Advertisement

ಪರಿಣತರಿಗೆ ಸಿಗಲಿದೆ 5 ವರ್ಷಗಳ ಸಿಂಗಾಪುರ ವೀಸಾ

08:52 PM Aug 29, 2022 | Team Udayavani |

ಸಿಂಗಾಪುರ: ಪರಿಣಿತ ಉದ್ಯೋಗಿಗಳ ಕೊರತೆ ಎದುರಿಸುತ್ತಿರುವ ಸಿಂಗಾಪುರ ಇತರ ದೇಶಗಳಿಂದ ಆಸಕ್ತರನ್ನು ಆಹ್ವಾನಿಸಲು ನಿರ್ಧರಿಸಿದೆ.

Advertisement

ಅದಕ್ಕಾಗಿ ಓವರ್‌ಸೀಸ್‌ ನೆಟ್‌ವರ್ಕ್‌ ಆ್ಯಂಡ್‌ ಎಕ್ಸ್‌ಪರ್‌ಟೈಸ್‌ (ಒಎನ್‌ಇ) ಎಂಬ ಹೆಸರಿನ ಯೋಜನೆಯಲ್ಲಿ ಐದು ವರ್ಷಗಳ ಅವಧಿಯ ವೀಸಾ ನೀಡಲು ಮುಂದಾಗಿದೆ ಮತ್ತು ನಿಯಮಗಳಲ್ಲಿ ಬದಲಾವಣೆ ತರಲು ಮುಂದಾಗಿದೆ.

ಪ್ರತಿ ತಿಂಗಳ ಕನಿಷ್ಠ 30 ಸಾವಿರ ಸಿಂಗಾಪುರ ಡಾಲರ್‌ (17,14,284.29 ರೂ) ವೇತನ ನೀಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಕ್ರೀಡೆ, ಕಲೆ, ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಹೆಚ್ಚಿನ ವೇತನ ನೀಡಲು ಮುಂದಾಗಿದೆ. ಮುಂದಿನ ವರ್ಷದ ಜ.1ರಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ.

ವೀಸಾ ಪಡೆದವರು ಮಾತ್ರವಲ್ಲ, ಅವರ ಜತೆಗೆ ಇರುವವರಿಗೆ ಕೂಡ ಕೆಲಸ ಮಾಡಲೂ ಹೊಸ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next