Advertisement

ನೋವಿನ ಮಧ್ಯೆಯೇ ನಲಿವಿನ ಮೊಗ್ಗು : ಓಣಂ ಸರಳ ಆಚರಣೆ

06:00 AM Aug 26, 2018 | |

ಕೊಚ್ಚಿ: ಕೇರಳದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುವ ತಿರುಓಣಂ ಹಬ್ಬದ ಆಚರಣೆಯಲ್ಲಿ ಶನಿವಾರ ಉತ್ಸಾಹ ಕಡಿಮೆ ಕಂಡುಬಂದಿತು. ನೆರೆಪೀಡಿತ ಭಾಗಗಳಲ್ಲಿ ಜನರು ಓಣಂ ಆಚರಿಸಿಲ್ಲ. ಇನ್ನು ಕೆಲವು ಪರಿಹಾರ ಕೇಂದ್ರಗಳಲ್ಲಿ ಸಣ್ಣದೊಂದು ಪೂಕಳಂ ಬಿಡಿಸಿ ಆಚರಿಸಿದರು. ಉಳಿದಂತೆ ಹಲವರು ದೇವಸ್ಥಾನಕ್ಕೆ ತೆರಳಿ ಸರಳವಾಗಿ ಹಬ್ಬ ಆಚರಿಸಿದರು.

Advertisement

ಈ ಸಾಂಪ್ರದಾಯಿಕ ಸುಗ್ಗಿ ಹಬ್ಬದಲ್ಲಿ ಹಿಂದಿನ ವೈಭವವಿರಲಿಲ್ಲ. ಕಳೆದ ಓಣಂನ ಸವಿ ಸವಿ ನೆನಪುಗಳು ಮೊಗದಲ್ಲಿ ಮಂದಹಾಸ ತರಲಿಲ್ಲ. ಆದರೆ, ಪ್ರವಾಹದ ತೀವ್ರ ಬಾಧೆಗೊಳಗಾಗಿರುವ ಅಲ ಪ್ಪುಳ ಜಿಲ್ಲೆಯಲ್ಲಿ ಇಂಥ ಉತ್ಸಾಹ ಕಂಡು ಬಂತು. ಎಲ್ಲಾ ಕಳೆದುಕೊಂಡಿರುವ ದುಃಖದ ಛಾಯೆಯಿಂದ ಕೊಂಚ ಹೊರ ಬಂದು, ಕೆಲ ಪ್ರಾಂತ್ಯಗಳ ಜನರು ಜೀವನೋತ್ಸಾಹ ತೋರಿದರು. ಕೊಚ್ಚಿಯ ಪರವೂರು, ಆಲುವ, ಆಂಡಿಪಿಳ್ಳಿಕಾವು ಮೊದಲಾದ ನೆರೆ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು, ಸಮಾಜ ಸೇವಕರು ಅಲ್ಲಿದ್ದವರೊಂದಿಗೆ ಹಬ್ಬ ಆಚರಿಸಿದರು. ಹೊಸ ಬಟ್ಟೆಗಳನ್ನು ವಿತರಿಸಿ ಪಾಯಸ, ಸಿಹಿ ತಿಂಡಿಗಳನ್ನು ನೀಡಲಾಯಿತು.

ಇಲ್ಲೇ ಸಂಭ್ರಮ
“ಪ್ರತೀ ವರ್ಷವೂ ಅಂಗಳದಲ್ಲಿ ಚಿಕ್ಕದಾಗಿ ಪೂಕಳಂ ಹಾಕಿ ಮನೆ ಮಂದಿ ಯೆಲ್ಲಾ ಸಂಭ್ರಮದಿಂದ ಹಬ್ಬ ಆಚರಿಸು ತ್ತಿದ್ದೆವು. ಈ ಬಾರಿ ಹಾಗಾಗಿ ಅಲ್ಲಿಗೆ ಹೋಗದೇ ಈ ಪರಿಹಾರ ಕೇಂದ್ರ ದಲ್ಲೇ ಹಬ್ಬ ಆಚರಿ ಸುವಂತಾ ಗಿದೆ. ಇರಲಿ, ಇಷ್ಟಾದರೂ ಸಿಕ್ಕಿತಲ್ಲ’ ಎಂದು ತಮ್ಮನ್ನು ತಾವು ಸಮಾಧಾನ ಪಡಿಸಿಕೊಳ್ಳುತ್ತಾರೆ ಮಾಳ ನಿವಾಸಿ 78 ವರ್ಷದ ತುಳಸಿಯಮ್ಮ.

