Advertisement

ಸಾರ್‌, ಪ್ಲೀಸ್‌ ಹೋಗ್ಬೇಡಿ…

06:00 AM Jun 26, 2018 | |

ವರ್ಗವಾಗಿ ಹೊರ ಊರಿಗೆ ಹೊರಟು ನಿಂತ ಶಿಕ್ಷಕನನ್ನು ಅಡ್ಡಗಟ್ಟಿ ಮಕ್ಕಳು ಕಣ್ಣೀರು ಸುರಿಸಿದರು. ಆ ಶಿಕ್ಷಕನ ಕಣ್ಣಲ್ಲೂ ನೀರು… “ಸಾರ್‌, ಪ್ಲೀಸ್‌ ಹೋಗ್ಬೇಡಿ. ಇಲ್ಲೇ ಇದ್ದುಬಿಡಿ’ ಎಂಬ ಅಳು ಇಡೀ ಸನ್ನಿವೇಶವನ್ನು ಆದ್ರìವಾಗಿಸಿತ್ತು…

Advertisement

ಅವತ್ತು ಆ ಶಾಲೆಯಲ್ಲಿ ಮೋಡ ಕವಿದ ವಾತಾವರಣ. ಮಕ್ಕಳೆಲ್ಲ ಗಂಟಲುಬ್ಬಿಸಿ ಅಳುತ್ತಿದ್ದಾರೆ. ಶಿಕ್ಷಕರ ಕಣ್ಣುಗಳೂ ತೇವವಾಗಿವೆ. ಯಾರಿಗೆ ಯಾರು, ಹೇಗೆ ಸಮಾಧಾನ ಮಾಡೋದು ಅಂತ ಗೊತ್ತಾಗದೆ ಎಲ್ಲರೂ ಕಣ್ತುಂಬಿಕೊಂಡಿದ್ದಾರೆ. ಹಾಗಂತ ಅವತ್ತು ಶಾಲೆಯ ಕೊನೆಯ ದಿನವೇನೂ ಅಲ್ಲ. ಮಕ್ಕಳು ಅಳುತ್ತಿರುವುದು, ಗೆಳೆಯರನ್ನು ಅಗಲುವ ದುಃಖದಿಂದಲೂ ಅಲ್ಲ. ಅವರ ಆಕ್ರಂದನಕ್ಕೆ ಕಾರಣವಾಗಿದ್ದು, ನೆಚ್ಚಿನ ಶಿಕ್ಷಕರೊಬ್ಬರ ವರ್ಗಾವಣೆ.

  ಇನ್ನೇನು ಆ ಶಿಕ್ಷಕರು ಶಾಲೆಯಿಂದ ಹೊರಗೆ ನಡೆಯಬೇಕು, ಅಷ್ಟರಲ್ಲಿ ಮಕ್ಕಳೆಲ್ಲ ಅವರನ್ನು ಗುಂಪು ಗುಂಪಾಗಿ ಬಂದು ಮುತ್ತಿಕೊಂಡರು. “ಸಾರ್‌, ಪ್ಲೀಸ್‌ ಹೋಗ್ಬೇಡಿ ಸಾರ್‌… ಇಲ್ಲೇ ಇದ್ದು ಬಿಡಿ..’ ಅಂತ ಅಳಲು ಶುರುಮಾಡಿದರು! ಶಿಕ್ಷಕರ ಕಣ್ಣಲ್ಲೂ ನೀರಾಡಿತು. ಆದರೇನು ಮಾಡುವುದು, ಹೊರಡಲೇಬೇಕಿತ್ತಲ್ಲ. ಇನ್ನೊಂದು ಹೆಜ್ಜೆ ಕಿತ್ತಿಟ್ಟರು. ಆಗ ಕೆಲ ಮಕ್ಕಳು, ಅವರ ಕಾಲು ಹಿಡಿದುಕೊಂಡು, “ಸಾರ್‌, ಹೋಗ್ಬೇಡಿ’ ಅಂತ ಬೇಡಿಕೊಂಡರು. ಮತ್ತೂಂದಷ್ಟು ಹುಡುಗರು ಅವರನ್ನು ಬಾಚಿ ತಬ್ಬಿ ಗಳಗಳನೆ ಅತ್ತುಬಿಟ್ಟರು. ಮಾನವ ಸರಪಳಿ ಕಟ್ಟಿ, ಶಿಕ್ಷಕನನ್ನು ಹೊರ ಹೋಗದಂತೆ ತಡೆದರು. ಪ್ರತಿಭಟನೆಯ ರೂಪ ತಾಳಿದ ಮಕ್ಕಳ ಅಳು ನಿಲ್ಲಿಸಲು ಕೊನೆಗೆ ಆ ಶಿಕ್ಷಕರೇ ಒಳ ಬರಬೇಕಾಯ್ತು. ಅವರನ್ನೆಲ್ಲ, ತರಗತಿಗೆ ಕರೆದು, ಸಮಾಧಾನ ಮಾಡಿದರು.

