ಸಿಂಗಾಪುರ್: ಕೋವಿಡ್ ಸೋಂಕಿನ ಎರಡನೇ ಅಲೆಯನ್ನು ತೀವ್ರವಾಗಿ ಎದುರಿಸುತ್ತಿರುವ ಭಾರತಕ್ಕೆ ನೆರವಿನ ಬೆಂಬಲ ನೀಡಿರುವ ಸಿಂಗಾಪುರ್ ಸರ್ಕಾರ ಆಕ್ಸಿಜನ್ ಸಿಲಿಂಡರ್ ಗಳನ್ನು ರವಾನಿಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ(ಏಪ್ರಿಲ್ 28) ತಿಳಿಸಿದೆ.
ಇದನ್ನೂ ಓದಿ:ಲಾಕ್ ಡೌನ್ : ಮಂಗಳೂರು ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆ
ದ ರಿಪಬ್ಲಿಕ್ ಆಫ್ ಸಿಂಗಾಪುರ್ ವಾಯುಪಡೆ, ಸಿಂಗಾಪುರದಿಂದ ಪಶ್ಚಿಮಬಂಗಾಳಕ್ಕೆ ಎರಡು ಸಿ 130 ವಿಮಾನಗಳ ಮೂಲಕ ಆಕ್ಸಿಜನ್ ಸಿಲಿಂಡರ್ ಗಳನ್ನು ರವಾನಿಸಿರುವುದಾಗಿ ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ.
ಎರಡು ಲೋಡ್ ಆಮ್ಲಜನಕ ಸಿಲಿಂಡರ್ ಗಳನ್ನು ಸಿಂಗಾಪುರದಲ್ಲಿರುವ ಭಾರತದ ರಾಯಭಾರಿ ಪಿ.ಕುಮಾರನ್ ಅವರಿಗೆ ಪಯಾ ಲೆಬಾರ್ ವಾಯುನೆಲೆಯಲ್ಲಿ ಇಂದು ಬೆಳಗ್ಗೆ ಹಸ್ತಾಂತರಿಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಮಲಿಕಿ ಉಸ್ಮಾನ್ ತಿಳಿಸಿದ್ದಾರೆ.
ಕೋವಿಡ್ ಸೋಂಕು ಯಾವ ರೀತಿ ಭೀತಿಯನ್ನು ಹುಟ್ಟಿಸಿತ್ತು ಎಂಬುದಕ್ಕೆ ನಾವೆಲ್ಲ ಕಳೆದ ವರ್ಷವೇ ಸಾಕ್ಷಿಯಾಗಿದ್ದೇವೆ ಎಂದು ವಾಯುನೆಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಮಲಿಕಿ ತಿಳಿಸಿದ್ದು, ಕೋವಿಡ್ ಸೋಂಕು ಯಾವುದೇ ದೇಶ, ರಾಷ್ಟ್ರೀಯತೆ ಅಥವಾ ಜನಾಂಗವನ್ನು ಲೆಕ್ಕಿಸದೇ ತಗಲುವ ವೈರಸ್ ಆಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.