Advertisement
ಪಟ್ಟಣದ ಓಂಶಾತಿ ನಗರರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜೀವನ ಕಲೆ-ವಚನ ಮಾಲೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ನಮ್ಮ ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಆರೋಗ್ಯವನ್ನು ಸಮತೋಲನದಿಂದ ಇರಲು ರಾಜಯೋಗ ಧ್ಯಾನ ಅಗತ್ಯ. ರಾಜಯೋಗ ಧ್ಯಾನವು ಎಲ್ಲ ಹಿನ್ನೆಲೆಯ ಜನರಿಗೆ ಪ್ರವೇಶಿಸಬಹುದಾದ ಧ್ಯಾನದ ಒಂದು ರೂಪವಾಗಿದೆ. ಇದು ಆಚರಣೆಗಳು ಅಥವಾ ಮಂತ್ರಗಳಿಲ್ಲದ ಧ್ಯಾನವಾಗಿದೆ ಮತ್ತು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಅಭ್ಯಾಸ ಮಾಡಬಹುದು.
ರಾಜ ಯೋಗ ಧ್ಯಾನವನ್ನು ತೆರೆದ ಕಣ್ಣುಗಳಿಂದ ಅಭ್ಯಾಸ ಮಾಡಲಾಗುತ್ತದೆ ಎಂದು ಹೇಳಿದರು. ಅಧ್ಯಾತ್ಮಿಕ ಅರಿವು ನಕಾರಾತ್ಮಕ ಮತ್ತು ವ್ಯರ್ಥವಾದವುಗಳ ಮೇಲೆ ಉತ್ತಮ ಮತ್ತು ಸಕಾರಾತ್ಮಕ ಆಲೋಚನೆಗಳನ್ನು ಆಯ್ಕೆ ಮಾಡುವ ಶಕ್ತಿಯನ್ನು ನಮಗೆ ನೀಡುತ್ತದೆ. ನಾವು ಸಾಮರಸ್ಯದಿಂದ ಬದುಕಲು ಪ್ರಾರಂಭಿಸುತ್ತೇವೆ. ನಾವು ಉತ್ತಮ ಮತ್ತು ಸಂತೋಷದಾಯಕ, ಆರೋಗ್ಯಕರ ಸಂಬಂಧಗಳನ್ನು ಸೃಷ್ಟಿಸುತ್ತೇವೆ ಮತ್ತು ನಮ್ಮ ಜೀವನವನ್ನು ಅತ್ಯಂತ ಸಕಾರಾತ್ಮಕ ರೀತಿಯಲ್ಲಿ ಬದಲಾಯಿಸುತ್ತೇವೆ ಎಂದರು.
ಆಲಮೇಲ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ರೇಣುಕಾ ಮಾತನಾಡಿ, ವಿಶ್ವದ 180ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಯು ವಿಶ್ವಸಂಸ್ಥೆಯ ಸಲಹಾ ಸಮಿತಿ ಅಂಗ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಸ್ಟೇಟ್ ಬ್ಯಾಂಕ್ ಉಪ ಪ್ರಂಬಂಧಕಿ ಅಬುಜಾ ರಾಯದುರ್ಗ, ಅಧ್ಯಕ್ಷತೆ ವಹಿಸಿದ್ದ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶರಣಪ್ಪ ವಾರದ, ಗುತ್ತಿಗೆದಾರ ಭೀಮಣ್ಣ ಸುಣಗಾರ ಮಾತನಾಡಿದರು. ಮಂಜುಳಾ ಸ್ವಾಗತಿಸಿದರು. ಡಾ| ಬಿ.ಜಿ. ಪಾಟೀಲ ನಿರೂಪಿಸಿದರು. ಎಸ್.ಎಸ್. ಬುಳ್ಳಾ ವಂದಿಸಿದರು.