Advertisement
3ನೇ ಅವಧಿಯ ಮೋದಿ ಸರಕಾರಕ್ಕೆ 100 ದಿನ ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ಸರಕಾರದ ಅವಧಿ ಮುಕ್ತಾಯವಾಗುವುದರೊಳಗೆ ಏಕ ಚುನಾವಣ ಪದ್ಧತಿಯನ್ನು ಜಾರಿ ಮಾಡುತ್ತೇವೆ. ಈ ಲೋಕಸಭೆ ಚುನಾವಣೆಗೆ ಇದು ಬಿಜೆಪಿ ನೀಡಿದ್ದ ಪ್ರಮುಖ ಭರವಸೆಯಾಗಿತ್ತು. ಇದನ್ನು ನಾವು ಜಾರಿ ಮಾಡುತ್ತೇವೆ ಎಂದರು.
Related Articles
Advertisement
ಶೀಘ್ರ ಜನಗಣತಿ ಆರಂಭದೇಶಾದ್ಯಂತ ಜನಗಣತಿ ನಡೆಸುವುದಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಶೀಘ್ರವೇ ಘೋಷಣೆ ಹೊರಡಿಸಲಿದೆ ಎಂದು ಅಮಿತ್ ಶಾ ಹೇಳಿದರು. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಜನಗಣತಿ ವಿಳಂಬವಾಗಿದ್ದು, ಶೀಘ್ರವೇ ಅದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನಾವು ಸಾರ್ವ ಜನಿಕರ ಮುಂದೆ ಮಂಡಿಸುತ್ತೇವೆ ಎಂದು ಹೇಳಿದರು. ರೈಲ್ವೆ ಅಪಘಾತಗಳ ತನಿಖೆ
ದೇಶದಲ್ಲಿ ನಡೆಯುತ್ತಿರುವ ರೈಲ್ವೇ ಅಪಘಾತಗಳಿಗೆ ಸಂಬಂಧಿಸಿ ಸಂಪೂರ್ಣ ತನಿಖೆ ನಡೆಸಲಾಗುತ್ತದೆ. ರೈಲ್ವೇ ಅವಘಡಗಳು ಕಳವಳಕಾರಿಯಾಗಿವೆ. ಹೀಗಾಗಿ ಇದರ ಮೂಲದ ಬಗ್ಗೆ ನಾವು ತನಿಖೆ ನಡೆಸುತ್ತೇವೆ. 100 ದಿನಗಳಲ್ಲಿ 38 ಅಪಘಾತಗಳಾಗಿವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಇವೆಲ್ಲವೂ ಸಣ್ಣಪುಟ್ಟ ಅಪಘಾತಗಳು ಎಂದರು. 100 ದಿನದಲ್ಲಿ 3 ಲಕ್ಷ ಕೋ.ರೂ. ಬಿಡುಗಡೆ
ಮೋದಿ ಸರಕಾರದ 3ನೇ ಅವಧಿಯಲ್ಲಿ ಮೊದಲ 100 ದಿನಗಳಲ್ಲೇ ವಿವಿಧ ಯೋಜನೆಗಳಿಗಾಗಿ 3 ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 25 ಸಾವಿರ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತದೆ. ಮಹಾರಾಷ್ಟ್ರ
ದಲ್ಲಿ ವಧಾವನ್ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಖಾರಿಫ್ ಬೆಳೆಗೆ ಬೆಂಬಲ ಬೆಲೆ ಒದಗಿಸುವುದು ಸರಕಾರದ ಆದ್ಯತೆಯಾಗಿದೆ ಎಂದು ಶಾ ಹೇಳಿದರು. ಏಕ ಚುನಾವಣೆಗೆ
ಜೆಡಿಯು, ಎಲ್‌ಜೆಪಿ ಬೆಂಬಲ
ಒಂದು ದೇಶ, ಒಂದು ಚುನಾವಣೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಜೆಡಿಯು ಮತ್ತು ಎಲ್‌ಜೆಪಿ ಘೊಷಣೆ ಮಾಡಿವೆ. ಏಕ ಚುನಾವಣೆ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತದೆ. ಇದು ಪದೇ ಪದೆ ನಡೆಯುವ ಚುನಾವಣೆಗಳಿಗೆ ಮುಕ್ತಿ ನೀಡುವುದರಿಂದ ಕೇಂದ್ರ ಸರಕಾರ ಸ್ಥಿರ ಮತ್ತು ಸುಧಾರಣೆ ನೀತಿಗಳತ್ತ ಹೆಚ್ಚಿನ ಗಮನ ಹರಿಸಲಿದೆ ಎಂದು ಜೆಡಿಯು ಹೇಳಿದೆ. ಪದೇ ಪದೆ ನಡೆಯುವ ಚುನಾವಣೆಗಳು ಸರಕಾರದ ವೆಚ್ಚವನ್ನು ಹೆಚ್ಚು ಮಾಡುತ್ತವೆ. ಅಲ್ಲದೆ ಯೋಜನೆಗಳ ಅನುಷ್ಠಾನಕ್ಕೆ ಭಾರೀ ನಷ್ಟವನ್ನುಂಟು ಮಾಡುತ್ತವೆ. ಇದು ದೇಶದ ಪ್ರಗತಿಗೆ ಅಡ್ಡಿ ಮಾಡುತ್ತದೆ. ಹೀಗಾಗಿ ಏಕ ಚುನಾವಣೆ ಜಾರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಎಲ್‌ಜೆಪಿ ಹೇಳಿದೆ. ಜಾತಿಗಣತಿಗೆ ಕೇಂದ್ರ ಸರಕಾರ ಶೀಘ್ರವೇ ಘೋಷಣೆ ಹೊರಡಿಸ ಲಿದೆ.ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಯನ್ನು ನಾವು ಸಾರ್ವಜನಿಕರ ಮುಂದೆ ಇರಿಸುತ್ತೇವೆ.
– ಅಮಿತ್ ಶಾ, ಕೇಂದ್ರ ಗೃಹ ಸಚಿವ