Advertisement

ಕ್ರೀಡೆ ಜೀವನದ ಅವಿಭಾಜ್ಯ ಅಂಗ

04:00 PM Aug 30, 2019 | Naveen |

ಸಿಂದಗಿ: ಭಾರತೀಯ ಕ್ರೀಡೆಗಳ ಉಳುವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಶರಣಬಸವ ಜೋಗೂರ ಹೇಳಿದರು.

Advertisement

ಪಟ್ಟಣದ ಜ.ಪಿ. ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪಾಲಕರು ಕ್ರೀಡೆಗಳ ಬಗ್ಗೆ ತಾತ್ಸಾರ ಮನೋಭಾವಕ್ಕೆ ಜಾರುತ್ತಿದ್ದಾರೆ ಅದು ಸಲ್ಲದು. ಕ್ರೀಡೆ ಮಗುವಿನ ಮಾನಸಿಕ ಮತ್ತು ದೈಹಿಕ ಶಕ್ತಿ ಬೆಳೆಸುತ್ತದೆ. ಕಲಿಕೆಗೂ ಕ್ರೀಡೆಗಳು ಪ್ರೇರಣೆಯಾಗಲಿವೆ. ಕ್ರೀಡೆಯಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಆದರ್ಶವಾಗಿ ಬಳಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆರ್‌.ಎಸ್‌.ಬುಶೆಟ್ಟಿ ಮಾತನಾಡಿ, ಇಂದು ಅನೇಕ ಕ್ರೀಡೆಗಳು ಅಳುವಿನ ಅಂಚಿನಲ್ಲಿವೆ ಅವುಗನ್ನು ಬೆಳೆಸಿ ಪೋಷಿಸುವಲ್ಲಿ ಸರ್ಕಾರಗಳು ಪ್ರಯತ್ನಿಸಬೇಕು. ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲಾ, ರಾಜ್ಯಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಸರ್ಕಾರ ನೌಕರಿಯಲ್ಲಿ ಯೋಗ್ಯ ಮೀಸಲಾತಿಯನ್ನು ಕಲ್ಪಿಸಿ ಕೊಟ್ಟಲ್ಲಿ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲು ಮುಂದಾಗುತ್ತಾರೆ ಎಂದರು.

ದೈಹಿಕ ಶಿಕ್ಷಣ ನಿರ್ದೇಶಕ ರ.ವಿ.ಗೋಲಾ, ಪ್ರೊ| ಡಿ.ಎಂ. ಪಾಟೀಲ ಮತ್ತು ಇತರರು ವೇದಿಕೆ ಮೇಲೆ ಇದ್ದರು. ಪ್ರಾಧ್ಯಾಪಕರಾದ ಎಂ.ಎಚ್. ಲೋಣಿ, ಬಿ.ಎಸ್‌. ಹಿರೇಮಠ, ರವಿ ಲಮಾಣಿ, ಡಾ| ಪ್ರಕಾಶ ಲಮಾಣಿ, ಡಾ| ಶಿವಲಿಂಗಪ್ಪ ಬಂಡಾರಿ, ಡಾ| ಸುಮಾ ನಿರ್ಣಿ, ಡಾ| ಶ್ರೀಧರ ಕಾಂಬಳೆ, ಎಸ್‌.ಬಿ. ಗೌಡಪ್ಪಗೌಡರ, ಡಾ| ಸಂಕಪಾಲ, ಮಹಾಜನಶೆಟ್ಟಿ, ಅರಳಗುಂಡಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next