Advertisement

ದಲಿತ ಕಾಲೋನಿಗೆ ಒಂದೇ ಕೊಳಾಯಿ!

05:14 PM Nov 15, 2019 | Suhan S |

ಬರಗೂರು: ಬರೋಬ್ಬರಿ 25 ವರ್ಷ ಕಳೆದರೂ ಚರಂಡಿ ಸೌಲಭ್ಯ ಕಾಣದ ದೊಡ್ಡಹುಲಿಕುಂಟೆ ದಲಿತ ಕಾಲೋನಿಯ 70 ಮನೆಗಳ ಜನತೆ ಒಂದೇ ನಲ್ಲಿಯಲ್ಲಿ ಬರುವ ಕುಡಿವ ನೀರಿಗೆ ಪರದಾಡಬೇಕಾಗಿದೆ.

Advertisement

ಸೌಲಭ್ಯದಲ್ಲಿ ತಾರತಮ್ಯ: ಶಿರಾ ತಾಲೂಕಿನ ದೊಡ್ಡಹುಲಿಕುಂಟೆ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಕಲ್ಪತರು ಗ್ರಾಮೀಣ ಬ್ಯಾಂಕ್‌, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ನಾಡ ಕಚೇರಿ ಇರುವ ಗ್ರಾಪಂ ಕೇಂದ್ರ ಸ್ಥಾನ. ಇಂತಹ ಅಭಿವೃದ್ಧಿ ಹೊಂದಿದ ದೊಡ್ಡಹುಲಿ ಕುಂಟೆ ಗ್ರಾಮದ ದಲಿತ ಕಾಲೋನಿಯಲ್ಲಿ 76 ಬಡ ಕುಟುಂಬಗಳ 360 ಮಂದಿ ವಾಸಿ ಸುತ್ತಿದ್ದಾರೆ. ಕಂದಾಯ ಸೇರಿ ಎಲ್ಲಾ ತೆರಿಗೆಯನ್ನು ಗ್ರಾಪಂಗೆ ಕಟ್ಟುತ್ತಾ ಬಂದಿದ್ದರೂ ಮೂಲಭೂತ ಸೌಲಭ್ಯ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ.

ಸಾಂಕ್ರಾಮಿಕ ರೋಗಗಳ ಭೀತಿ: ದೊಡ್ಡಹುಲಿ ಕುಂಟೆ ದಲಿತ ಕಾಲೋನಿ ನಿವಾಸಿ ಲಕ್ಷ್ಮಮ್ಮ ಮಾತನಾಡಿ, ಕಳೆದ 25 ವರ್ಷದಿಂದ ಊರ ಹೊರ ಭಾಗದಿಂದ ಕಾಲೋನಿ ಮೂಲಕ ಹಾದು ಹೋಗುವ ಚರಂಡಿ ಬಿಟ್ಟರೆ ಇನ್ಯಾವುದೇ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಪರಿಣಾಮ ಮನೆ ಗಳಲ್ಲಿ ನಿತ್ಯ ಬಳಕೆ ಮಾಡುವ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿ ಮಲೇರಿಯಾ, ಚಿಕೂನ್‌ಗುನ್ಯಾದಂತಹ ಜ್ವರದಿಂದ ಬಳಲುವಂತಹ ಸ್ಥಿತಿ ನಿರ್ಮಾಣ ವಾಗಿದೆ ಎಂದು ದೂರಿದರು.

2 ದಿನಕ್ಕೊಮ್ಮೆ ನೀರು: ದೊಡ್ಡಹುಲಿಕುಂಟೆ ದಲಿತ ಕಾಲೋನಿ ನಿವಾಸಿ ರತ್ನಮ್ಮ ಮಾತನಾಡಿ, 60ಮನೆ ಇರುವಂತ ಕಾಲೋನಿಯಲ್ಲಿ ಎಲ್ಲರೂ ಮನೆಗಳಿಗೆ ಪ್ರತ್ಯೇಕ ನಲ್ಲಿ ಹಾಕಿಸುವಂತಹ ಶಕ್ತಿಯಿಲ್ಲ. ಇಡೀ ದಲಿತ ಕಾಲೋನಿಗೆ ಒಂದು ನಲ್ಲಿ ಹಾಕಿ 2ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಈ ಬಗ್ಗೆ ಗ್ರಾಪಂನಲ್ಲಿ ವಿಚಾರಿಸಿದರೆ ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಲ್ಲ ಎಂದು ಶಿವಮ್ಮ, ನರಸಿಂಹಯ್ಯ, ಲಕ್ಷ್ಮೀ ದೇವಿ, ಲಕ್ಷ್ಮಮ್ಮ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next