Advertisement
ಬುಧವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೋರೆಗಾಂವ್ ವಿಜಯದ 202ನೇ ವರ್ಷಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement
ಜಿಪಂ ಸದಸ್ಯ ಬಿ.ಆರ್. ಯಂಟಮನ ಮಾತನಾಡಿ, ಇತಿಹಾಸದಲ್ಲಿ ಮುಚ್ಚಿ ಹೋದ ಸಾಹಸದ ಘಟನೆ. ಮೂವತ್ತು ಸಾವಿರ ಸೈನಿಕರನ್ನು ಕೇವಲ ಐನೂರು ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟ. ಶೋಷಿತರು ಮೇಲ್ಜಾತಿ ಶೋಷಿತರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿದ, ನಡೆಸಿ ಗೆಲುವು. ಅದು ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ಭೀಮಾ ಕೋರೆಗಾಂವ್ ಯುದ್ಧವಾಗಿದೆ. ವಿಜಯಕ್ಕೆ ಕಾರಣರಾದ ಸೈನಿಕರಿಗೆ ಗೌರವಿಸೊಣ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ, ಮೆರವಣಿಗೆ ಚಾಲನೆ ಮಾಡಿದ ಧಾರವಾಡದ ಜಿ.ಆರ್. ಗ್ರೂಪ್‌ನ ಶಿವಾನಂದ ಪಾಟೀಲ ಸೋಮಜಾಳ, ಡಿಎಸ್ಸೆಸ್ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮಯೂರ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಸಂಘಪಾಲ ಭಂತೇಜಿ, ದೇವರಗುಡ್ಡದ ಧರ್ಮದರ್ಶಿ ಡಾ| ಸಂದೀಪ ಪಾಟೀಲ, ಕರ್ನಾಟಕ ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ರಾಜಶೇಖರ ಚೌರ, ತಾಲೂಕಾಧ್ಯಕ್ಷ ಶಿವಾನಂದ ಆಲಮೇಲ, ಕರವೇ ರಾಜ್ಯ ಸಂಚಾಲಕ ಸಂತೋಷ ಪಾಟೀಲ ಡಂಬಳ, ಸ್ಥಳಿಯ ಗಣ್ಯ ವ್ಯಾಪಾರಸ್ಥ ಅಶೋಕ ವಾರದ, ಆದರ್ಶ ಶಿಕ್ಷಕ ಎಂ.ಎಸ್. ಚೌರ, ಬಿಜೆಪಿ ಮುಖಂಡ ಸಿದ್ದು ಬುಳ್ಳಾ, ಈರಫಾನ್ ತಲಕಾರಿ, ಡಾ.ಅನೀಲ ನಾಯಕ, ಬಿಜೆಪಿ ಮಹಿಳಾ ಮುಖಂಡೆ ಸುನಂದಾ ಯಂಪೂರೆ, ಸಾಯಬಣ್ಣ ಪುರದಾಳ, ಪ್ರಧಾನಿ ಮೂಲಿಮನಿ, ಸಿಆರ್‌ಪಿ ಡಿ.ಎಂ. ಮಾವೂರ, ಆನಂದ ತೇರದಾಳ, ಸಂತೋಷ ಭಜಂತ್ರಿ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.
ಅಜೀತ ಚೌರ, ಜೈಭೀಮ ನಾಯ್ಕೋಡಿ, ಸಂತೋಷ ಪೂಜಾರಿ, ಶರಣು ಬ್ಯಾಕ್ಯೋಡ, ಚನ್ನು ಬಳಗಾನೂರ, ಮೋಹನ ಬರಗಾಲ, ರವಿಕಾಂತ ನಡುವಿನಕೇರಿ, ಸಾಯಬಣ್ಣ ದೊಡಮನಿ, ಗೌತಮ ಮೇಟಿ, ಭೀಮು ಹೊಸಮನಿ, ಗೋಲ್ಲಾಳ ಬ್ಯಾಕೋಡ, ಮಹಾವೀರ ಸುಲ್ಪಿ, ಮಂಜು ಬಬಲೇಶ್ವರ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಜಶೇಖರ ಚೌರ ಸ್ವಾಗತಿಸಿದರು. ವಿಜಯಕುಮಾರ ಯಂಟಮಾನ, ಜಗದೀಶ ಸಿಂಗೆ ನಿರೂಪಿಸಿದರು. ಶಿವನಂದ ಆಲಮೇಲ ವಂದಿಸಿದರು.