Advertisement
ದಿ ಅಸೋಸಿಯೋಷನ್ ಆಫ್ ಪೀಪಲ್ಸ್ ವಿತ್ ಡಿಸ್ ಎಬಿಲಿಟಿ ಬೆಂಗಳೂರು, ವಿಕಲಚೇತನರು, ಹಿರಿಯ ನಾಗರಿಕ ಸಬಲೀಕರಣ ಇಲಾಖೆ ರಾಯಚೂರು, ತಾಲೂಕು ಪಂಚಾಯಿತಿ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ತಾಪಂ ಸಭಾಂಗಣದಲ್ಲಿ ನಡೆದ 18ರಿಂದ 35 ವರ್ಷದ ಒಳಗಿನ ನಿರುದ್ಯೋಗಿ ವಿಕಲಚೇತನರಿಗೆ ತರಬೇತಿ ಮತ್ತು ಉದ್ಯೋಗ ಆಯ್ಕೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರು ಸ್ವಾವಲಂಬಿಗಳಾಗಿ ಬದುಕಲು ವಿವಿಧ ವಲಯಗಳಲ್ಲಿ ಮತ್ತು ಸ್ವಉದ್ಯೋಗದಲ್ಲಿ ತೊಡಗಿದ್ದಾರೆ. ಅನೇಕರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇಂತಹ ವಿಕಲಚೇತನರಿಗೆ ಪ್ರೋತ್ಸಾಹ, ಮಾರ್ಗದರ್ಶನ ಅಗತ್ಯವಾಗಿದೆ ಎಂದು ಹೇಳಿದರು. ನಿರುದ್ಯೋಗಿ ವಿಕಲಚೇತನರಿಗೆ ಉದ್ಯೋಗ ತರಬೇತಿ ಅವಶ್ಯಕವಾಗಿದೆ. ತರಬೇತಿ ಶಿಬಿರಗಳಲ್ಲಿ
ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಬೇಕು. ತರಬೇತಿದಾರರು ಸಮರ್ಪಕ ತರಬೇತಿ ಮತ್ತು
ಮಾರ್ಗದರ್ಶನ ನೀಡಬೇಕು ಎಂದರು. ವಿಕಲಚೇತನರ ಸಂಘದ ತಾಲೂಕು ಅಧ್ಯಕ್ಷ ದೇವೇಂದ್ರಗೌಡ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ಯೋಗಿತಾ ಬಾನು, ಮಹ್ಮದ್ ಹುಸೇನಸಾಬ್, ನಾಗಪ್ಪ ಸುಕಾಲಪೇಟೆ, ಬಸವರಾಜ ಸಾಸಲಮರಿ, ಬಸಪ್ಪ ಹೊಸಳ್ಳಿ, ಶಂಕರಗೌಡ ತುರುವಿಹಾಳ ಇತರರು ಇದ್ದರು.