Advertisement

ಚಳಿಗಾಲಕ್ಕೆ ಸಿಂಪಲ್‌ ಟಿಪ್ಸ್‌

10:05 AM Dec 19, 2019 | mahesh |

ಚಳಿಗಾಲ ಮತ್ತು ಶುಷ್ಕ ಹವೆ, ಸೊಂಪಾದ ಕೂದಲಿಗೆ ಹಾನಿ ಮಾಡುವ ಎರಡು ಅಂಶಗಳು. ಕೂದಲು ಉದುರುವುದು, ತಲೆಹೊಟ್ಟು, ಕೂದಲು ಒಣಗಿ ತುಂಡಾಗುವುದು ಮುಂತಾದ ಸಮಸ್ಯೆಗಳು ಚಳಿಗಾಲದಲ್ಲಿಯೇ ಹೆಚ್ಚಾಗಿ ಕಾಡುವುದು. ಹಾಗಾಗಿ, ಮಾಗಿಯ ಕಾಲದಲ್ಲಿ ಕೂದಲಿನ ಆರೈಕೆ ಮಾಡುವುದು ಅಗತ್ಯ. ಚಳಿಗಾಲದಲ್ಲಿ ಈ ಕೆಳಗಿನ ಟಿಪ್ಸ್‌ಗಳನ್ನು ಅನುಸರಿಸಿದರೆ ಕೂದಲು ಆರೋಗ್ಯವಾಗಿರುತ್ತದೆ.

Advertisement

– ಅಗತ್ಯಕ್ಕಿಂತ ಹೆಚ್ಚು ಶ್ಯಾಂಪೂ ಬಳಸಿದರೆ ತಲೆಯ ಚರ್ಮ ಶುಷ್ಕವಾಗಿ ಹೆಚ್ಚು ಕೂದಲು ಉದುರುತ್ತದೆ. ಹಾಗಾಗಿ, ಶ್ಯಾಂಪೂವನ್ನು ನೇರವಾಗಿ ಬಳಸದೆ, ಸ್ವಲ್ಪ ನೀರು ಬೆರೆಸಿ, ಕೂದಲಿನ ಬುಡಕ್ಕೆ ಹಚ್ಚಿ.

– ಹೇರ್‌ ಡ್ರೈಯರ್‌, ಹೇರ್‌ ಸ್ಟ್ರೇಟ್ನರ್‌ಗಳ ಶಾಖದಿಂದ ಕೂದಲು ಮತ್ತಷ್ಟು ಡ್ರೈ ಆಗುತ್ತದೆ. ಹಾಗಾಗಿ, ಚಳಿಗಾಲದಲ್ಲಿ ಸಿಂಪಲ್‌ ಹೇರ್‌ಸ್ಟೈಲ್‌ಗ‌ಳನ್ನು ಅನುಸರಿಸಿ.

-ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೂ ಕೂದಲು ಉದುರಬಹುದು. ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಿದ್ದಷ್ಟು ನೀರು ಕುಡಿಯಿರಿ.

-ಚಳಿ ಇದೆ ಅಂತ ಬಿಸಿ ನೀರಿನಿಂದ ತಲೆಗೆ ಸ್ನಾನ ಮಾಡುವುದರಿಂದಲೂ ಕೂದಲಿಗೆ ಹಾನಿಯಾಗುತ್ತದೆ. ಉಗುರು ಬೆಚ್ಚಗಿನ ನೀರಿನಿಂದ ಕೂದಲು ತೊಳೆಯುವುದು ಉತ್ತಮ.

Advertisement

– ಸ್ನಾನಕ್ಕೂ ಅರ್ಧ ಗಂಟೆ ಮುನ್ನ ಕೂದಲಿನ ಬುಡಕ್ಕೆ ಲಿಂಬೆರಸ ಅಥವಾ ಆ್ಯಪಲ್‌ ಸಿಡೆರ್‌ ವಿನೆಗರ್‌ ಹಚ್ಚಿದರೆ, ತಲೆಹೊಟ್ಟು ನಿವಾರಣೆಯಾಗುತ್ತದೆ.

– ಒಣ ಹವೆಯಿಂದಾಗಿ ಚರ್ಮ ಬಿರುಕು ಬಿಡುವಂತೆ ಕೂದಲಿನ ಬುಡ ಕೂಡಾ ಒಣಗುತ್ತದೆ. ಅದನ್ನು ತಡೆಯಲು, ವಾರಕ್ಕೊಮ್ಮೆ ಕೂದಲಿನ ಬುಡಕ್ಕೆ ಎಣ್ಣೆ ಹಚ್ಚಿ ಮಸಾಜ್‌ ಮಾಡಿ.

– ಗುಂಗುರು ಕೂದಲಿನವರು ಸಲ್ಫೆಟ್‌ ಫ್ರೀ ಶ್ಯಾಂಪೂ, ಮರದ ಬಾಚಣಿಗೆ ಬಳಸಬಹುದು.
– ಮಾರುಕಟ್ಟೆಯಲ್ಲಿರುವ ಉತ್ತಮ ಹೇರ್‌ ಮಾಯಿಶ್ಚರೈಸರ್‌ಗಳನ್ನು ಬಳಸಿ ಚಳಿಗಾಲದಿಂದ ರಕ್ಷಣೆ ಪಡೆಯಬಹುದು.

-ಹೇರ್‌ ಡ್ರೈಯರ್‌ ಬಳಸುವ ಬದಲು ಒಣ ಟವಲ್‌ನಿಂದ ಮೃದುವಾಗಿ ಉಜ್ಜಿದರೆ ಕೂದಲು ತುಂಡಾಗುವುದಿಲ್ಲ.

– ಕೂದಲು ಒರೆಸಲೆಂದೇ ಪ್ರತ್ಯೇಕ ಟವೆಲ್‌ ಬಳಸಿ.
-ಹೊರಗೆ ಹೋಗುವಾಗ ಟೊಪ್ಪಿ, ದುಪಟ್ಟಾದಿಂದ ಕೂದಲನ್ನು ಕವರ್‌ ಮಾಡಿಕೊಳ್ಳಿ.

-ದಾಸವಾಳ, ನೆಲ್ಲಿಕಾಯಿ, ಮೆಂತ್ಯೆ ಹಿಟ್ಟು, ಬಾಳೆಹಣ್ಣು, ಬೆಣ್ಣೆ ಹಣ್ಣು, ಮೊಸರು ಮುಂತಾದ ನೈಸರ್ಗಿಕ ಮಾಯಿಶ್ಚರೈಸರ್‌ಗಳಿಂದ ಹೇರ್‌ಪ್ಯಾಕ್‌ ತಯಾರಿಸಿ ಬಳಸಿ.

Advertisement

Udayavani is now on Telegram. Click here to join our channel and stay updated with the latest news.

Next