ಬದಿಯಡ್ಕ : ಬೇಳ ವಿಷ್ಣುಮೂರ್ತಿ ನಗರದಲ್ಲಿ ಸಿಂಧೂರ ಯುವಕ ವೃಂದದ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು.
ತಂತ್ರಿವರ್ಯರಾದ ಉಳಿಯತ್ತಾಯ ಬ್ರಹ್ಮ ಶ್ರೀ ವೇ. ಮೂ. ವಿಷ್ಣು ಆಸ್ರರು ಸಮಾಂಭವನ್ನು ಉದ್ಘಾಟಿಸಿದರು. ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷರಾಗಿರುವ ಶ್ರೀಧರ ಪ್ರಸಾದ್ ಮಾಸ್ಟರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಊರಿನ ಹಿರಿಯರಾದ ವಿಷ್ಣುಮೂರ್ತಿ ಸೇವಾ ಸಮಿತಿಯ ಕೋಶಾಧಿಕಾರಿ ಏಣಿಯರ್ಪು ಚೋಯಿ ಮಣಿಯಾಣಿ ಹಾಗೂ ಏಣಿಯರ್ಪು ಕೋಂದರ್ಬತ್ತ್ ತರವಾಡಿನ ಪ್ರಧಾನ ಪೂಜಾರಿ ಬಾಲಕೃಷ್ಣರನ್ನು ಗೌರವಿಸಲಾಯಿತು.
ಊರಿನ ಬಾಲ ಪ್ರತಿಭೆ ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಕುಮಾರಿ ಅಪೇಕ್ಷ ಪೈಯನ್ನು ಸನ್ಮಾನಿಸಲಾಯಿತು. ಬೇಳ ಕುಮಾರಮಂಗಲ ಕ್ಷೇತ್ರದ ಪ್ರಧಾನ ಅರ್ಚಕರಾದ ರಾಮಚಂದ್ರ ಅಡಿಗ ಬೇಳ, ಸಿಂಧೂರ ಯುವಕ ವೃಂದದ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಗೌತಮ್ ಶೆಟ್ಟಿ ಮತ್ತು ಶ್ರವಣ್ ಸನ್ಮಾನಿತರ ಪರಿಚಯ ವಾಚಿಸಿದರು. ಅಶ್ವಿನಿ ಪ್ರದೀಪ್ ಸನ್ಮಾನ ಪತ್ರ ವಾಚಿಸಿದರು.
ವಿಷ್ಣುಮೂರ್ತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಮಾಸ್ತರ್ ಸ್ವಾಗತಿಸಿದರು. ಸಿಂಧೂರ ಯುವಕ ವೃಂದದ ಕಾರ್ಯದರ್ಶಿ ಪುಷ್ಪರಾಜ್ ರೈ ವಂದಿಸಿದರು. ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಶ್ರೀ ವಿಷ್ಣುಮೂರ್ತಿ ಬಾಲಗೋಕುಲ, ನಟರಾಜ ಡ್ಯಾನ್ಸ್ ಗ್ರೂಪ್ ವತಿಯಿಂದ ನೃತ್ಯ ವೈವಿಧ್ಯ ನಡೆಯಿತು. ಸಿಂಧೂರ ಯುವಕ ವೃಂದದ ಪ್ರಾಯೋಕತ್ವದಲ್ಲಿ ಸುಧೀರ್ ಉಳ್ಳಾಲ್ ನೇತೃತ್ವದ ಸಿಟಿ ಗಾಯ್ಸ ಕುಡ್ಲ ಕ್ವೀನ್ಸ್ ಮಂಗಳೂರು ಇವರಿಂದ ನೃತ್ಯ ಸಿಂಚನ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.