ಸಿಂದಗಿ: ಭಾರತ ಸೇವಾದಳ ಶಿಕ್ಷಕರು ಸೃಜನಶೀಲವಾಗಿ ಕಾರ್ಯ ನಿರ್ವಹಿಸಿದರೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ನಗನೂರ ಹೇಳಿದರು.
ಶುಕ್ರವಾರ ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತೀಯ ಸೇವಾದಳ ತಾಲೂಕು ಶಾಖೆ ಹಮ್ಮಿಕೊಂಡಿದ್ದ ಶಿಕ್ಷಕರ ಮಿಲಾಪ ಪುನಶ್ಚೇತನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಲ್ಲಿ ಮಾನವೀಯ ಮೌಲ್ಯ, ಸಹನೆ, ಸೇವೆ, ತಾಳ್ಮೆಯಂಥ ಸದ್ಗುಣಗಳನ್ನು ತುಂಬಬೇಕು. ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ ಮಹತ್ತರ ಕಾರ್ಯ ಸೇವಾದಳ ಮಾಡುತ್ತಿರುವುದು ಶ್ಲಾಘನೀಯ. ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಉತ್ತಮ ಶಿಕ್ಷಕ ಮಾತ್ರ ಸದೃಢ ರಾಷ್ಟ್ರ ಕಟ್ಟಲು ಸಾಧ್ಯ. ಶಿಕ್ಷಕರು ಆತ್ಮ ಸಾಕ್ಷಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ಚೌದ್ರಿ ಮಾತನಾಡಿ, ಮಕ್ಕಳ ಸೇವಾ ಕಾರ್ಯ ವಿಸ್ತರಿಸಲು ಶಿಬಿರ ಹಮ್ಮಿಕೊಳ್ಳಬೇಕು ಎಂದರು. ಭಾರತೀಯ ಸೇವಾದಳದ ಜಿಲ್ಲಾ ಸಂಘಟಕ ನಾಗೇಶ ಡೋಣೂರ ಪ್ರಾಸ್ತಾವಿಕ ಮಾತನಾಡಿ, ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ನಾಡಗೀತೆ, ರಾಷ್ಟ್ರಗೀತೆ ಗೊತ್ತಿಲ್ಲ ಎನ್ನುವುದು ಅತ್ಯಂತ ವಿಷಾದಕರ ಸಂಗತಿ. ಶಿಕ್ಷಕರು ಮೊದಲಿಗೆ ನಾಡಗೀತೆ, ರಾಷ್ಟ್ರಗೀತೆ ಮನನ ಮಾಡಿಕೊಳ್ಳಬೇಕು. ಮಕ್ಕಳಿಗೆ ಹೇಳಿ ಕೊಡಬೇಕು ಎಂದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸಿ.ಬಿ. ಗಡಗಿ, ಮುಖ್ಯಗುರು ಆರ್.ಆರ್. ನಿಂಬಾಳ ವೇದಿಕೆಯಲ್ಲಿದ್ದರು.
ಭಾರತೀಯ ಸೇವಾದಳದ ಶಾಖಾ ನಾಯಕರಾದ ಟಿ.ಎನ್. ಕವಾಳೆ, ಸಿದ್ದಮ್ಮ ಕುಂಬಾರ, ಮಂಜುನಾಥ ಕುಂಬಾರ, ಚಿದಾನಂದ ಯಾತನೂರ, ಎಂ.ಎಸ್. ಡಂಬಳ, ಎಸ್.ಟಿ. ಬೇತ, ಎ.ಎಸ್. ಬಸಣ್ಣವರ, ಸಿ.ಬಿ. ಚೌರ, ಆರ್.ಎಸ್. ಭಜಂತ್ರಿ, ಎಸ್.ಜಿ. ಕುಲಕರ್ಣಿ, ಎಂ.ವಿ. ದೇಶಪಾಂಡೆ, ವೈ.ಕೆ. ಬಶೆಟ್ಟಿ, ಎನ್.ಜಿ. ಸಿಂಗೆ, ಬಿ.ಎಸ್. ಬಗಲಿ, ಜೆ.ಡಿ. ನಾಡಗೌಡ, ಎಸ್.ಪಿ. ಇಂಗಳೇಶ್ವರ, ಜೆ.ಎಸ್. ಸಾಲಿ, ಆರ್.ಎಸ್. ಬಿರಾದಾರ, ಎಸ್.ಕೆ. ಮಿಂಚನಾಳ, ಎಸ್.ಆರ್. ಪಾಟೀಲ, ಎಸ್.ಡಿ. ಕುಂಬಾರ, ಜಯಶ್ರೀ ನಾಯಕ, ಎಸ್.ಕೆ. ಮೂರಚೋರ, ಪಿ.ಎಂ. ಕಾಸರ, ಎಂ.ಐ. ಗುಡಿಮನಿ, ಮಂಜುಳಾ ಪೂಜಾರಿ, ಎಸ್.ಎನ್. ಮೇಲಿನಮನಿ, ಜಿ.ಬಿ. ಹತ್ತಿ, ಎಸ್.ವೈ. ಯಲಗೋಡ, ಎಸ್.ಎನ್.ಬಡಿಗೇರ, ಬಿ.ಎಸ್. ರುಕುಂಪುರ, ವಿ.ಎಸ್. ಹತ್ತಿಕಾಳ, ಎಸ್.ಎಂ. ಹಿಪ್ಪರಗಿ, ಎಂ.ಕೆ. ಬಿರಾದಾರ, ಪಿ.ಬಿ. ಕುಂಟೋಜಿ, ವಿ.ಎಂ. ಚೌಧರಿ ಇದ್ದರು.
ಎಸ್.ಡಿ. ಕುಂಬಾರ ಸ್ವಾಗತಿಸಿದರು. ಹೊನ್ನಮ್ಮ ಹಿರೇಮಠ ನಿರೂಪಿಸಿದರು. ಎಂ.ಐ. ಹಾವಿನಾಳ ವಂದಿಸಿದರು.