Advertisement

ಸಿಂಧನೂರು: ಲೇಡಿ ಪಿಎಸ್ಐ, ವಕೀಲರ ನಡುವೆ ಜಟಾಪಟಿ; ವಿಡಿಯೋ ವೈರಲ್

07:45 PM Dec 10, 2022 | Team Udayavani |

ಸಿಂಧನೂರು: ನಗರದ ಪೊಲೀಸ್ ಠಾಣೆಯಲ್ಲಿ ವಕೀಲರೊಬ್ಬರು ಮತ್ತು ಮಹಿಳಾ ಪಿಎಸ್ಐ ಮಧ್ಯೆ ವಾಕ್ಸಮರ ನಡೆದ ಘಟನೆಗೆ ಸಂಬಂಧಿಸಿ ಶನಿವಾರ ವಿಡಿಯೊವೊಂದು ವೈರಲ್ ಆಗಿದೆ.

Advertisement

ವಕೀಲ ಶರಣುಗೌಡ ಗದ್ರಟಗಿ ಮತ್ತು ಪಿಎಸ್ಐ ಸೌಮ್ಯ ಹಿರೇಮಠ ನಡುವೆ ಪಿಎಸ್ಐ ಕಚೇರಿ, ಹೊರಗೆ ತೀವ್ರ ವಾಗ್ವಾದವಾಗಿದೆ‌. ಈ ಪೈಕಿ ಠಾಣೆಯೊಳಗೆ ನಡೆದ ಮಾತಿನ ಸಮರದ ಒಂದು ವಿಡಿಯೋವನ್ನು ವೈರಲ್ ಮಾಡಲಾಗಿದೆ. ವಕೀಲರಿಗೆ ನಿಂದಿಸಿದ ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ನ್ಯಾಯವಾದಿಗಳು ಠಾಣೆ ಎದುರು ಧರಣಿ ನಡೆಸಿದ ಮರು ದಿನವೇ ಈ ವಿಡಿಯೋ ಸಂಚಲನ ಮೂಡಿಸಿದೆ.

ಸೌಮ್ಯ ಹಿರೇಮಠ ಅವರು ವಕೀಲರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ವಕೀಲರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದರು. ಠಾಣೆಯ ಎದುರು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದರು. ಸ್ಥಳಕ್ಕೆ ಡಿವೈ ಎಸ್ ಪಿ ವೆಂಕಟಪ್ಪ ನಾಯಕ ಅವರು ಆಗಮಿಸಿ ದೂರು ಸ್ವೀಕರಿಸಿ ಕೋರ್ಟ್ ಗೆ ಸಲ್ಲಿಸುವುದಾಗಿ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next