Advertisement

ಕುಡಿವ ನೀರಿನ ಕಾಮಗಾರಿ ವಿಳಂಬ-ಅಸಮಾಧಾನ

05:25 PM May 04, 2019 | Naveen |

ಸಿಂಧನೂರು: ತುರ್ವಿಹಾಳ ಪಟ್ಟಣದಲ್ಲಿ ನಡೆದ 24X7 ಕುಡಿಯುವ ನೀರಿನ ಕಾಮಗಾರಿ ವಿಳಂಬವಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಸಸ್ಪೆಂಡ್‌ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡರಿಗೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯಿಸಿದರು.

Advertisement

ತುರ್ವಿಹಾಳ ಪಟ್ಟಣದಲ್ಲಿ ನಡೆದ 24X7 ಕುಡಿಯುವ ನೀರಿನ ಕಾಮಗಾರಿ ಶುಕ್ರವಾರ ವೀಕ್ಷಿಸಿ ಉದಯವಾಣಿಯೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿನ ಯೋಜನೆ ಕೆಲಸ ಬಹಳಷ್ಟು ಬಾಕಿ ಇದೆ. ಈಗಾಗಲೇ ಅವಧಿ ಮುಗಿದರೂ ಸಹ ಕಾಮಗಾರಿ ಪೂರ್ಣಗೊಂಡಿಲ್ಲ. ಮುಖ್ಯ ಕಾಲುವೆ ಮೂಲಕ ಜಾಕ್‌ವೆಲ್ಗಳಿಂದ ಕುಡಿಯುವ ನೀರಿನ ಕೆರೆಗೆ ನೀರು ಸಂಗ್ರಹಣೆ ಮಾಡಬೇಕಾಗಿತ್ತು. ಆದರೆ ಯಾವುದೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜನತೆಗೆ ನೀರಿನ ತೊಂದರೆಯಾಗದಂತೆ ಈ ಎಲ್ಲ ವಿಷಯ ಗಮನದಲ್ಲಿಟ್ಟುಕೊಂಡು ಸಚಿವ ನಾಡಗೌಡರು ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ವಾರ್ಡಿನ ಸದಸ್ಯರೊಂದಿಗೆ ಚರ್ಚಿಸಿ ನೀರಿನ ಸಮಸ್ಯೆಯಾಗದಂತೆ ಕಾಳಜಿ ವಹಿಸಿದರೆ ಒಳ್ಳೆಯದು ಎಂದರು.

ಜೂನ್‌ ಮೊದಲ ವಾರದಲ್ಲಿ ಎಲ್ಲ ವಾರ್ಡ್‌ ಗಳಿಗೆ 24X7 ಕುಡಿಯುವ ನೀರು ಸರಬರಾಜು ಮಾಡುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರೆ ಇನ್ನೂ ಕೆಲಸ ಬಾಕಿ ಇದೆ. ಒಂದು ತಿಂಗಳೊಳಗೆ ಹೇಗೆ ಕೆಲಸ ಮುಗಿಸುತ್ತಾರೆ. ಸುಳ್ಳು ಹೇಳಿ ಜಾರಿಕೊಳ್ಳುವಂತಹ ಅಧಿಕಾರಿಗಳು ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರ ಹಾಗೂ ನಾನಾ ಗ್ರಾಮಗಳಲ್ಲಿ ಉಳಿದಿರುವ ಹಾಗೂ ಮುಗಿದಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.

Advertisement

ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಶೇಖರಪ್ಪ ಗಿಣಿವಾರ, ಮುರ್ತೂಜಾ ಸಾಬ, ಮುನೀರ ಪಾಷಾ, ಮಾಜಿ ಸದಸ್ಯ ಪ್ರಭುರಾಜ, ಛತ್ರಪ್ಪ ಕುರುಕುಂದಿ, ಯುಜಿಡಿ ಇಲಾಖೆ ಅಧಿಕಾರಿ ಗಿರೀಶ ನಾಯಕ, 24X7 ಗುತ್ತೇದಾರ ದಿವಾಕರ, ಗಿರಿರಾಜ, ಜೆ.ಇ. ಶಾಂತು, ಶೇಖರಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next