Advertisement
ಸತತ ಎರಡನೇ ಫೈನಲ್ಸ್ ನಲ್ಲಿ ಆಡಿದ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಅವರು ಥಾಯ್ಲೆಂಡಿನ ಬುಸಾನನ್ ಆಂಗ್ಬಮುರುಂಗಪ್ಪನ್ ಅವರನ್ನು 21-16, 21-8 ಗೇಮ್‌ಗಳಿಂದ ಮಣಿಸಿದರು. ಇದು ಸಿಂಧು ಅವರ ಈ ಋತುವಿನ ಎರಡನೇ ವನಿತಾ ಸಿಂಗಲ್ಸ್ ಪ್ರಶಸ್ತಿಯಾಗಿದೆ.
Related Articles
ಸ್ವಿಸ್ ಓಪನ್ ಪ್ರಶಸ್ತಿ ಗೆದ್ದ ಸಿಂಧು ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಸಿಂಧು ಅವರ ಈ ಸಾಧನೆಯಿಂದ ಯುವ ಕ್ರೀಡಾಪಟು ಗಳಿಗೆ ಪ್ರೇರಣೆಯಾಗಲಿದೆ ಎಂದವರು ಹಾರೈಸಿದ್ದಾರೆ.
Advertisement
ಪ್ರಣಯ್ ರನ್ನರ್ ಅಪ್ಪುರುಷರ ಫೈನಲ್‌ನಲ್ಲಿ ಪ್ರಣಯ್ ಗೆಲ್ಲಲು ಶಕ್ತಿಮೀರಿ ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ನಾಲ್ಕನೇ ಶ್ರೇಯಾಂಕದ ಇಂಡೋನೇಶ್ಯದ ಜೊನಾಥನ್ ಕ್ರಿಸ್ಟಿ ಅವರ ಸವಾಲಿಗೆ ದಿಟ್ಟ ಉತ್ತರ ನೀಡಲು ವಿಫಲರಾದ ಪ್ರಣಯ್ 12-21, 18-21 ಗೇಮ್‌ಗಳಿಂದ ಶರಣಾದರು. 48 ನಿಮಿಷಗಳ ವರೆಗೆ ಹೋರಾಡಿದ ಪ್ರಣಯ್ ಅಂತಿಮವಾಗಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಜೊನಾಥನ್ ಅವರ ನಿಖರ ಮತ್ತು ಶಕ್ತಿಶಾಲಿ ಹೊಡೆತಕ್ಕೆ ಪ್ರಣಯ್ ನಿರುತ್ತರರಾದರು. ಕಳೆದ ಐದು ವರ್ಷಗಳಲ್ಲಿ ತನ್ನ ಮೊದಲ ಫೈನಲ್ ಪಂದ್ಯದಲ್ಲಿ ಆಡಿದ ಪ್ರಣಯ್ ದ್ವಿತೀಯ ಗೇಮ್‌ನಲ್ಲಿ ವೀರೋಚಿತ ಹೋರಾಟ ನೀಡಿದ್ದರು.