Advertisement

Singur plant: ಘಟಕ ಸ್ಥಳಾಂತರದಿಂದ ನಷ್ಟ: ಟಾಟಾ ಮೋಟಾರ್ಸ್‌ಗೆ 766 ಕೋಟಿ ರೂ. ಪರಿಹಾರ

08:52 PM Oct 30, 2023 | Team Udayavani |

ನವದೆಹಲಿ: ಸಿಂಗೂರಿನಲ್ಲಿ ಟಾಟಾ ಕಾರು ಉತ್ಪಾದನಾ ಘಟಕದಲ್ಲಿ ಉಂಟಾದ ನಷ್ಟಕ್ಕೆ ಸಂಬಂಧಿಸಿದಂತೆ ಟಾಟಾ ಮೋಟಾರ್ಸ್‌ಗೆ 766 ಕೋಟಿ ರೂ. ಪರಿಹಾರ ನೀಡುವಂತೆ ಪಶ್ಚಿಮ ಬಂಗಾಳದ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಮಧ್ಯಸ್ಥಿಕೆ ನ್ಯಾಯಾಧೀಕರಣವು ನಿರ್ದೇಶಿಸಿದೆ.

Advertisement

ಭೂವಿವಾದದ ಕಾರಣ ಪಶ್ಚಿಮ ಬಂಗಳಾದ ಸಿಂಗೂರಿನಲ್ಲಿದ್ದ ಟಾಟಾ ನ್ಯಾನೊ ಕಾರು ಉತ್ಪಾದನಾ ಘಟಕವನ್ನು 2008ರ ಅಕ್ಟೋಬರ್‌ನಲ್ಲಿ ಗುಜರಾತ್‌ನ ಸನಂದ್‌ಗೆ ಟಾಟಾ ಮೋಟಾರ್ಸ್‌ ಸ್ಥಳಾಂತರಿಸಿತು. ಆದರೆ ಈ ವೇಳೆಗಾಗಲೇ ಕಂಪನಿ ಸಿಂಗೂರಿನ ಘಟಕಕ್ಕೆ 1,000 ಕೋಟಿ ರೂ. ಹೂಡಿಕೆ ಮಾಡಿತ್ತು.

ತನಗೆ ಆದ ನಷ್ಟ ಪರಿಹಾರಕ್ಕೆ ಕೋರಿ ಟಾಟಾ ಮೋಟಾರ್ಸ್‌ ಮಧ್ಯಸ್ಥಿಕೆ ನ್ಯಾಯಾಧೀಕರಣದ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಮೂರು ಸದಸ್ಯರ ಮಧ್ಯಸ್ಥಿಕೆ ನ್ಯಾಯಾಧೀಕರಣವು, 2016ರ ಸೆ.1ರಿಂದ ವಾರ್ಷಿಕ ಶೇ.11ರ ಬಡ್ಡಿಯೊಂದಿಗೆ 765.75 ಕೋಟಿ ರೂ.ಗಳ ಪರಿಹಾರವನ್ನು ಟಾಟಾ ಮೋಟಾರ್ಸ್‌ಗೆ ಪಶ್ಚಿಮ ಬಂಗಾಳದ ಕೈಗಾರಿಕಾ ಅಭಿವೃದ್ಧಿ ನಿಗಮ ನೀಡಬೇಕು ಎಂದು ತೀರ್ಪು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next