Advertisement

ಜಾಲವಾದದಲ್ಲಿ ಕೋವಿಡ್ ಜಾಗೃತಿ

03:41 PM Apr 27, 2020 | Naveen |

ಸಿಂದಗಿ: ಕೋವಿಡ್ ಸೋಂಕು ನಿವಾರಣೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನಮ್ಮ ಸುತ್ತಲಿನ ವಾತಾವರಣ, ಕುಡಿಯವ ನೀರಿನ ಮೂಲಗಳನ್ನು ಆರೋಗ್ಯ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಪಿಡಿಒ ಜಿ.ಎಂ. ಮ್ಯಾಗೇರಿ ಹೇಳಿದರು.

Advertisement

ಶುಕ್ರವಾರ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಕೋವಿಡ್ ಸೋಂಕಿನ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನತೆ ಮನೆಯಲ್ಲಿದ್ದು ಕೋವಿಡ್ ನಿವಾರಣೆಗೆ ಹೋರಾಡಬೇಕು. ಅಗತ್ಯವಿದ್ದಲ್ಲಿ ಮಾತ್ರ ಹೊರಗೆ ಬರಬೇಕು. ಆಗ ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

ಈ ವೇಳೆ ಗ್ರಾಮದ ಸಾರ್ವಜನಿಕ ಬಾವಿಯಲ್ಲಿನ ನೀರು ಶುದ್ಧೀಕರಿಸಲು ಬ್ಲಿಚಿಂಗ್‌ ಪೌಡರ್‌ ಹಾಕಿಸಿದರು. ಗ್ರಾಪಂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next