ಸಿಂಧನೂರು: ರಾಯಚೂರು ರಸ್ತೆಯಲ್ಲಿನ ಹಿರೇಹಳ್ಳದ ಫುಟ್‌ಪಾತ್ ಕುಸಿದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗಿತ್ತು. ಕೊನೆಗೂ ಅಧಿಕಾರಿಗಳು ಸೇತುವೆಯ ಫುಟ್‌ಪಾತ್ ದುರಸ್ತಿಗೆ ಮುಂದಾಗಿದ್ದಾರೆ.
ಉದಯವಾಣಿ ಫಲಶ್ರುತಿ: ಈ ಕುರಿತು ಉದಯವಾಣಿ ಡಿ.13ರ ಸಂಚಿಕೆಯಲ್ಲಿ “ಹಳ್ಳ ಹಿಡಿದ ಹಿರೇಹಳ್ಳ ಸೇತುವೆ ಫುಟ್‌ಪಾತ್’ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು, ಶಾಸಕರು ಎಚ್ಚೆತ್ತು ಸೇತುವೆ ದುರಸ್ತಿಗೆ ಮುಂದಾಗಿದ್ದಾರೆ.
ಶಾಸಕರ ಸೂಚನೆ ಮೇರೆಗೆ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೆಎಸ್‌ಐಪಿ ಯೋಜನೆ ಅನುದಾನದಲ್ಲಿ ರಸ್ತೆ ಕಾಮಗಾರಿ ಮಾಡುವ ವೇಳೆ ಹಿರೇಹಳ್ಳದ ಸೇತುವೆ ಫುಟ್‌ಪಾತ್‌ನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ. ಅಲ್ಲದೇ ಹಳ್ಳದ ದಂಡೆಯಲ್ಲಿದ್ದ ತ್ಯಾಜ್ಯ ತೆರವುಗೊಳಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ.
ಪಾದಚಾರಿಗಳಿಗೆ ಯಾವುದೆ ರೀತಿಯಲ್ಲಿ ತೊಂದರೆಯಾಗದಂತೆ
ಹಿರೇಹಳ್ಳ ಸೇತುವೆ ಫುಟ್‌ಪಾತ್ ದುರಸ್ತಿಗೊಳಿಸಲಾಗಿದೆ ಎಂದು ರಾಜ್ಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿ ವಿಜಯ ಪಾಟೀಲ ತಿಳಿಸಿದ್ದಾರೆ.