Advertisement

ಸರಳತೆ, ಪ್ಲಾಸ್ಟಿಕ್‌ ಜಾಗೃತಿ: ಮನಗೆದ್ದ ಸಚಿವ

10:06 PM Sep 30, 2019 | mahesh |

ಪುತ್ತೂರು: ಸೋಮವಾರ ಪ್ರಥಮ ಬಾರಿಗೆ ಪುತ್ತೂರಿಗೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ರೈಲಿನಲ್ಲಿ ಬಂದಿಳಿದು ಸರಳತೆ ಮೆರೆಯುವ ಜತೆಗೆ ಪ್ಲಾಸ್ಟಿಕ್‌ ಕುರಿತಂತೆ ಜಾಗೃತಿ ಮೂಡಿಸಿ ಗಮನ ಸೆಳೆದರು.

Advertisement

ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಅಧ್ಯಯನ ಕೇಂದ್ರದ ಯಶಸ್‌ನ ನೇತೃತ್ವದ ದೃಷ್ಟಿ ರಾಜ್ಯಮಟ್ಟದ ಐ.ಎ.ಎಸ್‌. ತರಬೇತಿ ಸಂಸ್ಥೆಗಳ ಮತ್ತು ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಪಾಲ್ಗೊ ಳ್ಳಲು ಬೆಳಗ್ಗಿನ ರೈಲಿನಲ್ಲಿ ಪುತ್ತೂರಿಗೆ ಆಗಮಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ, ಕಲ್ಲಿದ್ದಲು ಮತ್ತು ಗಣಿ ವಿಜ್ಞಾನ ಇಲಾಖೆ ಸಚಿವ ಪ್ರಹ್ಲಾದ್‌ ವಿ. ಜೋಶಿ ಅವರನ್ನು ಪುತ್ತೂರು ಬಿಜೆಪಿ ವತಿಯಿಂದ ಮತ್ತು ಅಧಿಕಾರಿ ಮಟ್ಟದಲ್ಲಿ ಸ್ವಾಗತಿಸಲಾಯಿತು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ಪುತ್ತೂರು ಹಿರಿಯ ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ, ತಹಶೀಲ್ದಾರ್‌ ಅನಂತಶಂಕರ್‌, ಬಿಜೆಪಿ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ, ಬಿಜೆಪಿ ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್‌ ಹಾರಾಡಿ, ಗೌರಿ ಬನ್ನೂರು, ನಗರಸಭೆ ಸದಸ್ಯರಾದ ವಿದ್ಯಾ ಆರ್‌. ಗೌರಿ, ಶಿವರಾಮ ಸಪಲ್ಯ, ಬಾಲಚಂದ್ರ, ಮನೋಹರ್‌ ಕಲ್ಲಾರೆ, ಪ್ರಮುಖರಾದ ಆರ್‌.ಸಿ. ನಾರಾಯಣ, ಪುರುಷೋತ್ತಮ ಮುಂಗ್ಲಿಮನೆ, ಯಶಸ್‌ನ ಕೃಷ್ಣನಾರಾಯಣ ಮುಳಿಯ, ಡಿ. ಶಂಭು ಭಟ್‌, ತಾ.ಪಂ. ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಸಂಪತ್‌ ಕುಮಾರ್‌ ಉಪಸ್ಥಿತರಿದ್ದರು.

ಪ್ಲಾಸ್ಟಿಕ್‌ ನಿರಾಕರಣೆ
ರೈಲಿನಿಂದ ಇಳಿಯುತ್ತಿದ್ದಂತೆ ಸಚಿವರನ್ನು ಸ್ವಾಗತಿಸುವ ಸಲುವಾಗಿ ಸ್ಥಳೀಯ ಬಿಜೆಪಿ ನಾಯಕರು ನೀಡಿದ ಹೂವಿನ ಬೊಕೆಯಲ್ಲಿ ಪ್ಲಾಸ್ಟಿಕ್‌ ಕವರ್‌ ಸುತ್ತಿರುವುದನ್ನು ಗಮನಿಸಿದ ಸಚಿವರು “ನೋ ಪ್ಲಾಸ್ಟಿಕ್‌’ ಎಂದು ನಿರಾಕರಿಸಿದರು. ಬಳಿಕ ಪ್ಲಾಸ್ಟಿಕ್‌ ರಹಿತ ಹೂಗುತ್ಛಗಳನ್ನು ಮಾತ್ರ ಸ್ವೀಕರಿಸಿದರು. ಸ್ವಚ್ಛ ಹಾಗೂ ಪ್ಲಾಸ್ಟಿಕ್‌ ಮುಕ್ತ ಭಾರತದ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತಿರುವ ಕೇಂದ್ರ ಸರಕಾರದ ನಡೆಯನ್ನು ಕೇಂದ್ರ ಸಚಿವರೂ ಅನುಸರಿಸಿದ್ದು ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next