Advertisement
ಸಿಂಗಾಪುರದ ವ್ಯಾಪಾರ ಮತ್ತು ಉದ್ಯಮ ಸಚಿವಾಲಯದ ಮಾಹಿತಿ ಪ್ರಕಾರ, ತೈಲೇತರ ರಫ್ತು ಪ್ರಮಾಣ ಮೇ ತಿಂಗಳಲ್ಲಿ ಶೇ.14.7ರಷ್ಟು ಕುಸಿದಿದೆ. ಏಪ್ರಿಲ್‌ನಲ್ಲಿ ಶೇ.9.8ರಷ್ಟು ಕುಸಿತವಾಗಿತ್ತು. ಇದಕ್ಕೆ ಮುಖ್ಯ ಕಾರಣ ವಿದ್ಯುನ್ಮಾನ ಮತ್ತು ವಿದ್ಯುನ್ಮಾನೇತರ ಉತ್ಪನ್ನಗಳ ರಫ್ತು ಕುಸಿತವಾಗಿದ್ದು. ಒಂದು ತ್ತೈಮಾಸಿಕದಿಂದ ಇನ್ನೊಂದು ತ್ತೈಮಾಸಿಕಕ್ಕೆ ಶೇ.0.4ರಷ್ಟು ಆರ್ಥಿಕತೆ ಕುಸಿಯುತ್ತಿದೆ. ಕಳೆದ ವರ್ಷ 1,26,000 ಹುದ್ದೆಗಳು ಖಾಲಿ ಇದ್ದವು, ಈ ವರ್ಷ ಅದರ ಪ್ರಮಾಣ 99,600ಕ್ಕೆ ಕುಸಿದಿದೆ. ಈ ವರ್ಷ ಮೊದಲ ತ್ತೈಮಾಸಿಕದಲ್ಲಿ 3,820 ಮಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಒಟ್ಟಾರೆ ಅನಿವಾಸಿ ಭಾರತೀಯರು ಈ ಎಲ್ಲ ಬೆಳವಣಿಗೆಗಳಿಂದ ಗೊಂದಲದಲ್ಲಿದ್ದಾರೆ. Advertisement
ಸಿಂಗಾಪುರದಲ್ಲಿ ಆರ್ಥಿಕ ಕುಸಿತ, ಭಾರತೀಯರಿಗೆ ಆತಂಕ
07:55 PM Jun 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.