Advertisement

ವಿಕಲ ಚೇತನರಿಗೆ ಬೆಳಕಿಂಡಿ “ಸಿಂಚನಾ’

03:58 PM Jul 22, 2017 | Team Udayavani |

ಮಕ್ಕಳನ್ನು ದೇವರು ಎನ್ನುತ್ತಾರೆ. ಆದರೆ, ನ್ಯೂನತೆಯೊಂದಿಗೆ ಹುಟ್ಟಿದ ಮಕ್ಕಳಿಗೆ ಈ ಮಾತು ಅನ್ವಯಿಸುತ್ತದೆಯೇ ಇಲ್ಲವೇ ಎಂಬ ಅನುಮಾನ ಸಮಾಜದ ವರ್ತನೆಯನ್ನು ಕಂಡಾಗ ಕೆಲವೊಮ್ಮೆ ಬರುವುದುಂಟು. ಶಾಲೆಗಳಲ್ಲಿ, ನಾರ್ಮಲ್‌ ಶಾಲೆ ಮತ್ತು ವಿಶೇಷ ಮಕ್ಕಳ ಶಾಲೆ ಎಂಬ ವಿಂಗಡನೆ ನಮ್ಮ ಸಮಾಜದಲ್ಲಿರುವುದನ್ನು ಗಮನಿಸಿಯೇ ಇರುತ್ತೀರಿ. ನ್ಯೂನತೆವುಳ್ಳ ಮಗುವನ್ನು ಕೆಲ ಶಾಲೆಗಳಲ್ಲಿ ಸೇರಿಸಿಕೊಳ್ಳುವುದಿಲ್ಲ. ಈ ತಾರತಮ್ಯದ ವಿರುದ್ಧ ದನಿ ಎತ್ತಿದವರು ಮತ್ತು ಯಾರ ಮಕ್ಕಳೇ ಆಗಿರಲಿ, ಮಕ್ಕಳು ಹೇಗೇ ಇರಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂಬ ಅಭಿಪ್ರಾಯವಿದ್ದ ಬೆಂಗಳೂರಿನ ಸಮಾನ ಮನಸ್ಕರು ಸೇರಿ ಸ್ಥಾಪಿಸಿದ್ದೇ ಸಿಂಚನಾ ಸಂಸ್ಥೆ. 

Advertisement

ಅಖೀಲಾ ರಾಘವೇಂದ್ರ ರಾವ್‌, ಚರಿತಾ ಕೊಡಗಿ, ಜಯ ನಾಗೇಂದ್ರರವರಿಂದ ಸಂಸ್ಥೆ ಸ್ಥಾಪನೆಗೆ ಕಾರಣಕರ್ತರು. ದೈಹಿಕವಾಗಿ ಮತ್ತು ಬೌದ್ಧಿಕ ನ್ಯೂನತೆ ಹೊಂದಿದ ಮಕ್ಕಳು ಎಲ್ಲರಂತೆ, ತಾವು ತಮ್ಮ ಕೆಲಸಗಳನ್ನು ಮಾಡಿಕೊಳ್ಳುವ ಹಾಗೆ ತಯಾರು ಮಾಡಬೇಕೆನ್ನುವುದೇ ಸಿಂಚನಾ ಸಂಸ್ಥೆಯ ಧ್ಯೇಯ. ಸದ್ಯ ಇಲ್ಲಿ ಆಟಿಸಂ, ಡಿಸೆಲೆಕ್ಸಿಯಾ, ಡೌನ್‌ ಸಿಂಡ್ರೋಂಗೆ ತುತ್ತಾದವರು, ನಿಧಾನ ಕಲಿಯುವ ಮಕ್ಕಳು ತರಬೇತಿಯನ್ನು ಪಡೆಯುತ್ತಿದ್ದಾರೆ. ಅವರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಹೊರತರುಲ್ಲಿ ಇತರರ ಸಹಾಯ ಬೇಕು ಅಷ್ಟೆ. ಅದಕ್ಕಾಗಿ ವಿಶೇಷ ಪರಿಣತಿ ಬೇಕಾಗುತ್ತದೆ. ವಿನೂತನ ಕಲಿಕಾ ವಿಧಾನದ ಅಗತ್ಯವಿರುತ್ತದೆ. ಅವೆಲ್ಲಾ ಸವಲತ್ತುಗಳನ್ನು ನೀಡುವಲ್ಲಿ ಸಿಂಚನಾ ಬದ್ಧವಾಗಿದೆ. ಈಗ ಶಾಲೆಯಲ್ಲಿ 25 ಮಂದಿ ವಿದ್ಯಾರ್ಥಿಗಳಿದ್ದು, 8 ಮಂದಿ ಶಿಕ್ಷಕರಿದ್ದಾರೆ. ಬೆಳಿಗ್ಗೆ 10.30 ರಿಂದ 1.30 ತರಗತಿಗಳು ನಡೆದರೆ, ಮಧ್ಯಾಹ್ನ 3.30ರಿಂದ 5.30ರವರೆಗೆ ತರಬೇತಿ ಶಿಕ್ಷಣ ನಡೆಯುವುದು. ಶುಲ್ಕವನ್ನು ಪಡೆಯದೇ ಸೇವೆ ಮಾಡುವ ಇಚ್ಛೆಯಿದ್ದರೂ ಅನುದಾನದ ಕೊರತೆ ಇರುವ ಕಾರಣ ಅನಿವಾರ್ಯವಾಗಿ ಪಾಲಕರಿಗೆ ಹೊರೆಯಾಗದಂತೆ ಶುಲ್ಕವನ್ನು ವಿಧಿಸುತ್ತಿದ್ದಾರೆ.
ಸಮಾಜದಲ್ಲಿ ಭಿನ್ನವಾಗಿ, ಒಂದು ರೀತಿಯಾಗಿ ನೋಡುವ ಮಕ್ಕಳನ್ನು ಎಲ್ಲರೂ ಒಂದೇ ರೀತಿಯಲ್ಲಿ ನೋಡುವಂತೆ ಮಾಡುವುದು ನಮ್ಮ ಉದ್ದೇಶ.
– ಅಖೀಲಾ ರಾಘವೇಂದ್ರರಾವ್‌, ಸಹಸಂಸ್ಥಾಪಕರು

