Advertisement

Joe Biden ಪ್ರಚಾರಕ್ಕೆ ಒಂದೇ ದಿನ 216 ಕೋಟಿ ರೂ. ಸಂಗ್ರಹ!

12:46 AM Mar 30, 2024 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಹುದ್ದೆಗೆ ಪುನರಾಯ್ಕೆ ಬಯಸಿರುವ ಡೆಮಾಕ್ರಾಟಿಕ್‌ ಪಕ್ಷದ ಜೋ ಬೈಡೆನ್‌ ಪರ ಪ್ರಚಾರಕ್ಕಾಗಿ ಒಂದೇ ದಿನ ಬರೋಬ್ಬರಿ 216 ಕೋಟಿ ರೂ. ಸಂಗ್ರಹವಾಗಿದೆ. ಗುರುವಾರ ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಬಿಲ್‌ ಕ್ಲಿಂಟನ್‌, ಬರಾಕ್‌ ಒಬಾಮಾ ಸೇರಿ ಪ್ರಮುಖರು ಭಾಗವಹಿಸಿದ್ದರು. ಇದರ ಫ‌ಲವಾಗಿ ಭರಪೂರ ದೇಣಿಗೆ ಸಂಗ್ರಹವಾಗಿದೆ. ಹಾಲಿ ಅಧ್ಯಕ್ಷ ಜೋ ಬೈಡೆನ್‌, ಮಾಜಿ ಅಧ್ಯಕ್ಷರಾಗಿರುವ ಕ್ಲಿಂಟನ್‌, ಒಬಾಮಾ ಜತೆಗೆ ಇರುವ ಫೋಟೋ 8.34 ಲಕ್ಷ ರೂ.(1 ಲಕ್ಷ ಅಮೆರಿಕನ್‌ ಡಾಲರ್‌)ಗೆ ಮಾರಾಟವಾಗಿದೆ. ಇದಲ್ಲದೆ ಔತಣಕೂಟದ ಟಿಕೆಟ್‌ಗಳ ಮೂಲಕವೂ ನಿಧಿ ಸಂಗ್ರಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next