Advertisement

ಬದುಕಿಗೆ ಸರಳತೆ ಅವಶ್ಯ: ಟಣಕೆದಾರ

12:38 PM Nov 22, 2021 | Team Udayavani |

ಹುಣಸಗಿ: ಜೀವನದಲ್ಲಿ ಸರಳತೆ ಹಾಗೂ ಪರಿಶುದ್ಧತೆ ಇದ್ದಾಗ ಮಾತ್ರ ಬದುಕಿಗೆ ಅರ್ಥ ಬರುತ್ತದೆ ಎಂದು ಸುರಪುರ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಟಣಕೆದಾರ ಹೇಳಿದರು.

Advertisement

ಬಲಶೆಟ್ಟಿಹಾಳ ಗ್ರಾಮದ ಬಸವಲಿಂಗ ಶಿವಯೋಗಿಗಳ ವಿರಕ್ತಮಠದಲ್ಲಿ ನಡೆದ 38ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಸೇವಾ ನಿವೃತ್ತ ಶಿಕ್ಷಕ ಭೀಮಣ್ಣ ಕಲ್ಯಾಣಿ ದಂಪತಿಯನ್ನು ಗೌರವಿಸಿ ಮಾತನಾಡಿದ ಅವರು, ಸಂಸಾರ ಜೀವನದಲ್ಲಿ ಅನೇಕ ಏರುಪೇರು, ಸಮಸ್ಯೆ ಬರುತ್ತವೆ. ಆದರೆ ಅವುಗಳನ್ನು ಶರಣರ ಪ್ರವಚನ, ಸತ್ಸಂಗದಿಂದ ಮಾತ್ರ ಶಮನಗೊಳಿಸಲು ಸಾಧ್ಯ ಎಂದರು.

ಸಿದ್ದಲಿಂಗಯ್ಯ ಶಾಸ್ತ್ರಿಗಳು ಮಾತನಾಡಿ, ಜನರ ಭಕ್ತಿ ಮತ್ತು ಸೇವೆ ಮಠ ಸದಾ ಗೌರವಿಸುತ್ತದೆ. ಭೀಮಣ್ಣ ಕಲ್ಯಾಣಿ 30 ವರ್ಷಗಳ ಸೇವೆಯಲ್ಲಿ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದು ಮರೆಯುವಂತಿಲ್ಲ ಎಂದರು.

ದೇವರಾಜ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಅಯ್ಯಣ್ಣ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಈರಣ್ಣ ಎಣ್ಣಿ ವಡಗೇರಾ, ವೀರಣ್ಣ ಬೆಳ್ಳುಬ್ಬಿ, ಸೋಮರೆಡ್ಡಿ ಮಂಗಿಹಾಳ, ರಾಮಕೋಟೆಪ್ಪ, ಬಸವರಾಜ ಅಂಗಡಿ, ಬಸಣ್ಣ ಗೊಡ್ರಿ, ರಾಜು ಅವರಾದಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next