ಕರುಳು ಕಿವುಚಿತು…
ಒಮ್ಮೆ ಒಂದು ಮಗು ಸಂಸ್ಥೆಗೆ  ಸೇರಿತ್ತು. ಒಂದು ವರ್ಷದ ಬಳಿಕ ತಂದೆ ತಾಯಿಗಳು ಹಣದ ಸಮಸ್ಯೆಯ ಕಾರಣದಿಂದ ಅವನನ್ನು ಕರೆದುಕೊಂಡು ಹೋಗಲು ಬಂದಿದ್ದರು. ಆಗ ಸಂಸ್ಥೆಯ ಸದಸ್ಯರಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಮಗುವನ್ನು ಇಟ್ಟುಕೊಳ್ಳಲು ಸಂಸ್ಥೆಯ ಆರ್ಥಿಕ ಮುಗ್ಗಟ್ಟು ಅಡ್ಡಗಾಲು ಹಾಕಿತ್ತು, ಆದರೆ ಬಿಟ್ಟುಕೊಡಲು ಅವರ ಮನಸ್ಸು ಒಪ್ಪುತ್ತಿಲ್ಲ. ಆ ಮಗುವನ್ನು ಅವರ ತಂದೆ ತಾಯಿ ಶಾಲೆಯಿಂದ ಕರೆದುಕೊಂಡು ಹೋಗುವಾಗ ಆ ಮಗು ಹಿಂತಿರುಗಿ ನೋಡಿದ ನೋಟವನ್ನು ಮರೆಯಲಾರೆ ಎಂದು ನೆನಪಿಸಿಕೊಳ್ಳುತ್ತಾರೆ ಸ್ಥಾಪಕಿಯರಲ್ಲೊಬ್ಬರಾದ ಅಖೀಲಾ. ಇಂಥ ಮಾನಸಿಕ ತಾಕಲಾಟಗಳದೆಷ್ಟೋ ಎದುರಾಗಿವೆ. ಅವೆಲ್ಲದರ ಹೊರತಾಗಿ ಅನುದಾನವನ್ನು ಹೊಂದಿಸುತ್ತಾ, ಸೇವಾ ಸಂಸ್ಥೆಯೊಂದನ್ನು ಕಟ್ಟುವ ಅವರ ಪ್ರಯತ್ನ ಮುಂದುವರಿದಿದೆ. 

ಬೀದಿ ನಾಟಕ
ಸಂಸ್ಥೆಯ ಕುರಿತು ಮತ್ತು ವಿಶೇಷ ಮಕ್ಕಳ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕಗಳನ್ನು ಆಯೋಜಿಸಿದ್ದಾರೆ. ಇಂಥಾ ಕಾರ್ಯಕ್ರಮಗಳಿಂದ ಸಂಗ್ರಹವಾದ ಮೊತ್ತವನ್ನು ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ.

ಸ್ವಯಂ ಸೇವಕ ಮನಸ್ಸುಗಳಿಗೆ…
ಬೆಂಗಳೂರಿನಲ್ಲಿ ಸಹೃದಯರ ಸಂಖ್ಯೆಗೇನೂ ಕಡಿಮೆಯಿಲ್ಲ. ತಮ್ಮ ವೀಕೆಂಡ್‌ನ‌ಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ, ತಮ್ಮ ಕೈಲಾದ ಸಹಾಯ ಮಾಡುವ ಯುವಜನತೆಯ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸಿಂಚನಾ ಸಂಸ್ಥೆಯಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುವ ಅವಕಾಶವೂ ಇದೆ. ಇಲ್ಲಿನ ಮಕ್ಕಳೊಡನೆ ಕಾಲ ಕಳೆದು, ಅವರ ಸಂತಸದಲ್ಲಿ ನೋವು ನಲಿವಿನಲ್ಲಿ ಭಾಗಿಯಾಗಬಹುದು. ಯಾವುದೇ ಸಂಸ್ಥೆಯಾದರೂ ಪ್ರಚಾರವಿಲ್ಲದೇ ಹೋದರೆ ಜನರ ಬಳಿಗೆ ತಲುಪುವುದು ತುಂಬಾ ಕಷ್ಟ. ಹೀಗಾಗಿ ಯಾರಾದರೂ ಸೆಲೆಬ್ರಿಟಿಗಳು ಸ್ವಯಂಪ್ರೇರಿತರಾಗಿ, ಸದುದ್ದೇಶಕ್ಕಾಗಿ ಸಹಾಯ ಮಾಡುವುದಾದರೆ ಅವರನ್ನು ಸಂಸ್ಥೆ ಸ್ವಾಗತಿಸುತ್ತದೆ. 

Advertisement

ಎಲ್ಲಿದೆ?
ಸಿಂಚನಾ ಫೌಂಡೇಷನ್‌
#38, 4ನೇ ಮುಖ್ಯರಸ್ತೆ, 2ನೇ ಕ್ರಾಸ್‌, ಮಾರುತಿ ಎಕ್ಸ್‌ಟೆನÒನ್‌, ಗಾಯತ್ರಿನಗರ, 560021
ಸಂಪರ್ಕ: 9535446621

Advertisement

Udayavani is now on Telegram. Click here to join our channel and stay updated with the latest news.

Next