Advertisement

ಟ್ರಂಪ್‌-ಕಿಮ್‌ ಶೃಂಗಕ್ಕೆ ಸಿಂಗಾಪುರ ಗೂರ್ಖಾ ಪಡೆ ಭದ್ರತೆ

04:29 PM Jun 05, 2018 | udayavani editorial |

ಸಿಂಗಾಪುರ : ಈ ತಿಂಗಳಾಂತ್ಯದಲ್ಲಿ  ಇಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ಅವರೊಳಗಿನ ಐತಿಹಾಸಿಕ ಶೃಂಗಕ್ಕೆ  ವಿಶ್ವ ಪ್ರಸಿದ್ಧ ಬಡುಕಟ್ಟು ಯೋಧರೆನಿಸಿರುವ ನೇಪಾಲದ ಗೂರ್ಖಾ ಗಳು ರಕ್ಷಣೆ ನೀಡಲಿದ್ದಾರೆ.

Advertisement

ಉಭಯ ನಾಯಕರು ತಮ್ಮೊಂದಿಗೆ ತಮ್ಮ ದೇಶದ ಭದ್ರತಾ ಸಿಬಂದಿಗಳನ್ನು ಕರೆ ತರುತ್ತಾದರೂ ಗೂರ್ಖಾ ಪಡೆಯನ್ನು ಒಳಗೊಂಡಿರುವ ಸಿಂಗಾಪುರ ಪೊಲೀಸರು ಶೃಂಗ ನಡೆಯುವ ತಾಣಕ್ಕೆ, ಅಲ್ಲಿಗೆ ತಲುಪುವ ರಸ್ತೆಗಳಿಗೆ, ಹೊಟೇಲು ಮತ್ತಿತರ ಆಯಕಟ್ಟಿನ ಸ್ಥಳಗಳಿಗೆ ರಕ್ಷಣೆ ನೀಡಲಿದ್ದಾರೆ ಎಂದು ಈ ದ್ವೀಪ ರಾಷ್ಟ್ರದಲ್ಲಿ ವಿಐಪಿ ಭದ್ರತೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ರಾಜತಂತ್ರಜ್ಞರು ತಿಳಿಸಿದ್ದಾರೆ. 

ಸಿಂಗಾಪುರದಲ್ಲಿನ ಗೂರ್ಖಾ ಪಡೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಕಡಿಮೆ. ಈಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ರಕ್ಷಣಾ ಸಚಿವ ಜಿಮ್‌ ಮ್ಯಾಟಿಸ್‌ ಮತ್ತು ಇತರ ಪ್ರಾದೇಶಿಕ ಸಚಿವರು ಪಾಲ್ಗೊಂಡ ಸಿಂಗಾಪುರದ ಶಾಂಗ್ರಿಲಾ ಹೊಟೇಲ್‌ಗೆ ಬಿಗಿ ಭದ್ರತೆ ನೀಡಿದವರೇ ಗೂರ್ಖಾ ಪಡೆಗಳು ಎನ್ನುವುದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next