Advertisement

ಸರಳವಾಗಿ ಬಕ್ರೀದ್‌ ಹಬ್ಬ ಆಚರಿಸಿ

12:38 PM Jul 29, 2020 | Suhan S |

ಹೊಳೆನರಸೀಪುರ: ಬಕ್ರೀದ್‌ ಹಬ್ಬದಂದು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಗಳನ್ನು ನಡೆಸದೆ ತಮ್ಮ ಮಸೀದಿಗಳಲ್ಲೆ ಹಬ್ಬವನ್ನು ಆಚರಿಸಬೇಕೆಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ಅಶೋಕ್‌ ಹೇಳಿದರು.

Advertisement

ಪಟ್ಟಣದ ನಗರ ಠಾಣೆಯ ಆವರಣದಲ್ಲಿ ಬಕ್ರೀದ್‌ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದೇಶ ಕೋವಿಡ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದೆ. ಈ ಪರಿಸ್ಥಿತಿಯಲ್ಲಿ ಬಕ್ರೀದ್‌ ಹಬ್ಬವನ್ನು ಸರಳವಾಗಿ ಆಯೋಜಿಸಿ ಯಶಸ್ವಿಗೊಳಿಸುವಲ್ಲಿ ಮುಸ್ಲಿಂ ಜನಾಂಗ ಮುಂದಾಗುವಂತೆ ಕೋರಿದರು. ಪ್ರಸ್ತುತ ರಾಜ್ಯ ಸರ್ಕಾರ ಸಾಮೂಹಿಕ ಪ್ರಾರ್ಥನೆ ಗಳನ್ನು ಈದ್ಗಾ ಮೈದಾನದಲ್ಲಿ ನಡೆಸದಂತೆ ತಿಳಿಸಿದ್ದು, ಜತೆಗೆ ತಾವುಗಳು ಈ ಹಬ್ಬದ ಪ್ರಾರ್ಥನೆಯನ್ನು ಮಸೀದಿ ಗಳಲ್ಲಿ ಅಂತರ ಕಾಯ್ದುಕೊಂದು ಒಮ್ಮೆಗೆ ಗರಿಷ್ಠ 50 ಮಂದಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ನಿಯಮ ಗಳನ್ನು ತಾವುಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

ಡಿವೈಎಸ್‌ಪಿ ಲಕ್ಷ್ಮೇಗೌಡ ಮಾತನಾಡಿ, ಈ ವರ್ಷ ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಯಾವುದೇ ಹಬ್ಬಗಳನ್ನು ಆಚರಿಸದಂತ ಪರಿಸ್ಥಿತಿ ಇದೆ. ಮುಂದಿನ ವರ್ಷ ಈ ಹಬ್ಬನ್ನು ತಾವುಗಳು ಈ ಹಿಂದಿನಂತೆ ಸಂಭ್ರಮ ದಿಂದ ಆಚರಿಸಲು ಅವಕಾಶ ದೊರೆಯಲಿದೆ. ಈಗಾ ಗಲೇ ಕೋವಿಡ್ ಗೆ ಬೇಕಾಗಿರುವ ಔಷಧಿ ಸಿದ್ಧವಿದೆ, ಆದರೆ ಏಕಾಏಕಿ ಆ ಔಷಧಿಯನ್ನು ಉಪಯೋಗಿಸಲು ಸಾಧ್ಯವಿಲ್ಲವಾಗಿದ್ದು ಈ ಔಷಧಿ ಪ್ರತಿ ಹಂತದಲ್ಲಿ ತಪಾಸಣೆ ನಡೆದ ನಂತರ ಸಾರ್ವಜನಿಕರ ಉಪಯೋಗಕ್ಕೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಮೌಲ್ವಿಗಳು, ಮುಸ್ಲಿಂ ಮುಖಂಡರು ಹಾಜರಿದ್ದು ಪೊಲೀಸ್‌ ಇಲಾಖೆ ಸೂಚಿಸಿದ ಮಾರ್ಗಗಳನ್ನು ಅನುಸರಿಸುವುದಾಗಿ ಭರವಸೆ ನೀಡಿದರು. ನಗರಠಾಣೆ ಪಿಎಸ್‌ಐ ಕುಮಾರ್‌, ಗ್ರಾಮಾಂತರ ಠಾಣೆ ಪಿಎಸ್‌ಐ ಮೋಹನ್‌ಕೃಷ್ಣ, ಕ್ರೈಂ ಪಿಎಸ್‌ಐ ಪ್ರಮೋದ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next