Advertisement

ಬಿಸಿಲ ಝಳಕ್ಕೆ ಜನ ಹೈರಾಣು

11:14 AM Apr 12, 2019 | Naveen |

ಸಿಂಧನೂರು: ತಾಲೂಕಿನಲ್ಲಿ ಬಿಸಿಲ ಧಗೆಗೆ ಹೈರಾಣಾದ ಸಾರ್ವಜನಿಕರು ಬಿಸಿಲಿನಿಂದ ಪಾರಾಗಲು ಹರಸಾಹಸ ಪಡುವಂತಾಗಿದೆ. ಕಳೆದೊಂದು ತಿಂಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಇರುವುದರಿಂದ ಸಾರ್ವಜನಿಕರು
ತಂಪಾದ ಪಾನೀಯಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ.

Advertisement

ಹೆಚ್ಚಿದ ತಾಪ: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಇದು ಸಾರ್ವಜನಿಕರಿಗಷ್ಟೇ ಅಲ್ಲ ಚುನಾವಣೆ ಪ್ರಚಾರಕ್ಕೂ ಕೂಡ ಬಿಸಿಲಿನ ತಾಪ
ತಟ್ಟಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ನಾನಾ ಕಸರತ್ತು ನಡೆಸುತ್ತಿದ್ದು, ರಣ ಬಿಸಿಲಿನಿಂದ ಜನತೆ ಹೈರಾಣಾಗಿರುವುದಂತೂ ಸತ್ಯ.

ತತ್ತರಿಸಿದ ಜನ: ತಾಲೂಕಿನಲ್ಲಿ ಕಳೆದ ವರ್ಷ 39-40 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಆದರೆ ಈ ಬಾರಿ ಏಪ್ರಿಲ್‌ ಮೊದಲ ವಾರದಲ್ಲಿಯೇ 40-41 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಟಿದೆ. ಭೂಮಿಯ ಬಿಸಿಲಿನ ತಾಪಕ್ಕೆ ಜನತೆಯೂ ತತ್ತರಿಸುವಂತಾಗಿದೆ. ಬಿಸಿಲಿನ ತಾಪ ಹೆಚ್ಚಿರುವುದರಿಂದ ಜನತೆ ಜನತೆ 12 ಗಂಟೆಯೊಳಗೆ ಕೆಲಸ-ಕಾರ್ಯಗಳನ್ನು ಮುಗಿಸಿ ಮನೆ ಸೇರುತ್ತಿರುವುದು ಕಂಡು
ಬರುತ್ತಿದೆ. ಇನ್ನೂ ಬೇಸಿಗೆ ತರಬೇತಿಗೆ ತೆರಳುವ ಶಾಲಾ ವಿದ್ಯಾರ್ಥಿಗಳು ಕೋಚಿಂಗ್‌ ಕ್ಲಾಸ್‌ ಹೋಗುವುದಕ್ಕೆ ಹಿಂಜರಿಯುತ್ತಿರುವುದು ಕಂಡುಬರುತ್ತಿದೆ.

ಜನತೆ ದಣಿವಾರಿಸಕೊಳ್ಳಲು ಕಲ್ಲಂಗಡಿ, ಜ್ಯೂಸ್‌, ಸೋಡಾ, ಕಬ್ಬಿನ ಹಾಲು ಮಾರಾಟದ ಅಂಗಡಿಗಳಿಗೆ ಮುಗಿಬಿದ್ದಿರುವುದು ಸಿಂಧನೂರಲ್ಲಿ ಕಂಡುಬರುತ್ತದೆ. ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ  ವೃತ್ತ, ಕಿತ್ತೂರು ರಾಣಿ
ಚನ್ನಮ್ಮ ವೃತ್ತ, ಅಂಬೇಡ್ಕರ್‌ ವೃತ್ತ ಮತ್ತಿತರ ಪ್ರಮುಖ ಬೀದಿಗಳಲ್ಲಿ ಕಲ್ಲಂಗಡಿ ಹಣ್ಣಿನ ಅಂಗಡಿ ಜನರನ್ನು ಸೆಳೆಯುತ್ತಿದೆ. ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಜನರು ಕಲ್ಲಂಗಡಿ ಹಣ್ಣು ತಿಂದು ದಣಿವಾರಿಸಿಕೊಳ್ಳುವುದು ಒಂದೆಡೆ
ಯಾದರೆ 42 ಡಿಗ್ರಿ ಸೆಲ್ಸಿಯಸ್‌ ಬಿಸಿಲು ಹೆಚ್ಚುತ್ತಿರುವುದರಿಂದ ತಂಪು ಪಾನೀಯಗಳತ್ತ ಜನರು ಮುಗಿ ಬೀಳುವ ದೃಶ್ಯಗಳು ಸಾಮಾನ್ಯವಾಗಿವೆ.

ಕಳೆದ ವರ್ಷಕ್ಕಿಂತ ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ.
ರಸ್ತೆ ಬದಿಯಲ್ಲಿ ಗಿಡ-ಮರಗಳು ಇಲ್ಲದಿರುವುದು ಬಿಸಿಲಿನ ತಾಪ
ಹೆಚ್ಚಾಗಲು ಕಾರಣವಾಗಿದೆ. ಹಾಗಾಗಿ ಜನ ತಂಪು ಪಾನೀಯಗಳ ಮೊರೆ
ಹೋಗುವುದು ಅನಿವಾರ್ಯವಾಗಿದೆ.
.ಶಿವನಗೌಡ,
ಪಿಡಬ್ಲೂಡಿ ಕ್ಯಾಂಪ್‌, ಸಿಂಧನೂರು

Advertisement

ಕಳೆದ ಬಾರಿಗಿಂತ ಈ ವರ್ಷ ಕಲ್ಲಂಗಡಿ ಹಣ್ಣಿನ ವ್ಯಾಪಾರ ಚೆನ್ನಾಗಿದೆ. ಆದರೆ ಬಿಸಿಲಿನ ತಾಪಕ್ಕೆ ನಮಗೂ ನಿಂತುಕೊಳ್ಳಲು ಆಗುತ್ತಿಲ್ಲ.
.ಹುಸೇನಿ, ವ್ಯಾಪಾರಿ

„ಶೇಖರ ಯರದಿಹಾಳ

Advertisement

Udayavani is now on Telegram. Click here to join our channel and stay updated with the latest news.

Next