Advertisement
ನ್ಯೂಟನ್ ಜಗತ್ತು ಕಂಡ ಅಪ್ರತಿಮ ವಿಜ್ಞಾನಿ. ತಾಳ್ಮೆ, ಸಹನೆ ಮತ್ತು ವಿಭಿನ್ನ ಕಲಾತ್ಮಕ ದೃಷ್ಟಿಕೋನ ಅವರನ್ನು ಇಡೀ ಜಗತ್ತಿನ ಮುಂದೆ ಸಾಧಕನಾಗಿ ನಿಲ್ಲುವಂತೆ ಮಾಡಿತು. ನ್ಯೂಟನ್ ಅವರ ಜೀವನ ಮತ್ತು ಸಾಧನೆ ಸ್ಫೂರ್ತಿ ಮತ್ತು ಆದರ್ಶ. ಹೀಗಾಗಿ ಅವರು ತಮ್ಮ ಜೀವನದಲ್ಲಿ ಕಂಡ ಏಳು-ಬೀಳುಗಳನ್ನು ಮೆಟ್ಟಿನಿಂತು ಸಾಧಿಸಿದ ಮೈಲಿಗಲ್ಲುಗಳ ಬಗ್ಗೆ ತಿಳಿದುಕೊಳ್ಳೋಣ.
ಅದೊಂದು ದಿನ ನ್ಯೂಟನ್ ಸೇಬಿನ ಮರದ ಕೆಳಗೆ ತನ್ನದೇ ಲೋಕದಲ್ಲಿ ಆಟವಾಡುತ್ತ ಕುಳಿತ್ತಿದ್ದ. ಒಮ್ಮಿಂದೊಮ್ಮೆಲೇ ಮರದಿಂದ ಸೇಬು ಹಣ್ಣೊಂದು ಆತನ ತಲೆಯ ಮೇಲೆ ಬಿದ್ದಿತು. ಚಿಕ್ಕಂದಿನಿಂದಲೂ ಪ್ರಶ್ನಿಸುವ ಮನೋಭಾವದವನಾಗಿದ್ದ ಈತ ಮತ್ತೆ ಈ ಬಗ್ಗೆ ತನ್ನಲ್ಲಿ ತಾನೇ ಕೇಳಿಕೊಂಡ. ಈ ಸೇಬು ಹೇಗೆ ಬಿದ್ದಿತ್ತು. ಮೇಲೆ ಯಾರು ಇಲ್ಲದಿದ್ದರೂ ಹೇಗೆ ಬಿದ್ದಿತ್ತು.?ಹೀಗೆ ಪ್ರಶ್ನೆಯೇ ಮೇಲೆ ಪ್ರಶ್ನೆಯ ಕೇಳಿಕೊಂಡನು. ಕೊನೆಗೆ ಒಂದು ದಿನ ಫಲಿತಾಂಶ ಬಂದೇ ಬಿಟ್ಟಿತ್ತು. ಅದುವೇ ಭೂಮಿಗೆ ಗುರುತ್ವಾಕರ್ಷಣ ಬಲ ಇದೆ ಎಂಬ ಸಂಶೋಧನೆ. ಇದು ಇಡೀ ಜಗತ್ತಿನ ಕಣ್ಣು ತೆರೆಸಿತ್ತು.
Related Articles
ನ್ಯೂಟನ್ ಚಿಕ್ಕಂದಿನಿಂದಲೂ ವಿಜ್ಞಾನದ ಮೇಲೆ ಕುತೂಹಲ ಕಣ್ಣು. ಪ್ರಶ್ನಿಸುವ ಮನೋಭಾವನಾಗಿದ್ದನು. ಈತನಿಗೆ ವಿಜ್ಞಾನ ಅಚ್ಚುಮೆಚ್ಚಿನ ವಿಷಯವಾಗಿತ್ತು. ಗೆಲಿಲಿಯೋ ಹಾಗೂ ಆತನ ಇನ್ನಿತರ ಸಂಶೋಧನೆಯ ಮೇಲೆ ತೀವ್ರ ಆಸಕ್ತಿ ಹೊಂದಿದ್ದನು. 1687ರಲ್ಲಿ ಕೇಂಬ್ರಿಡ್ಜ್ ಟ್ರಿನಿಟಿ ಕಾಲೇಜಿನಲ್ಲಿ ಗಣಿತ ಅಧ್ಯಾಪಕರಾಗಿ ಕಾರ್ಯನಿರ್ವಹಿಸುವ ಸಂದರ್ಭ ಪ್ರಿನ್ಸಿಪಿಯಾ ಎಂಬ ಪುಸ್ತಕ ಪ್ರಕಟಿಸುತ್ತಾರೆ. ಈ ಪುಸ್ತಕದಲ್ಲಿ ಗುರುತ್ವ ಸಿದ್ಧಾಂತ ಹಾಗೂ ವಸ್ತುಗಳು ಕೆಳಗೆ ಬೀಳಲು ಕಾರಣವೇನು ಹಾಗೂ ಗ್ರಹಗಳು ಸೂರ್ಯನ ಸುತ್ತಲೂ ಸುತ್ತುತ್ತದೆ ಎಂದು ಪ್ರತಿಪಾದಿಸುವ ವಿವರಣೆ ನೀಡಿದರು.
Advertisement
ನ್ಯೂಟನ್‌ನ ಮೂರು ನಿಯಮಗಳು ಜನಪ್ರಿಯವಾಗಿವೆ. ನ್ಯೂಟನ್ ಲೆಕ್ಕಾಚಾರ ಜನರಿಗೆ ಖಗೋಳದ ಮೇಲಿರುವ ಅರ್ಥವನ್ನೇ ಬದಲಿಸುವಂತೆ ಮಾಡಿತು. ನ್ಯೂಟನ್‌ಗೂ ಮೊದಲು ಗ್ರಹಗಳು ತಮ್ಮದೇ ಆದ ಕಕ್ಷೆಯಲ್ಲಿ ಏಕೆ ಇವೆ ಎನ್ನುವ ವಿಷಯದ ಕುರಿತು ಯಾರಿಗೂ ವಿವರಣೆ ನೀಡಲು ಸಾಧ್ಯವಾಗಿರಲಿಲ್ಲ. ಶ್ರೇಷ್ಠ ವಿಜ್ಞಾನಿ ಐಸಾಕ್ ನ್ಯೂಟನ್ ಅನಾರೋಗ್ಯದಿಂದ ಮಾರ್ಚ್ 20, 1727 ರಂದು ನಿಧನರಾದರು.
ಭರತ್ ಕುಮಾರ್, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರು