Advertisement

ಯೇಸುದಾಸ್‌ ತಮ್ಮ ಕೆ.ಜೆ. ಜಸ್ಟಿನ್‌ ಸಾವು ; ಆತ್ಮಹತ್ಯೆ ಶಂಕೆ

09:53 AM Feb 08, 2020 | Hari Prasad |

ಕೊಚ್ಚಿ: ಖ್ಯಾತ ಹಿನ್ನೆಲೆ ಗಾಯಕ ಕೆ.ಜೆ. ಯೇಸುದಾಸ್‌ರವರ ಕಿರಿಯ ಸಹೋದರ ಕೆ.ಜೆ. ಜಸ್ಟಿನ್‌ ರವರ (62) ಮೃತದೇಹ ಕೊಚ್ಚಿ ಜಿಲ್ಲೆಯ ತಿಕ್ಕಕ್ಕಾರದಲ್ಲಿನ ಅವರ ನಿವಾಸದ ಬಳಿಯೇ ಇರುವ ವಲ್ಲಪಾದಂ ಕಿರು ಜಲಾಗಾರದ ಹಿನ್ನೀರಿನಲ್ಲಿ ಪತ್ತೆಯಾಗಿದೆ.

Advertisement

ಮಂಗಳವಾರ ಸಂಜೆಯಿಂದ ನಾಪತ್ತೆಯಾಗಿದ್ದ ಜಸ್ಟಿನ್‌ರಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿ, ಪೊಲೀಸರಿಗೆ ದೂರನ್ನೂ ನೀಡಿದ್ದರು. ಕೆಲವೇ ಗಂಟೆಗಳಲ್ಲಿ ಜಸ್ಟಿನ್‌ರವರ ಮೃತದೇಹ ಪತ್ತೆಯಾಗಿತ್ತು.

ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಅನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇದನ್ನು ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಯೇಸುದಾಸ್‌ ಬಂದ ಅನಂತರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next