Advertisement

Udupi; ಏಕವಚನದ ನಿಂದನೆ ತಪ್ಪು: ಕೋಟ ಶ್ರೀನಿವಾಸ ಪೂಜಾರಿ

12:43 AM Jan 16, 2024 | Team Udayavani |

ಉಡುಪಿ: ಯಾರು ಕೂಡ ಏಕವಚನದಲ್ಲಿ ಮಾತನಾಡಬಾರದು ಎಂಬುವುದು ಸಾರ್ವತ್ರಿಕ ನಿಲುವು. ಮುಖ್ಯಮಂತ್ರಿಗಳು ಪ್ರಧಾನಿಯವರನ್ನು ಏಕವಚನದಲ್ಲಿ ನಿಂದಿಸುವುದು ತಪ್ಪು ಎಂಬುವುದನ್ನು ಕಾಂಗ್ರೆಸ್‌ ಕಾರ್ಯಕರ್ತರು ಅರ್ಥೈಸಿಕೊಳ್ಳಬೇಕು ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂಸದ ಅನಂತ ಕುಮಾರ್‌ ಹೆಗಡೆಯವರನ್ನು ಟೀಕಿಸುವ ಮುನ್ನ ಕಾಂಗ್ರೆಸ್‌ ಕಾರ್ಯಕರ್ತರು ಮುಖ್ಯಮಂತ್ರಿಗಳು ಏಕವಚನ ಬಳಕೆ ಮಾಡಿರುವುದನ್ನೂ ತಿಳಿದುಕೊಳ್ಳಬೇಕು ಎಂದರು.

ವಿಶೇಷ ಅನುದಾನಕ್ಕೆ ಮನವಿ
ಈ ಹಿಂದೆ ರಾಜ್ಯದಲ್ಲಿ ಯಾವುದೇ ಪಕ್ಷದ ಮುಖ್ಯಮಂತ್ರಿಗಳಿದ್ದರೂ ಉಡುಪಿಯ ಪರ್ಯಾಯೋತ್ಸವಕ್ಕೆ ವಿಶೇಷ ಅನುದಾನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಲಭ್ಯವಾಗಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರೊಂದಿಗೆ ಮಾತುಕತೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಪರ್ಯಾಯೋತ್ಸವಕ್ಕೆ ಬೆಂಬಲ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next