Advertisement

“ಕ್ರಿಯಾಶೀಲತೆಯಲ್ಲಿ ಸಿಂಡ್‌ ಬ್ಯಾಂಕ್‌ ಮುಂದು’

07:30 AM Oct 27, 2017 | |

ಬೆಂಗಳೂರು: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೊಸ ಕಲ್ಪನೆ ಉತ್ಪನ್ನಗಳನ್ನು ಪರಿಚಯಿಸುವ ಸಿಂಡಿಕೇಟ್‌ ಬ್ಯಾಂಕ್‌, ಕ್ರಿಯಾಶೀಲತೆಯಲ್ಲಿ ಸದಾ ಮುಂದು ಎಂದು ಭಾರತೀಯ ರಿಸರ್ವ್‌ ಬ್ಯಾಂಕಿನ ಬೆಂಗಳೂರು ವಲಯ ನಿರ್ದೇಶಕ ಯುಜಿನ್‌ ಕಾರ್ತಕ್‌ ಪ್ರಶಂಸಿಸಿದರು.

Advertisement

ನಗರದ ಹೋಟೆಲೊಂದರಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬ್ಯಾಂಕಿನ 92ನೇ ಸಂಸ್ಥಾಪಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕಳೆದ ಐದು ದಶಕಗಳ ಹಿಂದೆಯೇ ಸಿಂಡಿಕೇಟ್‌ ಬ್ಯಾಂಕ್‌ ಗ್ರಾಹಕರ ಸೌಕರ್ಯಕ್ಕನುಗುಣವಾಗಿ ಮನೆ, ಮನೆಗೆ ತೆರಳಿ ಪಿಗ್ಮಿ ಕಲೆಕ್ಷನ್‌ ಮಾಡುವ ಪದಟಛಿತಿ ಪರಿಚಯಿಸಿತ್ತು. 

ಹೊಸತನದ ಆದ್ಯ ಪ್ರವರ್ತಕ ನಾಗಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕಿನ 92ನೇ ಸಂಸ್ಥಾಪಕರ ದಿನಾಚರಣೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರು.

ನಾನು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಬರುವ ಮುನ್ನ, ನನ್ನ ಹದಿಹರೆಯದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಲೋಗೋವನ್ನು ನೋಡುತ್ತಿದ್ದೆ. ಕಾರಣ ನಂಬಿಕೆಗೆ ಪಾತ್ರವಾದ ಹಾಗೂ ನನ್ನ ಅಚ್ಚುಮೆಚ್ಚಿನ ಅಲೆÒàಶಿಯನ್‌ ನಾಯಿ ಲೋಗೋ ಅದು. ಆದ್ದರಿಂದ ಆ ಲೋಗೋ ನನ್ನ ನೆನಪಿನಲ್ಲಿ ಉಳಿದಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಸೇರಿದ ಮೇಲೆ ಬ್ಯಾಂಕಿನ ಬಗ್ಗೆ ಸಾಕಷ್ಟು ತಿಳಿದುಕೊಂಡೆ ಎಂದು ಅವರು ತಿಳಿಸಿದರು.

ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮೆಲ್ವಿನ್‌ ರೇಗೊ ಮಾತನಾಡಿ, ಬ್ಯಾಂಕಿನ ಸಂಸ್ಥಾಪಕತ್ರ ಯರಾದ ಶ್ರೀ ಉಪೇಂದ್ರ ಅನಂತ ಪೈ ಒಬ್ಬ ಉದ್ಯಮಿಯಾಗಿದ್ದರು, ಶ್ರೀ ಟಿ.ಎಂ.ಎ. ಪೈ ಅವರು ಒಬ್ಬ ವೈದ್ಯರಾಗಿದ್ದರು ಹಾಗೂ ಶ್ರೀ ವಾಮನ್‌ ಎಸ್‌. ಕುಡ್ವಾ ಅವರು ಒಬ್ಬ ಎಂಜಿ ನಿಯರ್‌ ಆಗಿದ್ದರು.

