Advertisement

ವೀರಶೈವ ಪರಂಪರೆಯಂತೆ ಮರುಳಾರಾಧ್ಯ ಶ್ರೀ ಅಂತ್ಯಕ್ರಿಯೆ

12:28 PM Feb 19, 2020 | Naveen |

ಸಿಂದಗಿ: ಸೋಮವಾರ ಲಿಂಗೈಕ್ಯರಾದ ತಾಲೂಕಿನ ಕನ್ನೊಳ್ಳಿ ಹಿರೇಮಠದ ಶತಾಯುಷಿ ಶ್ರೀ ಮರುಳಾರಾಧ್ಯ ಶಿವಾಚಾರ್ಯರ ಅಂತ್ಯಸಂಸ್ಕಾರ ಕ್ರಿಯೆ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಮಂಗಳವಾರ ಸಂಜೆ 6:30ರ ಸುಮಾರಿಗೆ ನೆರವೇರಿತು.

Advertisement

ಇದಕ್ಕೂ ಮುನ್ನ ಮಠದ ಹೊರಭಾಗದಲ್ಲಿ ಸುಮಾರು 2 ಎಕರೆ ಪ್ರದೇಶದಲ್ಲಿ ಹಾಕಲಾಗಿದ್ದ ದೊಡ್ಡ ವೇದಿಕೆಯಲ್ಲಿ ಪೂಜ್ಯರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಸಂಖ್ಯಾತ ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. ಶ್ರೀಗಳ ಪಾರ್ಥಿವ ಶರೀರದ ಅಡ್ಡಪಲ್ಲಕ್ಕಿ ಮೆರವಣಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆರಂಭವಾಗಿ ಮಧ್ಯಾಹ್ನ 3-30ರ ಸುಮಾರಿಗೆ ಮಠಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು. ಶ್ರೀಗಳು ಲಿಂಗೈಕ್ಯರಾಗಿಲ್ಲ, ಅವರು ನಮ್ಮೊಂದಿಗಿದ್ದಾರೆ ಎಂದು ಭಕ್ತರು ಜೈಕಾರ ಹಾಕುವ ಮೂಲಕ ಭಕ್ತಿ ವ್ಯಕ್ತಪಡಿಸಿದರು.

ಕನ್ನೊಳ್ಳಿ ಹಿರೇಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಈ ಸಂದರ್ಭದಲ್ಲಿ ಮಾತನಾಡಿ, ಸಾರಂಗಮಠ- ಗಚ್ಚಿನಮಠದ ಡಾ| ಪ್ರಭು ಸಾರಂಗದೇವ ಶಿವಾಚಾರ್ಯರು, ಬಂಥನಾಳದ ಶ್ರೀ ವೃಷಭಲಿಂಗ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ಶ್ರೀಗಳು ಅಪ್ಪಣೆ ಕೊಡಿಸಿದಂತೆ ಅವರ ಮಾರ್ಗದರ್ಶನದಲ್ಲಿ ನಡೆಯುವುದಾಗಿ ತಿಳಿಸಿದರು. ಸಾರಂಗಮಠ-ಗಚ್ಚಿನಮಠದ ಡಾ| ಪ್ರಭು ಸಾರಂಗದೇವ ಶಿವಾಚಾರ್ಯರು, ಬಂಥನಾಳದ ಶ್ರೀ ವೃಷಭಲಿಂಗ ಸ್ವಾಮಿಗಳು, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಕೊಣ್ಣೂರದ ಡಾ| ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮಿಗಳು, ಆಲಮೇಲದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು ಪಾಲ್ಗೊಂಡಿದ್ದರು.

ಶಾಸಕ ಎಂ.ಸಿ. ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಶರಣಪ್ಪ ಸುಣಗಾರ, ಅಶೋಕ ವಾರದ, ಡಾ| ವಿಜಯಕುಮಾರ ವಾರದ, ಡಾ| ಮಹಾಂತೇಶ ಹಿರೇಮಠ, ಶ್ರೀಶೈಲ ನಂದಿಕೋಲ ಸೇರಿದಂತೆ ಹಾಲಿ ಮತ್ತು ಮಾಜಿ ಜನಪ್ರತಿನಿಧಿ ಗಳು, ರಾಜಕೀಯ ಮುಖಂಡರು, ಸಹಸ್ರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದು ಕ್ರಿಯಾಸಮಾಧಿ  ಕಾರ್ಯದಲ್ಲಿ  ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next