ಅಂಗೈಯಲ್ಲಿ ಇದ್ದದ್ದರಲ್ಲೇ ಅರಮನೆ ಕಟ್ಟಿಕೊಂಡರು
ಶಿಬಿರಗಳಲ್ಲಿರುವ ಮಹಿಳೆಯರು ಶಿಬಿರದ ಅಕ್ಕ ಪಕ್ಕದ ಕೆಲ ಗಿಡಗಳಲ್ಲಿ ಅರಳಿದ್ದ ಹೂವುಗಳನ್ನು ಬಿಡಿಸಿ ತಂದು, ಬಾಗಿಲಿಗೆ ಮುಡಿಸಿ ಶೃಂಗಾರ ಮಾಡಿದರು. ಮತ್ತದೇ ಹೂವುಗಳಿಂದ ಅಲಂಕಾರ ಮಾಡಿದರು. ಎಲ್ಲರೂ ಒಟ್ಟಾಗಿ ಲಭ್ಯವಿರುವ ದಿನಸಿಗಳಲ್ಲೇ ಖಾದ್ಯ ತಯಾರಿಸಿ ತಿಂದು ತೃಪ್ತಿ ಕಂಡು ಕೊಂಡರು. ಹಲವಾರು ಜಿಲ್ಲೆಗಳ ಶಾಲೆ, ಕಾಲೇಜು, ಕನ್ವೆನನ್‌ ಹಾಲ್‌ಗಳು, ಚರ್ಚ್‌, ಮಸೀದಿಗಳಲ್ಲಿಯೂ ಓಣಂ ಆಚರಿಸಲು ಅವಕಾಶ ಮಾಡಿಕೊಡಲಾಗಿತ್ತು. ತಮ್ಮಲ್ಲಿ ಇದ್ದದ್ದನ್ನೇ ಬಳಸಿಕೊಂಡು ಬದುಕಿನಲ್ಲಿ ಸಂಭ್ರಮವನ್ನು ತುಂಬಿಕೊಂಡದ್ದು ಎಲ್ಲೆಲ್ಲೂ ಕಂಡು ಬಂದಿತು. 

ಪೂಕಳಂ ಇಲ್ಲದೆ ಕಳೆಗುಂದಿದ ದೇಗುಲ
ಇತಿಹಾಸ ಪ್ರಸಿದ್ಧ ತೃಶ್ಶೂರಿನ ವಡಕ್ಕುನಾಥನ್‌ ದೇವಸ್ಥಾನದಲ್ಲಿ ಪ್ರತೀ ವರ್ಷವೂ ಬೃಹತ್ತಾದ, ಆಕರ್ಷಕ ಪೂಕಳಂ ಹಾಕುವುದು ವಾಡಿಕೆ. ಇದನ್ನು ನೋಡಲೆಂದೇ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಇದು ರಾಜ್ಯದ ಓಣಂ ಆಕರ್ಷಣೆಯಲ್ಲಿ ಒಂದು. ಸ್ಥಳೀಯ ರಾಜ್ಯ ಸರಕಾರ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಪೂಕಳಂ ಇಲ್ಲದೆ ದೇವಸ್ಥಾನದ ಹಿಂಬದಿಯ ಆವರಣ ಕಳೆಗುಂದಿತ್ತು. 

Advertisement

ಅಳ ಪ್ಪುಳದಲ್ಲಿ ಕೆಲ ದಿನಗಳಿಂದ ನಿರಾಶ್ರಿತರ ಕೇಂದ್ರ ವಾಗಿರುವ ಮಸೀದಿಯೊಂದರಲ್ಲಿ ಓಣಂ ಆಚರಿಸಲಾಯಿತು. ವಿಶೇಷ ಖಾದ್ಯವಾದ ಅವಿಯಾಳ್‌, ಸಾಂಬಾರ್‌, ಪಾಯಸಂ ತಯಾರಿಸಿ ನಿರಾಶ್ರಿತರಿಗೆ ಹಂಚಲಾಯಿತು. ಕೊಚ್ಚಿಯ ನಿರಾಶ್ರಿತರ ಶಿಬಿರದಲ್ಲಿ ಓಣಂ ಪಟ್ಟು, ವಿಶೇಷ ಅಡುಗೆ ಮಾಡಲಾಗಿತ್ತು.

  ಪ್ರಜ್ಞಾ ಶೆಟ್ಟಿ   ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next