Advertisement

ಮಾರಾಟವಾಗದಿರಲಿ ಶಾಲೆ ಅನುಮತಿ ಪತ್ರ

11:27 AM Apr 10, 2019 | |

ಸಿಂದಗಿ: ಮಕ್ಕಳ ಹಕ್ಕುಗಳು ಪ್ರಚಲಿತದಲ್ಲಿ ಬರಲು ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಹಕ್ಕುಗಳಲ್ಲಿ ಶಿಕ್ಷಣವು ಒಂದಾಗಿದೆ. ಶಿಕ್ಷಣ ನೀಡುವಲ್ಲಿ ಸರಕಾರದಷ್ಟೇ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ.

Advertisement

ಖಾಸಗಿ ಸಂಘ-ಸಂಸ್ಥೆಗಳು ಅನುದಾನ ರಹಿತವಾಗಿ ಪ್ರಾಥಮಿಕ, ಪ್ರೌಢ ಹಾಗೂ ಪಪೂ ಕಾಲೇಜಿನ ಅನುಮತಿ ಪಡೆಯಲು ಮೊದಲು
ಸರಳ ರೀತಿಯಾಗಿತ್ತು. ಮಕ್ಕಳ ಹಕ್ಕುಗಳು ಜಾರಿಗೆ ಬಂದ ಮೇಲೆ ಶಾಲೆಗಳ ಅನುಮತಿ ಪಡೆಯಲು ಕಠಿಣವಾಗಿದೆ.

ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪ್ರಾರಂಭಿಸಲು ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತ ಕಟ್ಟಡವಿರಬೇಕು. ಆಗ ಮಾತ್ರ ಅನುಮತಿ ಪಡೆಯಲು ಸಾಧ್ಯ. ಆದರೆ ಇಂದು ಕೆಲವೊಂದು ಕಡೆಗೆ ನಿಯಮಗಳನ್ನು ಗಾಳಿಗೆ ತೂರಿ ಶಾಲೆ ನಡೆಸಲು ಅನುಮತಿ ನೀಡಲಾಗುತ್ತಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.

ನಿಯಮಗಳನ್ನು ಗಾಳಿಗೆ ತೂರಿ ಹಣಕ್ಕಾಗಿ ಶಾಲೆಗಳನ್ನು ನಡೆಸಲು ಶಿಫಾರಸು ಮತ್ತು ಅನುಮತಿ ನೀಡಿದಲ್ಲಿ ಶಾಲೆ ಅನುಮತಿ ಪತ್ರ ಮಾರಾಟ ಮಾಡಿದಂತಾಗುತ್ತದೆ. ಇದರಿಂದ ಕಲಿಯುವ ಹಂತದಲ್ಲಿ ಮಗು ಮೂಲಭೂತ ಸೌಕರ್ಯಗಳಿಂದ ವಂಚಿತವಾಗುತ್ತದೆ. ಇದರಿಂದ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಶಾಲೆಗಳಿಗೆ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ನಡೆಸಲು ಅನುಮತಿ ನೀಡಿದೆ ಎಂದು ಜಿಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆರೋಪ ಮಾಡಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಿಂದಗಿ ತಾಲೂಕಿನಲ್ಲಿ ಅನುದಾನ ರಹಿತವಾಗಿ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭಿಸಲು 7, ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು 16 ಹಾಗೂ ಪ್ರೌಢ ಶಾಲೆಗಳು ಅನುಮತಿ ಪಡೆಯಲು 3 ಪ್ರಸ್ತಾವನೆಗಳನ್ನು ಸಂಘ-ಸಂಸ್ಥೆ ಮುಖ್ಯಸ್ಥರು ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಾರ್ಯಾಲಯ ಸಿಂದಗಿ ಕಚೇರಿಯಲ್ಲಿ ಸಲ್ಲಿಸಿದ್ದಾರೆ.
ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ಸಲ್ಲಿಸಿದ ಪ್ರಸ್ತಾವನೆಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಪರಿಶೀಲಿಸಬೇಕು. ಅಲ್ಲದೇ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ನಡೆಸಲು ಜಿಲ್ಲಾ ಉಪ ನಿದೇರ್ಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಅವರಿಗೆ ಶಿಫಾರಸು ಮಾಡುವ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಬೇಕು.

Advertisement

ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ, ಸುಸಜ್ಜಿತ ಕಟ್ಟಡ ಸೇರಿದಂತೆ ಮುಂತಾದ ಮೂಲಭೂತ
ಸೌಕರ್ಯಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಶಾಲೆ ನಡೆಸಲು ಅನುಮತಿ ನೀಡಬೇಕು ಎಂದು ಮೇಲಧಿಕಾರಿಗಳಿಗೆ ಶಿಫಾರಸು ಮಾಡಬೇಕು ಎಂಬುದು ಶೈಕ್ಷಣಿಕ ಹಿತಾಸಕ್ತಿಯುಳ್ಳವರ
ಒತ್ತಾಸೆಯಾಗಿದೆ.

ಸಿಂದಗಿ ತಾಲೂಕಿನಲ್ಲಿ ಅನಧಿಕೃತ ವಸತಿ ಶಾಲೆ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ನಡೆಯುತ್ತಿವೆ. ಕೋಚಿಂಗ್‌ ಹೆಸರಿನಲ್ಲಿ
ನಡೆಯುತ್ತಿರುವ ಇಂಥ ಶಾಲೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಂದ್‌ ಮಾಡಬೇಕು. ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ. ಶಿಕ್ಷಣ ನೀತಿ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಸಕ್ತ ವರ್ಷದಲ್ಲಿ ಶಾಲೆ ಅನುಮತಿ ನೀಡಲು ಶಿಫಾರಸು ಮಾಡುವ ವೇಳೆ ಇಲಾಖೆ ನಿಮಯಗಳು
ಮಾನದಂಡವಾಗಿರಲಿ. ಅವ್ಯವಹಾರ ಕಂಡು ಬಂದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ.
ಸಿದ್ದಣ್ಣ ಚೌಧರಿ ಕನ್ನೊಳ್ಳಿ,
ಜೆಡಿಎಸ್‌ ತಾಲೂಕು ವಕ್ತಾರ

ಶಿಕ್ಷಣ ಇಲಾಖೆ ನಿಯಮಾನುಸಾರ ಮೂಲಭೂತ ಸೌಕರ್ಯ, ಸ್ವಂತ ಕಟ್ಟಡ ಹೊಂದಿರುವ ಶಾಲೆಗಳಿಗೆ ಮಾತ್ರ ಪ್ರಸಕ್ತ ವರ್ಷದಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ನಡೆಸಲು ಅನುಮತಿ ನೀಡಬೇಕು ಎಂದು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಯಾವುದೇ ಅವ್ಯವಹಾರಕ್ಕೆ ಆಸ್ಪದ ನೀಡುವುದಿಲ್ಲ.
ಎಚ್‌.ಎಸ್‌. ನಗನೂರ,
ಕ್ಷೇತ್ರ ಶಿಕ್ಷಣಾಧಿಕಾರಿ

ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next