Advertisement
“ನಿಯಮಗಳನ್ನು ತಪ್ಪದೇ ಪಾಲಿಸಿ’“ಸಿಂಧು ನನಗೆ ಕರೆ ಮಾಡಿ, ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್‌ನಲ್ಲಿ ತಾನು ಆಟ ಮುಂದುವರಿಸಬಹುದೇ ಎಂದು ಕೇಳಿದ್ದಾರೆ. ದೇಶದ ಹೊರಗೆ, ಒಲಿಂಪಿಕ್ಸ್ ಅರ್ಹತಾ ಕೂಟದಲ್ಲಿ ಆಡುವ ಕಾರಣ ಮುಂದುವರಿಯಿರಿ ಎಂದು ಸೂಚಿಸಿದ್ದೇನೆ. ಆದರೆ ಈ ಸಂದರ್ಭದಲ್ಲಿ ಆ ದೇಶಗಳ ಆರೋಗ್ಯ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಸೂಚಿಸಿದ್ದೇನೆ’ ಎಂದು ಹೇಳಿದ್ದಾಗಿ ರಿಜಿಜು ತಿಳಿಸಿದರು. ಆದರೆ ಶುಕ್ರವಾರದ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಪರಾಭವಗೊಂಡರು. ಜಪಾನಿನ ನಜೋಮಿ ಒಕುಹಾರಾ ವಿರುದ್ಧ 12-21, 21-15, 21-13 ಅಂತರದಿಂದ ಎಡವಿದರು.