Advertisement

ಸಿಂದಗಿ ಐಸಿಐಸಿಐ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು

12:07 PM Nov 03, 2015 | sudhir |

ವಿಜಯಪುರ : ಎರಡು ತಿಂಗಳ ಹಿಂದೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ್ದ ಸಿಂದಗಿ ಐಸಿಐಸಿಐ ಬ್ಯಾಂಕ್ ಸೆಕ್ಯುರಿಟಿ ಹತ್ಯೆ ಪ್ರಕರಣದಲ್ಲಿ ಜಿಲ್ಲೆಯ ಪೊಲೀಸರು ಕಾನೂನು ಸಂಘರ್ಷಕ್ಕೊಳಗಾಗ ಓರ್ವ ಸೇರಿದಂತೆ ಮೂವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಕಳೆದ ಆಗಸ್ಟ್ 25 ರಂದು ಐಸಿಐಸಿಐ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ರಾಹುಲ್ ಖೀರು ರಾಠೋಡ ಎಂಬವರನ್ನು ಸುತ್ತಿಗೆಯಿಂದ ಹೊಡೆದು, ಕೊಲೆ ಮಾಡಿ ಎಟಿಎಂ ದರೋಡೆಗೆ ಯತ್ನಿಸಲಾಗಿತ್ತು. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಕಿಶೋರ್ ಪುರೋಹಿತ ನೀಡಿದ ದೂರಿನಂತೆ ಸಿಂದಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದೀಗ ಎಸ್ಪಿ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನದಲ್ಲಿ ಸಿಂದಗಿ ಪೊಲೀಸರು ಹತ್ಯೆ ಪ್ರಕರಣ ಬೇಧಿಸಿದ್ದು, ಮೂವರನ್ನು ಕೊಂಡಗೂಳಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಬಂಧಿತರನ್ನು ಸಿಂದಗಿ ತಾಲೂಕ ಬಬಲೇಶ್ವರದ ಅನಿಲ್ ಜಟ್ಟೆಪ್ಪ ಬರಗಾಲ ಉರ್ಫ್ ಹೊಸಮನಿ ಉರ್ಫ್ ದೊಡಮನಿ, ದಯಾನಂದ ಸಿದ್ಧಪ್ಪ ಹೊಸಮನಿ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next