Advertisement

ಇಂದಿರಾ ಕ್ಯಾಂಟೀನ್‌ ಸುತ್ತ ಮುತ್ತ ಸ್ವಚ್ಛತೆ ಮಾಯ

01:40 PM Dec 14, 2019 | Naveen |

ಸಿಂಧನೂರು: ನಗರದ ಬಸ್‌ ನಿಲ್ದಾಣ ಮುಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್‌ ಅಕ್ಕಪಕ್ಕ ಸ್ವತ್ಛತೆ ಇಲ್ಲದ್ದರಿಂದ ಮತ್ತು ಕೊಳಚೆ ನೀರು ನಿಂತು ದುರ್ವಾಸನೆ ಹರಡಿದ್ದು, ಇಂತಹ ವಾತಾವರಣದಲ್ಲೇ ಜನರು ಊಟ, ಉಪಹಾರ ಸೇವಿಸುವಂತಾಗಿದೆ.

Advertisement

ಕಾಂಗ್ರೆಸ್‌ ಸರಕಾರದಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ ಜನತೆಗೆ ಕಡಿಮೆ ದರದಲ್ಲಿ ಊಟ, ಉಪಹಾರ ಒದಗಿಸಲು ಇಂದಿರಾ ಕ್ಯಾಂಟೀನ್‌ ಯೋಜನೆ ಪ್ರಾರಂಭಿಸಿದರು. ನಗರದ ಬಸ್‌ ನಿಲ್ದಾಣದ ಎದುರು ಇಂದಿರಾ ಕ್ಯಾಂಟೀನ್‌ ಆರಂಭವಾಗಿದೆ. ಇಂದಿರಾ ಕ್ಯಾಂಟೀನ್‌ ಮುಖ್ಯ ದ್ವಾರ ಹಾಗೂ ಸುತ್ತಮುತ್ತ ಸ್ವಚ್ಛತೆ ಇಲ್ಲದಂತಾಗಿದೆ.

ಚರಂಡಿಯಲ್ಲಿ ಹೂಳು ತುಂಬಿ ದುರ್ವಾಸನೆ ಹರಡಿದೆ. ಸುತ್ತಲೂ ಕೊಳಚೆ ನೀರು ನಿಂತು ಹಂದಿ-ನಾಯಿಗಳ ವಾಸಸ್ಥಾನವಾಗಿದೆ. ಇಂತಹ ಅನಾರೋಗ್ಯಕರ ವಾತಾವರಣದ ಮಧ್ಯೆಯೇ ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರು ಕ್ಯಾಂಟೀನ್‌ನಲ್ಲಿ ಊಟ, ಉಪಹಾರ ಸೇವಿಸಬೇಕಿದೆ.

ಅನಾರೋಗ್ಯಕರ ವಾತಾವರಣ: ಸಿಂಧನೂರು ತಾಲೂಕು ಸೇರಿ ವಿವಿಧ ಪಟ್ಟಣ, ಗ್ರಾಮಗಳಿಂದ ಪಟ್ಟಣಕ್ಕೆ ನಿತ್ಯ ಸಾವಿರಾರು ಜನ ಕೆಲಸ-ಕಾರ್ಯಗಳಿಗೆ ಆಗಮಿಸುತ್ತಾರೆ. ಇಲ್ಲಿಗೆ ಬಂದವರು ಬಸ್‌ ನಿಲ್ದಾಣ ಎದುರಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕಡಿಮೆ ದರದಲ್ಲಿ ಊಟ ಮಾಡಲು ತೆರಳಿದರೆ ಸುತ್ತಲಿನ ಅನಾರೋಗ್ಯಕರ ವಾತಾವರಣ, ದುರ್ವಾಸನೆಗೆ ಬೇಸತ್ತು ಊಟ ಮಾಡಲು ಹಿಂದೇಟು
ಹಾಕುವಂತಾಗಿದೆ.

ಸಾಲುತ್ತಿಲ್ಲ ಟೋಕನ್‌: ಇಂದಿರಾ ಕ್ಯಾಂಟೀನ್‌ ನಲ್ಲಿ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿ ಸುಮಾರು 1500 ಜನರಿಗೆ ಟೋಕನ್‌ ವ್ಯವಸ್ಥೆ ಇದೆ. ಸಿಂಧನೂರು ದೊಡ್ಡ ನಗರವಾಗಿದ್ದು, ಸಾವಿರಾರು ಜನ ನಿತ್ಯ ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಹೀಗಾಗಿ 1500 ಟೋಕನ್‌ ಸಾಲುತ್ತಿಲ್ಲ. ಇನ್ನೊಂದು ಇಂದಿರಾ
ಕ್ಯಾಂಟೀನ್‌ ಆರಂಭಿಸಲು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.

Advertisement

ನಗರಸಭೆಗೆ ಛೀಮಾರಿ: ನಗರದ ಇಂದಿರಾ ಕ್ಯಾಂಟೀನ್‌ ಸುತ್ತಮುತ್ತ ಮತ್ತು ನಗರದ ಪ್ರಮುಖ ರಸ್ತೆ, ಬಡಾವಣೆ, ಓಣಿಗಳಲ್ಲಿ ಸ್ವಚ್ಛತೆ
ಕಾಪಾಡುವಲ್ಲಿ ನಗರಸಭೆ ವಿಫಲವಾಗಿದ್ದು, ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ. ಇನ್ನಾದರೂ ನಗರಸಭೆ ಅಧಿಕಾರಿಗಳು ನಗರದ ಇಂದಿರಾ ಕ್ಯಾಂಟೀನ್‌ ಸುತ್ತಮುತ್ತ ಮತ್ತು ನಗರದಲ್ಲಿ ಸ್ವಚ್ಛತೆ ಕಾಪಾಡಲು ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾ

ಇಂದಿರಾ ಕ್ಯಾಂಟೀನ್‌ ಸುತ್ತಮುತ್ತ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು. ಸಿಬ್ಬಂದಿಗೆ ತಿಳಿಸಿ ತ್ಯಾಜ್ಯ ವಿಲೇವಾರಿ ಮಾಡಲು ಸೂಚಿಸುವೆ.
ಆರ್‌. ವಿರೂಪಾಕ್ಷ ಮೂರ್ತಿ,
ನಗರಸಭೆ ಪೌರಾಯುಕ

ಕಡಿಮೆ ದರದಲ್ಲಿ ಊಟ ಸಿಗುತ್ತದೆ ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್‌ ಗೆ ಬರುತ್ತೇವೆ. ಇಲ್ಲಿನ ಅಸಹನೀಯ ದುರ್ವಾಸನೆಗೆ ಒಮ್ಮೊಮ್ಮೆ ಮೂಗು ಮುಚ್ಚಿಕೊಂಡು ಊಟ ಮಾಡಬೇಕಿದೆ. ಸಂಬಂಧಿಸಿದವರು ಕ್ಯಾಂಟೀನ್‌ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಮುಂದಾಗಬೇಕು.
ಹೆಸರು ಹೇಳಲಿಚ್ಛಿಸದ ಕಾಲೇಜು ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next