Advertisement

ಪಂಜಾಬ್ ಲೋಕಸಭಾ ಉಪಚುನಾವಣೆ; AAPಗೆ ಸೋಲು, ಶಿರೋಮಣಿಯ ಸಿಮ್ರಂಜಿತ್ ಜಯಕ್ಕೆ ವಿರೋಧವೇಕೆ?

01:37 PM Jun 28, 2022 | Team Udayavani |

ಪಂಜಾಬ್ ನ ಸಂಗ್ರೂರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಸಿಮ್ರಂಜಿತ್ ಸಿಂಗ್ ಮಾನ್ ಗೆಲುವು ಸಾಧಿಸಿದ್ದು, ತಾನು ಜಯಗಳಿಸಲು ಖಲಿಸ್ತಾನಿ ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆಯ ಸಿದ್ಧಾಂತವೇ ಕಾರಣ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಕರ್ನಾಟಕದಲ್ಲಿ ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ವಾಹನಗಳು ನೋಂದಣಿ: ಸಚಿವ ಮುರುಗೇಶ್ ನಿರಾಣಿ

ಶಿರೋಮಣಿ ಅಕಾಲಿದಳದ (ಅಮೃತಸರ್) ಅಧ್ಯಕ್ಷ ಸಿಮ್ರಂಜಿತ್ ಸಿಂಗ್ ಮಾನ್, ಇದು ನಮ್ಮ ಪಕ್ಷದ ಕಾರ್ಯಕರ್ತರ ಗೆಲುವು ಮತ್ತು ಜರ್ನೈಲ್ ಸಿಂಗ್ ಭಿಂದ್ರನ್ ವಾಲೆಯ ಸಿದ್ಧಾಂತದ ಪಾಠಗಳಿವೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.ಸಂಗ್ರೂರ್ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹುಟ್ಟೂರಾಗಿದ್ದು, ಈ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳದ ಸಿಮ್ರಂಜಿತ್ ಸಿಂಗ್ ತನ್ನ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಗುರ್ಮೈಲ್ ಸಿಂಗ್ ಅವರನ್ನು 5822 ಮತಗಳ ಅಂತರದಿಂದ ಪರಾಜಯಗೊಳಿಸಿದ್ದರು.

ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತುವುದಾಗಿ ಮಾನ್ ಗೆಲುವಿನ ನಂತರ ಪ್ರತಿಕ್ರಿಯೆ ನೀಡಿದ್ದು, ಬಿಹಾರ ಮತ್ತು ಛತ್ತೀಸ್ ಗಢದಲ್ಲಿ ಬುಡಕಟ್ಟು ಜನಾಂಗದ ಹತ್ಯೆಯ ಕುರಿತು ಮಾತನಾಡುವುದಾಗಿ ತಿಳಿಸಿದ್ದಾರೆ.

Advertisement

ಸಿಮ್ರಂಜಿತ್ ಸಿಂಗ್ ಮಾನ್ ಗೆಲುವಿಗೆ ಕಾಂಗ್ರೆಸ್ ಪಕ್ಷದ ಸುರ್ಜೇವಾಲಾ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪಂಜಾಬ್ ನಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವ ಕಳೆದುಕೊಂಡಿದ್ದು, ಇನ್ನು ಭವಿಷ್ಯದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳ ತಾಣವಾಗಲಿದೆಯೇ ಎಂಬ ಆತಂಕ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ಯಾರೀತ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ:

ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಧಾರ್ಮಿಕ ಮುಖಂಡನಾಗಿದ್ದ. ಬಳಿಕ ಪಾಕ್ ಬೆಂಬಲಿತ ಪ್ರತ್ಯೇಕ ಖಲಿಸ್ತಾನಿ ರಾಜ್ಯದ ಅಭಿಯಾನಕ್ಕೆ ಕೈಜೋಡಿಸುವ ಮೂಲಕ 1982ರಲ್ಲಿ ಸಿಖ್ಖರ ಪವಿತ್ರ ಗೋಲ್ಡನ್ ಟೆಂಪಲ್ ಕಾಂಪ್ಲೆಕ್ಸ್ ನಲ್ಲಿ ತನ್ನ ಅನುಯಾಯಿಗಳ ಜತೆ ಶಸ್ತ್ರಾಸ್ತ್ರದೊಂದಿಗೆ ವಾಸ್ತವ್ಯ ಹೂಡಿದ್ದ. ಇದೊಂದು ಉಗ್ರ ಕೃತ್ಯ ಎಂದು ಘೋಷಿಸಿದ್ದ ಪ್ರಧಾನಿ ಇಂದಿರಾ ಗಾಂಧಿ ಆಪರೇಶನ್ ಬ್ಲೂ ಸ್ಟಾರ್ ಸೇನಾ ಕಾರ್ಯಾಚರಣೆ ಮೂಲಕ 1984ರಲ್ಲಿ ಭಿಂದ್ರನ್ ವಾಲ್ ಹಾಗೂ ಇತರರನ್ನು ಹತ್ಯೆಗೈಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next