Advertisement

120 ಕೆಜಿ ಬೆಳ್ಳಿ ರಥ ಎಳೆದು ಸಂಭ್ರಮಿಸಿದ ಮಹಿಳೆಯರು

03:43 PM Dec 04, 2019 | Naveen |

ಸಿಂದಗಿ: ಪಟ್ಟಣದ ಸಾರಂಗಮಠದ ಲಿಂ| ಚನ್ನವೀರ ಸ್ವಾಮೀಜಿಗಳ 125ನೇ ಜಯಂತಿ ನಿಮಿತ್ತ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವದಲ್ಲಿ 120 ಕೆಜಿ ತೂಕದ ಬೆಳ್ಳಿ ರಥವನ್ನು ಸಾವಿರಾರು ಮಹಿಳೆಯರು ಮಂಗಳವಾರ ಎಳೆದು ಸಂತಸಪಟ್ಟರು.

Advertisement

ಬೆಳ್ಳಿ ರಥೋತ್ಸವಕ್ಕೆ ಕನ್ನೋಳ್ಳಿ ಮರುಳಾರಾದ್ಯ ಶಿವಾಚಾರ್ಯರು ಚಾಲನೆ ನೀಡಿದರು. ಸಾರಂಗಮಠ-ಗಚ್ಚಿನಮಠದ ಡಾ| ಪ್ರಭುಸಾರಂಗದೇವ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ರಥೋತ್ಸವವು ವೇದ ಘೋಷಗಳೊಂದಿಗೆ ಜರುಗಿತು. ಪುರವಂತರ ಸೇವೆ, ಗುಗ್ಗಳ ಸೇವೆಯೊಂದಿಗೆ ಪ್ರಾರಂಭಗೊಂಡ ಪೂಜಾ ಕ್ರಾರ್ಯಕ್ರಮ ಜರುಗಿತು. ಸಾರಂಗಮಠದಿಂದ ಪ್ರಾರಂಭಗೊಂಡ ರಥೋತ್ಸವ ಪಟ್ಟಣದ ಸ್ವಾಮಿ ವೀವೇಕಾನಂದ ವೃತ್ತ, ಹಳೆ ಎಸ್‌ಬಿಐ ಮಾರ್ಗವಾಗಿ ಸ್ಥಳೀಯ ಗಚ್ಚಿನ ಮಠದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದವರೆಗೂ ಸಾಗಿತು. ಮಾರ್ಗ ಮಧ್ಯದಲ್ಲಿ ನೂರಾರು ಮಹಿಳೆಯರು ಭಜನೆ, ಜಯಘೋಷಗಳನ್ನು ಮಾಡುತ್ತ ಭಕ್ತಿ ಪರಾಕಾಷ್ಠೆ ಮೆರೆದರು.

ವೀರಭದ್ರ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ಮುಗಿಸಿ ಅಗ್ನಿ ಪ್ರವೇಶವನ್ನು ಮಾಡಿದರು. ನಂತರ ಅದೇ ಮಾರ್ಗವಾಗಿ ಶ್ರೀಮಠಕ್ಕೆ ಬೆಳ್ಳಿ ರಥೋತ್ಸವ ಸಾಗಿತು. ರಥೋತ್ಸವದಲ್ಲಿ ಉಡುಪಿ ಜಿಲ್ಲೆಯ ಮಲ್ಪೆಯ ಸ್ಕಂದ ಚೆಂಡೆ ಬಳಗದ ಕಲಾವಿದರಿಂದ ಮಹಿಳಾ ಯಕ್ಷಗಾನ ಹಾಗೂ ಮಹಿಳಾ ಡೋಲು ಕುಣಿತ ಜನಾಕರ್ಷಣೆಗೊಂಡಿತು.

ಸ್ಥಳೀಯ ಸಾರಂಗಮಠದ ವಿರಭದ್ರೇಶ್ವರ ಮತ್ತು ಭದ್ರ ಕಾಳಿ ಜಾತ್ರಾ ಕಾರ್ಯಕ್ರಮದಲ್ಲಿ ಕಲಕೇರಿಯ ಮಡಿವಾಳೇಶ್ವರ ಶ್ರೀಗಳು, ಕೊಣ್ಣೂರಿನ ಡಾ| ವಿಶ್ವಪ್ರಭುದೇವ ಶ್ರೀಗಳು, ಕನ್ನೋಳ್ಳಿ ಸಿದ್ದಲಿಂಗ ಶ್ರೀಗಳು ಸೇರಿದಂತೆ ನಾಡಿನ ಅನೇಕ ಮಠಗಳ ಹರಗುರು ಚರಮೂರ್ತಿಗಳು, ಅಶೋಕ ಮನಗೂಳಿ, ಉಮೇಶ ಜೋಗೂರ, ಸೋಮನಗೌಡ ಬಿರಾದಾರ, ಅಶೋಕ ವಾರದ, ಗಂಗಾಧರ ಜೋಗೂರ, ಅಶೋಕ ಮಸಳಿ, ಮುತ್ತು ಮುಂಡೇವಾಡಗಿ, ವಿಶ್ವನಾಥ ಜೋಗೂರ, ಸಿ.ಎಂ.ಪೂಜಾರಿ, ದಯಾನಂದ ಬಿರಾದಾರ, ಡಾ| ಶರಣಬಸವ ಜೋಗೂರ, ಚಂದ್ರಶೇಖರ ಕಿಣಗಿ, ಚಂದ್ರಕಾಂತ ಬಮ್ಮಣ್ಣಿ, ಮಲ್ಲಿಕಾರ್ಜುನ ಬಮ್ಮಣ್ಣಿ, ಸಿ.ಡಿ. ಜೋಗೂರ, ಡಾ| ಬಾಹುಬಲಿ ಒಣಕುದರಿ, ಗುರುಶಾಂತಯ್ಯ ಜಂಗಿಮನಠ, ಎಸ್‌.ಎಂ. ಬಿರಾದಾರ, ಶಿವಮಾಂತ ಪೂಜಾರಿ, ಡಾ| ಅಂಬರೀಶ ಬಿರಾದಾರ, ಪ್ರಭು ಜಂಗಿನಮಠ, ಚನ್ನು ಕತ್ತಿ, ಸಿದ್ದಲಿಂಗ ಕಿಣಗಿ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next