Advertisement

 ಸಿರಿಮಹಾಕಾವ್ಯದ ಹಾಡುಗಾತಿ ಲೀಲಾ ಶೆಡ್ತಿ

02:51 PM Dec 01, 2017 | |



Advertisement

ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಆರ್‌ಆರ್‌ಸಿ), ಮಣಿಪಾಲ ವಿಶ್ವವಿದ್ಯಾನಿಲಯ ಸಂಸ್ಥೆಯ ವತಿಯಿಂದ ಇತ್ತೀಚೆಗೆ “ಸಿರಿ ಮಹಾಕಾವ್ಯ’ದ ದಾಖಲಾತಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಕಳ ತಾಲೂಕು ಮಾಳ ಗ್ರಾಮದ ಲೀಲಾ ಶೆಡ್ತಿಯವರು ಭಾಗವಹಿಸಿದ್ದರು. ಈಗಾಗಲೇ ಸಿರಿ ಮಹಾಕಾವ್ಯದ ನಾಲ್ಕು ಆವೃತ್ತಿಗಳು ಆರ್‌ಆರ್‌ಸಿಯಲ್ಲಿ ದಾಖಲುಗೊಂಡಿದ್ದು ಇದು ಐದನೆಯ ಆವೃತ್ತಿಯಾಗಿದೆ. ಲೀಲಾ ಶೆಡ್ತಿಯವರು ಕಳೆದ 53 ವರ್ಷಗಳಿಂದ ಅಬ್ಬಗನ ದರ್ಶನ ಪಾತ್ರಿಣಿಯಾಗಿದ್ದು 12 ಗಂಟೆಗಳ ಕಾಲ ನಿರಂತರ ಸಿರಿ ಮಹಾಕಾವ್ಯವನ್ನು ಹಾಡಬಲ್ಲವರು. ಇದೇ ಸಂದರ್ಭದಲ್ಲಿ ಅವರಿಂದ ಇತರ ಹಾಡುಗಳನ್ನೂ ಧ್ವನಿ ಮತ್ತು ಶ್ರವ್ಯ ದಾಖಲೆ ಮಾಡ‌ಲಾಗುತ್ತಿದೆ. 

ಪ್ರೊ| ವರದೇಶ ಹಿರೇಗಂಗೆಯವರ ನೇತೃತ್ವದಲ್ಲಿ, ಡಾ| ಅಶೋಕ ಆಳ್ವ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ದಾಖಲಾತಿ ಕಾರ್ಯಕ್ರಮದಲ್ಲಿ ಲಚ್ಚೇಂದ್ರ ಅವರು ತಂತ್ರಜ್ಞರಾಗಿ ಸಹಕರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next