Advertisement

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

03:06 PM Jan 14, 2025 | Team Udayavani |

ಮುಂಬಯಿ: ಜನಪ್ರಿಯ ಗಾಯಕಿ ನೇಹಾ ಕಕ್ಕರ್ (Singer Neha Kakkar) ಅವರನ್ನು ಪೊಲೀಸರು ಬಂಧಿಸಿಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಟ್ರೇಡಿಂಗ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದಾರೆ ಎನ್ನುವ ಕ್ಯಾಪ್ಷನ್‌ನಲ್ಲಿ ಪೊಲೀಸರು ಅವರನ್ನು ಬಂಧಿಸಿಕೊಂಡು ಹೋಗಿರುವ ಫೋಟೋ ವೈರಲ್‌ ಆಗಿದೆ.

“ನೇಹಾ ಕಕ್ಕರ್ ಅವರ ವೃತ್ತಿಜೀವನಕ್ಕೆ ದುರಂತವಾಗಿ ಅಂತ್ಯವಾಗುತ್ತಿದೆ. ಇಂದು ಬೆಳಗಿನ ಸುದ್ದಿಯು ಎಲ್ಲಾ ಭಾರತೀಯರಿಗೆ ಆಘಾತವಾಗಿದೆ” ಎಂದು ಬಂಧಿಸಿಕೊಂಡು ಹೋಗಿದ್ದಾರೆ ಎಂದು ಫೋಟೋ ಮೇಲ್ಗಡೆ ಬರೆಯಲಾಗಿದೆ. ಈ ಫೋಟೋದಲ್ಲಿ ನೇಹಾ ಅವರು ಅಳುತ್ತಿರುವುದನ್ನು ಕಾಣಬಹುದಾಗಿದೆ.

ಫೋಟೋ ವೈರಲ್‌ ಆಗುತ್ತಿದ್ದಂತೆ ಒಮ್ಮೆಗೆ ಫ್ಯಾನ್ಸ್‌ಗಳು ಶಾಕ್‌ಗೆ ಒಳಗಾಗಿದ್ದಾರೆ. ಇದರ ಸತ್ಯಾಸತ್ಯತೆ ಏನು ಎನ್ನುವುದರ ಬಗ್ಗೆ ಹುಡುಕಾಡಲು ಶುರು ಮಾಡಿದ್ದಾರೆ.

Advertisement

ಫೋಟೋಗಳು ಲಿಂಕ್‌ನೊಂದಿಗೆ ಹೊರಬಿದ್ದಿದ್ದು, ಈ ಲಿಂಕ್‌ ಕ್ಲಿಕ್‌ ಮಾಡಿದಾಗ ಇದರಲ್ಲಿ ನೇಹಾ ಅವರ ಹೆಸರನ್ನು ಬಳಸಿಕೊಂಡು ‘ಎಮರ್ಲಾಡೋ’ ಎಂಬ ಆ್ಯಪ್ ನ ಚಿತ್ರಣ ಕಾಣುತ್ತದೆ.

ನೇಹಾ ಅವರು ಬಂಧನವಾಗಿರುವ ಫೋಟೋಗಳನ್ನು ʼಎಐʼನಿಂದ ಕ್ರಿಯೇಟ್‌ ಮಾಡಲಾಗಿದೆ. ಇಲ್ಲಿ ಬಂಧನವಾಗಿರುವ ಫೋಟೋದಲ್ಲಿರುವುದು ಬೇರೆಯೇ ಮಹಿಳೆ ಆಗಿದ್ದು, ನೇಹಾ ಅವರ ಮುಖವನ್ನು ಆ ಫೋಟೋಗೆ ಹಾಕಲಾಗಿದೆ.

ಈ ಹಿಂದೆ ಅಮಿತಾಬ್‌ ಬಚ್ಚನ್‌, ರಣವೀರ್‌ ಸಿಂಗ್‌ ಅವರ ಫೋಟೋಗಳನ್ನು ಕೂಡ ಇದೇ ರೀತಿ ಬಳಸಿಕೊಂಡು ದಾರಿ ತಪ್ಪಿಸುವ ಟ್ರೇಡಿಂಗ್ ಆ್ಯಪ್ ನ ಪ್ರಚಾರ ಮಾಡಲಾಗಿತ್ತು.

ಸದ್ಯ ನೇಹಾ ಈ ಬಗ್ಗೆ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.