ನವದೆಹಲಿ: ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ವರದಿಯಾಗುತ್ತಿದ್ದು, 113 ದಿನಗಳ ಬಳಿಕ ಒಂದೇ ದಿನದಲ್ಲಿ 524 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Advertisement
ಶನಿವಾರ ಒಂದೇ ದಿನ 524 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಈ ವರ್ಷದಲ್ಲಿ ಮೊದಲಬಾರಿ ದಾಖಲಾದ ಏಕದಿನದ ಅತಿಹೆಚ್ಚು ಪ್ರಕರಣ ಇದಾಗಿದೆ ಎಂದು ಭಾನುವಾರ ಸಚಿವಾಲಯ ಹೇಳಿತ್ತು.
ಇನ್ನು ಸೋಮವಾರದ ವೇಳೆಗೆ 24 ಗಂಟೆಯಲ್ಲಿ 444 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,809ಕ್ಕೆ ಏರಿಕೆಯಾಗಿದೆ.
ಶನಿವಾರ ಮತ್ತು ಸೋಮವಾರ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 5,30,782ಕ್ಕೆ ಏರಿಕೆಯಾಗಿದೆ.