  ಇದು ತಮಿಳುನಾಡಿನ ತಿರುವಲ್ಲೂರು ಬಳಿಯ ವೇಳಿಗರಂ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಘಟನೆ. ಇಂಥ ಹೃದಯಸ್ಪರ್ಶಿ ಬೀಳ್ಕೊಡುಗೆ ಪಡೆದವರು ಅಲ್ಲಿ ಇಂಗ್ಲಿಷ್‌ ಶಿಕ್ಷಕರಾಗಿದ್ದ ಜಿ. ಭಗವಾನ್‌. 28 ವರ್ಷದ ಈ ಯುವ ಶಿಕ್ಷಕ, ಮಕ್ಕಳಿಗೆ ಕೇವಲ ಶಿಕ್ಷಕನಷ್ಟೇ ಆಗಿರಲಿಲ್ಲ. ಎಲ್ಲ ವಿದ್ಯಾರ್ಥಿಗಳ ಫೇವರಿಟ್‌ ಸರ್‌ ಆಗಿದ್ದರವರು. ಪಾಠದ ಜೊತೆಜೊತೆಗೆ, ಭವಿಷ್ಯದ ಕನಸುಗಳನ್ನು ಮಕ್ಕಳಲ್ಲಿ ಬಿತ್ತುತ್ತಾ, ಶಿಕ್ಷಕನೆಂದರೆ ಹೀಗಿರಬೇಕು ಎನ್ನುವುದಕ್ಕೆ ಉದಾಹರಣೆಯಾಗಿದ್ದರು.

Advertisement

   6-10ನೇ ತರಗತಿಯವರೆಗೆ ಇಂಗ್ಲಿಷ್‌ ಪಾಠ ಮಾಡುತ್ತಿದ್ದ ಭಗವಾನ್‌ರಿಗೆ, ಕೇವಲ ಮಕ್ಕಳ ಹೆಸರಷ್ಟೇ ಅಲ್ಲ, ಅವರ ಕುಟುಂಬದ ಹಿನ್ನೆಲೆಯ ಅರಿವೂ ಇತ್ತು. ಯಾರು ಬೇಗ ಅರ್ಥ ಮಾಡಿಕೊಳ್ಳುತ್ತಾರೆ, ಯಾರು ಕಲಿಕೆಯಲ್ಲಿ ಹಿಂದಿದ್ದಾರೆ, ಯಾವ ಮಗುವಿನ ಮನೆಯಲ್ಲಿ ಸಮಸ್ಯೆಗಳಿವೆ ಅನ್ನೋದನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ ಪಾಠ ಮಾಡುತ್ತಿದ್ದರು.

  ಕೊನೆಗೂ ಮಕ್ಕಳ ಹಠವೇ ಗೆದ್ದಿದೆ. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ಸರ್ಕಾರ ತನ್ನ ಆದೇಶವನ್ನು 10 ದಿನಗಳ ಮಟ್ಟಿಗೆ ತಡೆ ಹಿಡಿದಿದೆ. ತಿರುತಾನಿಯ ಬಳಿಯ ಅರಂಗುಲಂ ಶಾಲೆಗೆ ವರ್ಗಾವಣೆಯಾಗಿದ್ದ ಭಗವಾನ್‌ರನ್ನು ಮಕ್ಕಳು ಪ್ರೀತಿಯ ಸರಪಳಿಯಲ್ಲಿ ಕಟ್ಟಿ ಹಾಕಿ, ತಮ್ಮೊಂದಿಗೇ ಉಳಿಸಿಕೊಂಡಿದ್ದಾರೆ. ಭಾಳ ಒಳೊರ್‌ ನಂ ಮಿಸ್ಸು, ಊರಿಗೆಲ್ಲಾ ಫೇಮಸ್ಸು… ಎಂಬ ಮಕ್ಕಳ ಹಾಡಿನಂತೆ, ಈ ಗುರು-ಶಿಷ್ಯರ ಬಾಂಧವ್ಯ ಭಾರೀ ಫೇಮಸ್‌ ಆಗಿದೆ.

ಮಾಗಡಿ ಶಿಕ್ಷಕಿ ಶಾಲೆ ಬಿಟ್ಟು ಹೊರಟಾಗ…


ಅದು 2012. ಮನಸ್ಸನ್ನು ಬೆಚ್ಚಗಾಗಿಸುವ ಇಂಥದ್ದೇ ಘಟನೆಯೊಂದು ಬೆಂಗಳೂರು ಸಮೀಪದ ಮಾಗಡಿಯಲ್ಲಿ ನಡೆದಿತ್ತು. ತಿರುಮಲೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಮಣಿ ಎಂಬ ಶಿಕ್ಷಕಿ 10 ವರ್ಷಗಳಿಂದ ಪಾಠ ಮಾಡುತ್ತಿದ್ದರು. ತಾಯಿ ಮನಸ್ಸಿನ ಆಕೆ, ಎಲ್ಲ ಮಕ್ಕಳಿಗೂ ಅಚ್ಚುಮೆಚ್ಚಿನ ಟೀಚರ್‌. ಅಧ್ಯಾತ್ಮ ಚಿಂತನೆಯಿಂದಲೂ ಮಕ್ಕಳಿಗೆ ಹತ್ತಿರವಾಗಿದ್ದರು. ಅವರನ್ನು ಸರ್ಕಾರ ವರ್ಗಾವಣೆ ಮಾಡಿದಾಗ, 7 ವಿದ್ಯಾರ್ಥಿಗಳು ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಅದೂ ಯಾವ ರೀತಿ ಗೊತ್ತಾ? ಜಾಮಿಟ್ರಿ ಬಾಕ್ಸ್‌ನಲ್ಲಿದ್ದ ಕೈವಾರದಿಂದ ತಮ್ಮ ಕೈಗೆ ಗಾಯ ಮಾಡಿಕೊಂಡು, ಶಿಕ್ಷಣಾಧಿಕಾರಿಗಳ ಗಮನ ಸೆಳೆದಿ

Advertisement

Udayavani is now on Telegram. Click here to join our channel and stay updated with the latest news.

Next