Advertisement

ಮಾರುಕಟ್ಟೆಗೆ ಕಾಯಕಲ್ಪ ಯಾವಾಗ?

10:49 AM Jul 20, 2019 | Team Udayavani |

ರಮೇಶ ಪೂಜಾರ
ಸಿಂದಗಿ:
ಸಿಂದಗಿ ಪಟ್ಟಣದ ನಗರ ಪಾಲಿಕೆಯಾ ಗುವಷ್ಟು ಬೆಳೆಯುತ್ತಿದೆ. ಆದರೆ ಇಲ್ಲಿ ಸುಸಜ್ಜಿತವಾದ ಒಂದು ಮಾರುಕಟ್ಟೆಯಿಲ್ಲ. ರೈತರಿಗೆ ಮತ್ತು ಬಾಗವಾನರಿಗೆ ಕಾಯಿಪಲ್ಲೆ ಮತ್ತು ಹಣ್ಣು ಮಾರಾಟ ಮಾಡಲು ಸುಸಜ್ಜಿತವಾದ ಮತ್ತು ನಗರ ವಾಸಿಗಳಿಗೆ ಅನಕೂಲಕರ ಸ್ಥಳದಲ್ಲಿ ಮಾರುಕಟ್ಟೆಯಾಬೇಕು ಎಂಬ ುದು ರೈತರ, ಬಾಗವಾನರ ಮತ್ತು ಪಟ್ಟಣ ವಾಸಿಗಳ ಬಹುದಿನಗಳ ಬೇಡಿಕೆ ಕನಸಾಗಿ ಉಳಿದದೆ.

Advertisement

ಸಿಂದಗಿ ಪಟ್ಟಣದ ಬಸ್‌ ನಿಲ್ದಾಣದ ಹತ್ತಿರ ಮುಖ್ಯ ರಸ್ತೆ ಬದಿಗಳಲ್ಲಿ ಒತ್ತು ಗಾಡಿಗಳಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಅದರಂತೆ ಟಿಪ್ಪು ಸುಲ್ತಾನ್‌ ವೃತ್ತದಿಂದ ಪುರಸಭೆ ಹತ್ತಿರದಲ್ಲಿನ ಭೀಮಾಶಂಕರ ಮಠದವರೆಗಿನ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಕಾಯಿಪಲ್ಲೆ ಮಾರಾಟ ಮಾಡುತ್ತಾರೆ. ಟಿಪ್ಪು ಸುಲ್ತಾನ್‌ ವೃತ್ತದ ಬಳಿ ಮಟನ್‌ ಮಾರಾಟ ಮಾಡುತ್ತಾರೆ. ಇದರಿಂದ ಜನಸಂದಣಿ ಹೆಚ್ಚಾಗಿರುತ್ತದೆ. ರಸ್ತೆ ಅರ್ಧದಷ್ಟು ಭಾಗ ಮಾರಾಟಗಾರರು ಅಕ್ರಮಿಸಿದಾಗ ದ್ವಿಚಕ್ರ, ನಾಲ್ಕು ಚಕ್ರವಾಹನಗಳು, ಶಾಲಾ ವಾಹನಗಳಿಗೆ ಸಂಚಾರಕ್ಕೂ ತೊಂದರೆಯಾಗುತ್ತದೆ. ಪಾದಚಾರಿಗಳಿಗೆ ಸಾಕಷ್ಟು ತೊಂದರೆಯಾಗುವ ದುಸ್ಥಿತಿ ಇಲ್ಲಿ ಉಂಟಾಗಿದೆ.

ಪುರಸಭೆ ಎದುರಿನ ದೊಡ್ಡ ಚರಂಡಿ ಬದಿ ಕಾಯಿಪಲ್ಲೆ ಮಾರಾಟ ಮಾಡುತ್ತಿದ್ದಾರೆ. ಟಿಪ್ಪು ಸುಲ್ತಾನ್‌ ವೃತ್ತದಿಂದ ಪುರಸಭೆ ಹತ್ತಿರದಲ್ಲಿನ ಭೀಮಾಶಂಕರ ಮಠದವರೆಗಿನ ಮುಖ್ಯ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಮಾರುಕಟ್ಟೆಯನ್ನು ಸ್ಥಳಾಂತರಿಸಿ ಎಂದು ಸಂಘಟನೆಗಳು ಹಾಗೂ ಸಾರ್ವಜನಿಕರು ಪುರಸಭೆ, ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ. ಪುರಸಭೆ ವ್ಯಾಪ್ತಿಯಲ್ಲಿನ ಹಳೆ ಬಜಾರದಲ್ಲಿನ ಮಾರುಕಟ್ಟೆ ಮತ್ತು ಮಲಘಾಣ ಕ್ರಾಸ್‌ ಬಳಿ ನಿರ್ಮಾಣ ಮಾಡಿದ ಉದ್ಘಾಟನೆಯಾಗದೇ ಉಳಿದ ಮಟನ್‌ ಮಾರುಕಟ್ಟೆಗಳು ಹಾಳು ಬಿದ್ದಿವೆ.

