ಸಿಂದಗಿ: ಕನ್ನಡದ ಖ್ಯಾತ ಸಾಹಿತಿ, ಸಂಶೋಧಕ, ಸಾಂಸ್ಕೃತಿಕ ಲೋಕದ ರತ್ನ ಡಾ| ಎಂ.ಚಿದಾನಂದ ಮೂರ್ತಿ ನಮ್ಮನ್ನಗಲಿದ್ದು ಕನ್ನಡ ಸ್ವಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಾರಂಗಮಠ-ಗಚ್ಚಿನಮಠದ ಡಾ| ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಪದಗಳು ಒಂದೇ ಎನ್ನುವುದು ಮತ್ತು ವಚನ ಸಾಹಿತ್ಯ ಸಂಶೋಧನೆ ಲೇಖನಗಳಲ್ಲಿ ಸಮರ್ಪಕವಾಗಿ ಬಿಂಬಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ, ಸ್ಥಾನಮಾನ ಸಿಗಲು ಕಾರಣರಾಗಿದ್ದರು. ಹೀಗೆ ತಮ್ಮ ಇಳಿ ವಯಸ್ಸಿಯನಲ್ಲೂ ಕ್ರೀಯಾಶೀಲ, ಸೃಜನಾತ್ಮಕ, ಸಾಹಿತ್ಯ ಸಂಶೋಧನಾ ಕಾರ್ಯಗಳಲ್ಲಿ ನಿರಂತರವಾಗಿ ಮಾತನಾಡುತ್ತಿದ್ದು
ಶ್ಲಾಘನೀಯ ಸಂಗತಿಯಾಗಿದೆ.
ಭಗವಂತನು ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಡಾ| ಚನ್ನಪ್ಪ ಕಟ್ಟಿ ಮಾತನಾಡಿ, ಕನ್ನಡ ನೆಲ, ಜಲ, ಭಾಷೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಾಹಿತ್ಯ ಋಷಿ ಮತ್ತು ಸಂಶೋಧಕರಲ್ಲಿಯೇ ಸಂಶೋಧಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಹುಟ್ಟಿಗೆ ಕಾರಣರಾದವರು. ಅವರು ನಮ್ಮನ್ನಗಲಿದ್ದು ಸಾಹಿತ್ಯ ಲೋಕದ ಕೊಂಡಿ ಕಳಚಿದಂತಾಗಿದೆ. ಅವರ ವಿಚಾರಧಾರೆಗಳನ್ನು ನಾವೆಲ್ಲರೂ ಪರಿಪಾಲಿಸೋಣ ಎಂದರು.
ಹಿರಿಯ ಸಂಶೊಧಕ ಡಾ| ಎಂ.ಎಂ. ಪಡಶೆಟ್ಟಿ, ಎಂ.ಎಸ್. ಹೈಯಾಳಕರ, ವಿ.ಡಿ. ವಸ್ತ್ರದ, ಅಶೋಕ ವಾರದ, ಡಾ| ಎಂ.ವಿ. ಗಣಾಚಾರಿ, ಡಾ| ವಿ.ವಿ. ಸಾಲಿಮಠ, ಬಿ.ಎಂ. ಗೋಟಕಿಂಡಿಮಠ, ಪ್ರಾಚಾರ್ಯ ಆರ್.ಎಸ್. ಭೂಶೆಟ್ಟಿ, ಎಸ್.ಸಿ. ಸಣ್ಣಳ್ಳಿ, ಪಿ.ವಿ. ಮಹಲಿನಮಠ, ಡಾ| ನಾಗರಾಜ ಮುರಗೋಡ, ಆರ್.ಎಂ. ಪಾಟೀಲ, ಬಸಯ್ಯ ಗೋಲಗೇರಿಮಠ, ಎಸ್.ಬಿ. ಗೌಡಪ್ಪಗೌಡರ, ವಿ.ಡಿ. ಪಾಟೀಲ, ವಿ.ವಿ. ಜಿರ್ಲಿ, ಬಿ.ಬಿ. ಜಮಾದಾರ, ಸಂಗಮೇಶ ಚಾವರ, ಎನ್.ಎಂ. ಶೆಳ್ಳಗಿ, ಎನ್.ಎನ್. ಕುಂದಗೋಳ, ವಿ.ಪಿ. ನಂದಿಕೋಲ ಸೇರಿದಂತೆ ಇನ್ನಿತರು ಇದ್ದರು.