Advertisement

ಮೂರು ವಿಭಿನ್ನ ಕ್ಷೇತ್ರಗಳಲ್ಲಿ ಬಂದ ಈ ಮೂವರು ಮಹಾನುಭಾವರ ಕೊಡುಗೆಯಿಂದ ಸಿಂಡಿಕೇಟ್‌ ಬ್ಯಾಂಕ್‌ ಇಂದು ಈ ಎತ್ತರಕ್ಕೆ ಬೆಳೆದಿದೆ. ಅಲ್ಲದೆ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಈ ಮೂರು ಕ್ಷೇತ್ರಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.

ಈ ಶುಭ ದಿನದಂದು ಇ-ಓಪನಿಂಗ್‌ ಮೂಲಕ 53 ಶಾಖೆಗಳಿಗೆ ಚಾಲನೆ ನೀಡಿದ್ದೇವೆ. ಆ ಮೂಲಕ ಇಂದು ದೇಶಾದ್ಯಂತ ಒಟ್ಟು 4000 ಶಾಖೆಗಳು, 4085 ಎಟಿಎಂಗಳು ಹಾಗೂ 5.5 ಕೋಟಿ ಗ್ರಾಹಕರನ್ನು ಹೊಂದಿದ್ದೇವೆ. ಇದರಲ್ಲಿ 20ಕ್ಕೂ ಹೆಚ್ಚು ಎಂಎಸ್‌ಎಂಇ ಹಾಗೂ ರಿಟೈಲ್‌ ಕ್ಷೇತ್ರದ ಗ್ರಾಹಕರಿಗೆ ಆದ್ಯತೆ ನೀಡುವ ಪ್ರತ್ಯೇಕ ಶಾಖೆಗಳೂ ಇವೆ.

401 “ಅನನ್ಯ’ ಶಾಖೆಗಳು: ಪ್ರಸ್ತುತ ಸಂಪೂರ್ಣ ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆಯುಳ್ಳ 401 “ಅನನ್ಯ’ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಹಣಕಾಸು ವರ್ಷಾಂತ್ಯದೊಳಗೆ 800 ಶಾಖೆಗಳನ್ನು ತಲುಪುವ ಗುರಿ ಹೊಂದಿದ್ದೇವೆ. 

ಇಂಟರ್‌ನೆಟ್‌ ಬ್ಯಾಂಕಿಂಗ್‌,ಮೊಬೈಲ್‌ ಬ್ಯಾಂಕಿಂಗ್‌, ಮಿಸ್ಡ್ ಕಾಲ್‌ ಬ್ಯಾಂಕಿಂಗ್‌,ಇ-ಪಾಸ್‌ಬುಕ್‌,ಇ-ಕೆವೈಸಿ ಸಲ್ಯೂಷನ್ಸ್‌, ಎನ್‌ಆರ್‌ಐ ಸಲ್ಯೂಷನ್ಸ್‌, ಡೆಬಿಟ್‌ ಎಂಟ್ರಿ, ಮಲ್ಟಿ ಎಂಟ್ರಿಕಾರ್ಡ್‌, ಇನ್ಸೂರೆನ್ಸ್‌ ಇನ್ನಿತರ ಹಣ ಹೂಡಿಕೆಯ ಸೇವೆಗಳನ್ನು ನೀಡುತ್ತಿರುವ ಆಧುನಿಕ ಬ್ಯಾಂಕ್‌ ನಮ್ಮದಾಗಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್‌.ಎಸ್‌. ಪಾಂಡೆ, ಎಸ್‌. ಎಸ್‌. ಮಲ್ಲಿಕಾರ್ಜುನ ರಾವ್‌, ವಲಯ ಪ್ರಬಂಧಕ ಮಂಜುನಾಥ್‌, ಮಹಾಪ್ರಬಂಧಕ ಸೀrವನ್‌ ವಾಸ್‌ ಹಾಗೂ ಶಾಖಾ ಮುಖ್ಯಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next