Advertisement

ಆದಿವಾಸಿಗಳ ಹತ್ಯೆ ನ್ಯಾಯಾಂಗ ತನಿಖೆ ಆಗಲಿ

11:51 AM Jul 28, 2019 | Naveen |

ಸಿಂಧನೂರು: ಉತ್ತರಪ್ರದೇಶದಲ್ಲಿ ನಡೆದ ಆದಿವಾಸಿಗಳ ಹತ್ಯಾಕಾಂಡ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಶನಿವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಕರ್ನಾಟಕ ರೈತ ಸಂಘದ ರಾಜ್ಯ ಅಧ್ಯಕ್ಷ ಡಿ.ಎಚ್. ಪೂಜಾರ, ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಭೂ ಮಾಲೀಕರ ಗೂಂಡಾಪಡೆ ಆದಿವಾಸಿ ಹಳ್ಳಿಗಳ ಮೇಲೆ ಆಕ್ರಮಣ ಮಾಡಿ ಗುಂಡು ಹಾರಿಸಿ 10 ಜನರನ್ನು ಹತ್ಯೆ ಮಾಡಿದ್ದು, 25ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಘಟನೆ ಖಂಡನೀಯ. ಬಿಜೆಪಿ ಸರ್ಕಾರದ ಬೆಂಬಲದೊಂದಿಗೆ ಈ ಹೀನ ಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ರಾಷ್ಟ್ರೀಯ ಭದ್ರತಾ ಕಾನೂನಿನಡಿ ಬಂಧಿಸಬೇಕು. ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಲ್ಲಿ ಬಂಸಬೇಕು ಮತ್ತು ಇಡೀ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.

ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ ಮಾತನಾಡಿ, ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯ ಉಂಬಾ ಎಂಬ ಹಳ್ಳಿಯ ಗೊಂಡಾ ಬುಡಕಟ್ಟು ಜನ ನೂರಾರು ವರ್ಷಗಳಿಂದ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು ಬದುಕುತ್ತಿದ್ದಾರೆ. ಸರ್ಕಾರದಿಂದ ಹಕ್ಕುಪತ್ರ ಪಡೆದಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭೂ ಮಾಲೀಕರಿಂದ ಭೂ ಕಬಳಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಆದಿವಾಸಿಗರನ್ನು ತೆರವುಗೊಳಿಸಿ ಉಂಬಾ ಹಳ್ಳಿಯ ಇಡೀ ಭೂಮಿ ಕಬಳಿಸಲು ಈ ಹೀನ ಕೃತ್ಯ ನಡೆಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಜು.17ರಂದು 200ಕ್ಕೂ ಹೆಚ್ಚು ಗೂಂಡಾ ಪಡೆ 32 ಟ್ರ್ಯಾಕ್ಟರ್‌ಗಳಲ್ಲಿ ಬಂದೂಕು, ಲಾಠಿ ಹಿಡಿದು ಹಳ್ಳಿಯ ಜನರ ಮೇಲೆ ಆಕ್ರಮಣ ಮಾಡಿ ಮಹಿಳೆಯರು, ಮಕ್ಕಳು ಎನ್ನದೆ ಸಾಯಿಸಿದ್ದು ಖಂಡನೀಯ ಎಂದರು.

ದಿನ ಬೆಳಗಾದರೆ ದೇಶಭಕ್ತಿಯ ಬೊಗಳೆ ಬಿಡುವ ಬಿಜೆಪಿ ಸರ್ಕಾರದ ಬೆಂಬಲದಿಂದಲೇ ದೇಶದ ಮೂಲನಿವಾಸಿಗಳಾದ ಆದಿವಾಸಿಗಳನ್ನೇ ಒಕ್ಕಲೆಬ್ಬಿಸಿ ಭೂಮಿ ಕಬಳಿಸುವ ಮಾಫಿಯಾ ಕೃತ್ಯ ಇದಾಗಿದೆ. ಛತ್ತೀಸ್‌ಗಡ, ಓರಿಸ್ಸಾ, ಜಾರ್ಖಂಡ್‌ನ‌ಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಗಣಿಗಾರಿಕೆಗಾಗಿ ಕಾರ್ಪೋರೇಟ್ ಕಂಪನಿಗಳಿಗೆ ನೀಡುತ್ತಿರುವ ಸರ್ಕಾರ ಉತ್ತರಪ್ರದೇಶದಲ್ಲಿ ಆದಿವಾಸಿಗಳನ್ನು ಈ ರೀತಿ ಒಕ್ಕಲೆಬ್ಬಿಸುತ್ತಿದೆ. ಈ ದುರ್ಘ‌ಟನೆಯಿಂದ ಬಿಜೆಪಿ ಎಂದರೆ ಕಾರ್ಪೋರೇಟ್-ಭೂಮಾಲೀಕರ ಹಿತಾಸಕ್ತಿ ಕಾಯುವ ಪಕ್ಷ ಎಂಬುದು ಮತ್ತೆ ಸಾಬೀತಾಗಿದೆ ಎಂದು ಆರೋಪಿಸಿದರು.

ಸಮುದಾಯ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌.ದೇವೇಂದ್ರಗೌಡ ಮಾತನಾಡಿ, ಉತ್ತರಪ್ರದೇಶದ ಉಂಬಾ ಗ್ರಾಮದ ಹತ್ತು ಜನ ಆದಿವಾಸಿಗಳನ್ನು ಹತ್ಯೆ ಮಾಡಿದ ಭೂಮಾಲೀಕರ ಮೇಲೆ ರಾಷ್ಟ್ರೀಯ ಭದ್ರತಾ ಕಾನೂನಿನಡಿ ಪ್ರಕರಣ ದಾಖಲಿಸಿ ಅವರನ್ನು ಶಿಕ್ಷೆಗೊಳಪಡಿಸಬೇಕು. ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಉಂಬಾ ಹಳ್ಳಿಯ ಆದಿವಾಸಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಮತ್ತು ಅವರಿಗೆ ಭೂಮಿಯನ್ನು ಮರಳಿಸಬೇಕು. ಉತ್ತರಪ್ರದೇಶ ಸರ್ಕಾರ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

Advertisement

ಒಕ್ಕೂಟದ ಮುಖಂಡರಾದ ವೆಂಕನಗೌಡ ಗದ್ರಟಗಿ, ಶೇಕ್ಷಾಖಾದ್ರಿ, ಮಂಜುನಾಥ ಗಾಂಧಿನಗರ, ಬಸವರಾಜ ಬಾದರ್ಲಿ, ನಾಗರಾಜ ಪೂಜಾರ, ಸಮ್ಮದ್‌ ಚೌದ್ರಿ, ಶಂಕರ ಗುರಿಕಾರ, ಹಾಜಿಸಾಬ್‌ ಆಯನೂರು, ದುರುಗೇಶ, ನದೀಮ್‌ ಮುಲ್ಲಾ, ಕೆ.ಮರಿಯಪ್ಪ, ಸಂಗಮೇಶ ಮುಳ್ಳೂರು ಇ.ಜೆ., ಬಿ.ಎನ್‌.ಯರದಿಹಾಳ, ಮಹಾದೇವಪ್ಪ ಅಮರಾಪುರ, ಶ್ರೀನಿವಾಸ ಬುಕ್ಕನಟ್ಟಿ, ಆರ್‌.ಎಚ್.ಕಲಮಂಗಿ, ಬಸವರಾಜ ಬೆಳಗುರ್ಕಿ, ಬಸವರಾಜ ಕೊಂಡೆ, ಮಲ್ಲಿಕಾರ್ಜುನ, ಇಮ್ತಿಯಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next