ಪುಣೆ: ನಗರದಲ್ಲಿ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ರೀತಿಯ ಚಿತ್ರಮಂದಿರಗಳನ್ನು ತೆರೆಯಬಹುದು ಎಂದು ರಾಜ್ಯ ಸರ್ಕಾರ ಆದೇಶ ನೀಡಿದರೂ, ಸಿಂಗಲ್ ಸ್ಕ್ರೀನ್ ಇರುವ ಚಿತ್ರಮಂದಿರಗಳ ಮಾಲೀಕರು ಅವುಗಳನ್ನು ತೆರೆಯಲು ಮುಂದಾಗಿಲ್ಲ.
ಕೊರೊನಾ ನಿಯಮಗಳನ್ನು ಮುಂದಿಟ್ಟುಕೊಂಡು ಮತ್ತೆ ವಹಿವಾಟು ಶುರು ಮಾಡುವುದು ಕಷ್ಟವೆಂದು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರು ತಿಳಿಸಿದ್ದಾರೆ. ಹೀಗಾಗಿ, ಚಿತ್ರಮಂದಿರಗಳ ಮಾಲೀಕರಲ್ಲಿ ಕೆಲವರು ತಮ್ಮ ವಹಿವಾಟು ಸ್ಥಗಿತಗೊಳಿಸಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಪುಣೆಯ ಲಕ್ಷ್ಮೀನಾರಾಯಣ ಚಿತ್ರಮಂದಿರದ ಮಾಲೀಕ ದಿಲೀಪ್ ಬೊರವಾಕೆ ಬೆಳವಣಿಗೆ ಬಗ್ಗೆ ಮಾತನಾಡಿ “ಹಾಲಿ ದಿನಗಳಲ್ಲಿ ಸಾರ್ವಜನಿಕರು ಸಿನಿಮಾ ನೋಡಲು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಬರುವ ಆಯ್ಕೆಯನ್ನು ಕೊನೇಯದಾಗಿ ಇರಿಸಿಕೊಳ್ಳುತ್ತಾರೆ. ಅವರು ಮಲ್ಟಿಪ್ಲೆಕ್ಸ್ ಅಥವಾ ಆನ್‌ಲೈನ್‌ನಲ್ಲಿ ಸಿನಿಮಾ ನೋಡಲು ಬಯಸುತ್ತಾರೆ. ಹೀಗಾಗಿ ಅವರ ಜತೆಗೆ ನಾವು ಸ್ಪರ್ಧೆ ನೀಡಲು ಸಾಧ್ಯವೇ ಇಲ್ಲದ ಮಾತು. ಇದರ ಜತೆಗೆ ಕೊರೊನಾ ಪರಿಸ್ಥಿತಿಯಿಂದಾಗಿ ಆದಾಯ ಕೂಡ ತಗ್ಗಿದೆ. ಹೀಗಾಗಿ, ಸರ್ಕಾರ ಅನುಮತಿ ನೀಡಿದರೂ, ಚಿತ್ರಮಂದಿರಗಳನ್ನು ಪುನಾರಂಭಗೊಳಿಸುವುದು ಕಷ್ಟದ ಮಾತು’ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಶೀಘ್ರದಲ್ಲಿ ಮಾರುಕಟ್ಟಗೆ ಲಗ್ಗೆ ಇಡಲಿದೆ Poco M3: ಏನೆಲ್ಲಾ ವಿಶೇಷತೆಗಳಿವೆ ?
ಮತ್ತೂಬ್ಬ ಚಿತ್ರಮಂದಿರ ಮಾಲೀಕ ಮಾತನಾಡಿ ಪ್ರತಿಯೊಂದು ಸೀಟನ್ನು ಸ್ಯಾನಿಟೈಸ್ ಮಾಡುವುದು ಕಷ್ಟಸಾಧ್ಯ. ಸರ್ಕಾರದ ಕೊರೊನಾ ನಿಯಮಾನುಸಾರ ಎಲ್ಲಾ ವ್ಯವಸ್ಥೆಗಳನ್ನು ಒದಗಿಸುವುದು ಕಷ್ಟವೆಂದು ತಿಳಿಸಿದ್ದಾರೆ.