Advertisement

ಸಿಂದಗಿ ಉಪ ಕದನ: ಶೇ.69.41 ಮತದಾನ

10:48 AM Oct 31, 2021 | Shwetha M |

ಸಿಂದಗಿ: ಸಿಂದಗಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಶನಿವಾರ ಶೇ.69.41 ಮತದಾನವಾಗಿದೆ. ಕೆಲವೆಡೆ ಮತಯಂತ್ರದ ತಾಂತ್ರಿಕ ಲೋಪ ಕಂಡು ಬಂದ ಹಿನ್ನೆಲೆ ಚುನಾವಣಾ ಅಧಿ ಕಾರಿಗಳು ತ್ವರಿತವಾಗಿ ಸಮಸ್ಯೆ ಬಗೆಹರಿಸಿದ್ದು, ಎಲ್ಲೆಡೆ ಶಾಂತರೀತಿಯ ಮತದಾನವಾಗಿದೆ.

Advertisement

ಕ್ಷೇತ್ರದ ಮತದಾರ ಗುಟ್ಟು ಬಿಟ್ಟು ಕೊಡದೇ ತನ್ನ ಹಕ್ಕು ಚಲಾಯಿಸಿದ್ದು, ಕ್ಷೇತ್ರದ ಶಾಸಕ ಯಾರು ಎಂಬ ಷರಾ ಮತಯಂತ್ರದಲ್ಲಿ ಭದ್ರವಾಗಿದೆ. ಜೆಡಿಎಸ್‌ ಶಾಸಕರಾಗಿದ್ದ ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ ನಿಧನದ ಹಿನ್ನೆಲೆ ಉಪಚುನಾವಣೆ ನಡೆದಿದೆ. ಶನಿವಾರ ಬೆಳಗ್ಗೆ ನೀರಸ ಹಾಗೂ ಮಂದಗತಿಯಲ್ಲಿ ಸಾಗಿದ್ದ ಮತದಾನ ಮಧ್ಯಾಹ್ನ ವೇಳೆಗೆ ಬಿರುಸು ಪಡೆಯಿತು.

ಮತದಾನ ಆರಂಭಕ್ಕೆ ಮುನ್ನವೇ ಆಲಮೇಲ ಪಟ್ಟಣದ ಮತಗಟ್ಟೆಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ ಸಂಬಂಧಿ ಪದ್ಮಾವತಿ ಎಂಬುವರು ಮತಗಟ್ಟೆ ಕೇಂದ್ರದ ಬಾಗಿಲು, ಹೊಸ್ತಿಲಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಸ್ಥಳೀಯ ಮುಸ್ಲಿಂ ಮಹಿಳೆಯರು ಸಾಥ್‌ ನೀಡಿದರು.

ಅಭ್ಯರ್ಥಿಗಳ ಮತದಾನ

ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ ಪತ್ನಿ ನಾಗರತ್ನ ಜತೆ ಮಲಘಾಣ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಕುಟುಂಬದ ಮಹಿಳೆಯರು ಮತಗಟ್ಟೆಗೆ ಪೂಜೆ ಸಲ್ಲಿಸಿ ಮತದಾನ ಮಾಡಿದರೆ, ಗಣಿಹಾರ ಗ್ರಾಮದ ಮತಗಟ್ಟೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ನಾಜಿಯಾ ಅಂಗಡಿ ಕುಟುಂಬ ಸದಸ್ಯರೊಂದಿಗೆ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಸಿಂದಗಿ ಕ್ಷೇತ್ರದ ತಾಂಬಾ ಗ್ರಾಮದ ಮತಗಟ್ಟೆಯಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಪತ್ನಿ ಅನಿತಾ ಜತೆ ಆಗಮಿಸಿ ಮತದಾನ ಮಾಡಿದರು.

Advertisement

ಕೈಕೊಟ್ಟ ಮತಯಂತ್ರಗಳು

ಸಿಂದಗಿ ಪಟ್ಟಣದ ಬಾಲಕಿಯರ ಶಾಲೆಯ ಮತಗಟ್ಟೆ ಸಂಖ್ಯೆ 172ರ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು, ತ್ವರಿತವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಯಿತು. ತಾಂಬಾ ಗ್ರಾಮದ ಮತಗಟ್ಟೆ ಸಂಖ್ಯೆ 92ರಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಯಂತ್ರವನ್ನು ಬದಲಿಸಲಾಯಿತು. ದೇವಣಗಾಂವ ಬಾಲಕರ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 12, ಕುಳೆ ಕುಮಟಗಿ ಗ್ರಾಮದ ಮತಗಟ್ಟೆ ಸಂಖ್ಯೆ 56 ಹಾಗೂ ಸುರಗಿಹಳ್ಳಿಯ ಮತಗಟ್ಟೆ ಸಂಖ್ಯೆ 99 ವಿವಿ ಪ್ಯಾಟ್‌ ಯಂತ್ರದಲ್ಲಿ ಲೋಪ ಕಂಡು ಬಂದ ಹಿನ್ನೆಲೆ ಕೂಡಲೇ ಯಂತ್ರಗಳನ್ನು ಬದಲಿಸಿ ಸುಗಮ ಮತದಾನಕ್ಕೆ ವ್ಯವಸ್ಥೆ ಮಾಡಲಾಯಿತು.

ಇದನ್ನೂ ಓದಿ: ಡೆತ್ ನೋಟ್ ನಲ್ಲಿ ಪೊಲೀಸರಿಬ್ಬರ ಹೆಸರು ಬರೆದಿಟ್ಟು ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ!

ಸಮಯವಾರು ಮತದಾನ

ಬೆಳಗ್ಗೆ 7ರಿಂದ 9ರವರೆಗೆ ಶೇ.8.08 ಮತದಾನವಾಗಿದ್ದು, ಬೆಳಗ್ಗೆ 11ರವರೆಗೆ ಶೇ. 26.75 ಮತದಾರರು ಹಕ್ಕು ಚಲಾಯಿಸಿದ್ದರು. ಮಧ್ಯಾಹ್ನ 1ರ ವೇಳೆಗೆ ಶೇ. 32.49ರಷ್ಟಾಗಿದ್ದ ಮತದಾನ, ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 51.60 ಹಾಗೂ ಸಂಜೆ 5ಕ್ಕೆ ಶೇ. 64.54 ಏರಿಕೆ ಕಂಡಿತ್ತು. ಅಂತಿಮವಾಗಿ ಶೇ. 68.12 ಮತದಾನವಾಗಿ¨

Advertisement

Udayavani is now on Telegram. Click here to join our channel and stay updated with the latest news.

Next