದೆ.
2020ರ ಮಾರ್ಚ್‌ನಿಂದ ತಗುಲಿದ ಕೊರೊನಾಘಾತ, ಈ ಬಾರಿ ಬೇಸಗೆಯಲ್ಲಿ ತಗುಲಿದ ಏಟು ಎಪಿಎಂಸಿ ಚಟುವಟಿಕೆಗೆ ಕೂಡ ಹಿನ್ನಡೆ ಮಾಡಿದೆ. ಯಲ್ಲಾಪುರ ವಿಧಾನ ಸಭಾ ಉಪ ಚುನಾವಣೆ ಕೆಲ ಸಮಯ ನೀತಿ ಸಂಹಿತೆ ತಂದರೆ, ಗ್ರಾಪಂ ಚುನಾವಣಾ ನೀತಿ ಸಂಹಿತೆ ಕೂಡ ಏಟಾಗಿಸಿದೆ. ಈ ಮಧ್ಯೆ ವಿಧಾನ ಪರಿಷತ್ ಚುನಾವಣೆ ಕೂಡ ನಡೆದಿದೆ. ಎಪಿಎಂಸಿ ಕಾಯಿದೆ ಗೊಂದಲ ಮೂರ್‍ನಾಲ್ಕು ತಿಂಗಳು ಕಸಿದಿದೆ. ಈ ಕಾರಣದಿಂದ ಓಡಾಟ ನಡೆಸಿ ಈಗಿನ ಅಧ್ಯಕ್ಷರಿಗೆ ಕೆಲಸದ ವರ್ಚಸ್ಸು ತೋರಿಸಲೂ ಆಗಿಲ್ಲ. ಅನೇಕ ಐಡಿಯಾಗಳಿದ್ದರೂ ಅನುಷ್ಠಾನಕ್ಕೆ ಸಂಕಷ್ಟಗಳೇ ತೊಡಕಾಗಿದೆ. ಆದರೂ ನೈರ್ಮಲ್ಯ, ವಿದ್ಯುತ್, ಕುಡಿಯುವ ನಿರಿನ ಜೊತೆಗೆ ಸಿಟಿಟಿವಿ ಅಳಡಿಸಿಯೂ ರಕ್ಷಣಾತ್ಮಕ ಕೆಲಸ ಮಾಡಿದ್ದಾರೆ.
ಎಪಿಎಂಸಿ ಗೇಟು ಅಳವಡಿಸುವ ಕಾರ್ಯ ಕೂಡ ಪೂರ್ಣವಾಗಬೇಕಿದೆ. 18ರ ನಂತರ ಮತ್ತೆ 20 ತಿಂಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಬೇಕಿದೆ. ವಿಶ್ವನಾಥ ಹೆಗಡೆ ಅವರ ಪುನರಾಯ್ಕೆ ಜೊತೆಗೆ ಕಳೆದ ಬಾರಿ ಸ್ಪರ್ಧಿಸಿದ್ದ ಬನವಾಸಿ ದೇಸಾಯಿ ಗೌಡರು, ಸವಿತಾ ಹೆಗಡೆ, ಪ್ರಶಾಂತ ಗೌಡ, ಕೆರಿಯಾ ಬೋರಕರ್ ಅವರ ಹೆಸರು ಕೇಳಿ ಬರುತ್ತಿದೆ.
ನಾಮನಿರ್ದೇಶನ ಸಹಿತ ಒಟ್ಟೂ 17ರಲ್ಲಿ 11 ರೈತ ಪ್ರತಿನಿಧಿಗಳು ಬಿಜೆಪಿಗರೇ ಆಗಿದ್ದಾರೆ. ಸಹಕಾರಿ ಕ್ಷೇತ್ರದ್ದು ನ್ಯಾಯಾಲಯದಲ್ಲಿ ಇರುವುದರಿಂದ 16ಕ್ಕೆ ಲೆಕ್ಕಾಚಾರ ಆಗಬೇಕಿದೆ. 16ರಲ್ಲಿ ವರ್ತಕರ ಸಂಘದ ಪ್ರತಿನಿಧಿ, ತರಕಾರಿ ಬೆಳೆಗಾರರ ಸಂಘದ ಪ್ರತಿನಿಧಿಯಿದ್ದಾರೆ. ಮೂವರು ಕಾಂಗ್ರೆಸ್, ಇಬ್ಬರು ಪಕ್ಷೇತರರು ಇದ್ದಾರೆ. ಈ ಇಬ್ಬರ ಬೆಂಬಲ ಪಡೆದು ಯಾರು ಅಧ್ಯಕ್ಷರಾಗುತ್ತಾರೆ? ಉಭಯ ಶಾಸಕರು, ಸಂಸದರು ಸೇರಿ ಒಂದಾಗಿ ಅಂತಿಮ ನಿರ್ಣಯ ಕೈಗೊಂಡರೆ ಸುಲಭ ಆಗಬಹುದು.
ತುರುಸಿನ ನಡುವೆ ಹಳಬರಿಗೆ ಮಣೆ ಹಾಕುವವರೋ ಅಥವಾ ಹೊಸ ಮುಖವೋ? ಭಿನ್ನ ಮತ ಸ್ಫೋಟ ಆದರೆ ಬಿಜೆಪಿಯಿಂದ ಹೊರಗೆ ಇದ್ದವರೇ ನಿರ್ಣಾಯಕರಾಗಲಿದ್ದಾರೆ ಎಂಬುದಂತೂ ಸುಳ್ಳಲ್ಲ.