ಬೇಡಿಕೆ: ಹಳೆ ಬಜಾರದಲ್ಲಿನ ಕಾಯಿಪಲ್ಲೆ ಮಾರುಕಟ್ಟೆ ಈಗ ಹಾಳು ಬಿದ್ದಿದ್ದನ್ನು ಪುನಶ್ಚೇತನ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ಉಪಯುಕ್ತವಾಗುತ್ತದೆ. ಈ ಹಾಳು ಬಿದ್ದ ಮಾರುಕಟ್ಟೆ ಪಟ್ಟಣದ ಮಧ್ಯ ಭಾಗದಲ್ಲಿದ್ದು ಇಲ್ಲಿ ಮೊದಲು ಕಾಯಿಪಲ್ಲೆ ಮತ್ತು ಹಣ್ಣು ಮಾರಾಟ ಮಾಡಲಾಗುತ್ತಿತ್ತು. ನಂತರ ದಿನಗಳಲ್ಲಿ ಮಾರುಕಟ್ಟೆ ಹಳೆ ಬಜಾರದಿಂದ ಪುರಸಭೆ ಮುಂದಿನ ರಸ್ತೆಗೆ ಹೋದ ನಂತರ ಈ ಮಾರುಕಟ್ಟೆ ಪಾಳು ಬಿದ್ದಿದೆ. ಇಲ್ಲಿನ ಮಾರುಕಟ್ಟೆ ಪುನಶ್ಚೇತನ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆ.

ಪಟ್ಟಣದ ಮಧ್ಯಭಾಗ ವಿನಾಯಕ ಚಿತ್ರ ಮಂದಿರದ ಎದುರಿಗಿದ್ದ ಹಳೆ ತಹಶೀಲ್ದಾರ್‌ ಕಚೇರಿ ಜಾಗೆ ಈಗ ಖಾಲಿ ಇದೆ. ಇಲ್ಲಿ ಮಾರುಕಟ್ಟೆ ಮಾಡಲು ಅತ್ಯಂತ ಸೂಕ್ತ ಜಾಗ. ಇಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿದಲ್ಲಿ ಒಂದು ಮಾದರಿ ಮಾರುಕಟ್ಟೆಯಾಗುತ್ತದೆ. ಸಾರ್ವಜನಿಕರಿಗೆ ಅನುಕೂಲಕರವಾಗುತ್ತದೆ. ಈ ಸ್ಥಳದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂದು ರ್ಸಾಜನಿಕರು ಪುರಸಭೆ ಒತ್ತಾಯಿಸಿದ್ದಾರೆ. ಕಾಯಿಪಲ್ಲೆ ಮತ್ತು ಹಣ್ಣು ಮಾರಾಟ ಮಾಡಲು ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣ ಮಾಡಿಕೊಡಬೇಕು ಎಂದು ಪಟ್ಟಣದ ಬಾಗವಾನರು ಮತ್ತು ತರಕಾರಿ, ಹಣ್ಣು ಮಾರಾಟ ಮಾಡುವವರು ಜು. 20ರಿಂದ ತರಕಾರಿ ಮತ್ತು ಹಣ್ಣು ಮಾರಾಟ ಮಾಡುವುದನ್ನು ಅನಿರ್ದಿಷ್ಟ ಬಂದ್‌ ಕರೆ ನೀಡಿದ್ದಾರೆ. ಬಂದ್‌ ಪರಿಣಾಮದಿಂದ ಜು. 21ರಂದು ಸಂತೆ ಕೂಡಾ ಬಂದಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುವ ಲಕ್ಷಣಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next