Advertisement

ದೈನಂದಿನ ವಹಿವಾಟಿನಲ್ಲಿ ಅಲಿಬಾಬಾ ಹೊಸ ದಾಖಲೆ

09:46 AM Nov 13, 2019 | Hari Prasad |

ಹಾಂಗ್‌ಝೌ : ಚೀನದ ಇ-ಕಾಮರ್ಸ್‌ ಕ್ಷೇತ್ರದ ದೈತ್ಯ ಸಂಸ್ಥೆ ಅಲಿಬಾಬಾ, ತನ್ನ ದೈನಂದಿನ ವಹಿವಾಟಿನಲ್ಲಿ ಕಳೆದ ವರ್ಷ ಮಾಡಿದ್ದ ದಾಖಲೆಯನ್ನು ಮುರಿದಿದೆ. ಸೋಮವಾರ, ಸಂಸ್ಥೆ, 2.27 ಲಕ್ಷ ಕೋಟಿ ರೂ.ಗಳಷ್ಟು ವಹಿವಾಟು ನಡೆಸಿದ್ದು, ಕಳೆದ ವರ್ಷ, ನ.11ರಂದು ಕಂಪೆನಿ ಮಾಡಿದ್ದ 2.20 ಲಕ್ಷ ಕೋಟಿಯಷ್ಟು ವ್ಯವಹಾರವನ್ನು ಹಿಂದಿಕ್ಕಿದೆ.

Advertisement

ಇದಲ್ಲದೆ, ಇಷ್ಟು ಮೊತ್ತದ ವಹಿವಾಟು ನಡೆದ ಅವಧಿಯಲ್ಲೂ ಅಲಿಬಾಬಾ ಹೊಸ ದಾಖಲೆ ಬರೆದಿದೆ. ಈ ವರ್ಷವೂ ‘ಆನ್‌ಲೈನ್‌ ವಿಶೇಷ ಮಾರಾಟ ಮೇಳ’ ಆಯೋಜಿಸಲಾಗಿತ್ತು. ಮೇಳ ಶುರುವಾದ ಕೇವಲ 16 ಗಂಟೆ, 31 ನಿಮಿಷ ಅವಧಿಯಲ್ಲಿ 2.27 ಲಕ್ಷ ಕೋಟಿ ರೂ.ಗಳಷ್ಟು ಉತ್ಪನ್ನಗಳು ಮಾರಾಟವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next