Advertisement
ಹಾಕುವ ಬಟ್ಟೆಯೂ ಸರಳ, ನೋಡುವ ನೋಟವೂ ಸರಳ, ಮಾಡುವ ಊಟವೂ ಅಷ್ಟೇ… ಸಿಂಪಲ್ಲಾಗ್ ಹೇಳಬೇಕೆಂದರೆ ಸರಳ ಜೀವನ ಶೈಲಿಯಲ್ಲೇ ಚಿಲ್ ಹಾಗೂ ಥಿಲ್ಲಾಗಿ ಬದುಕುವವರೇ ಈ ಸಿಂಪಲ್ ಸಿಂಪಲ್ ಲಿಟಲ್ ಸ್ಟಾರುಗಳು! “ಮಿನಿಮಲಿಸ್ಟ್’ ಅಂತಲೇ ಇವರು ಫೇಮಸ್ಸು. ಇವರು ಕಾಲೇಜಲ್ಲೂ ಇರುತ್ತಾರೆ, ಸೆಲೆಬ್ರಿಟಿಗಳ ಮಧ್ಯೆಯೂ ಇರುತ್ತಾರೆ!
Related Articles
ಮಿನಿಮಲಿಸಂ ಅನ್ನೋ ಹೊಸ ಕಾನ್ಸೆಪುr ಬೇರೆ ಬೇರೆ ದೇಶಗಳಲ್ಲಿ ತುಂಬಾ ಹಿಂದಿನಿಂದಲೂ ಚಾಲ್ತಿಗೆ ಬಂದಿದೆ. ಎಲ್ಲದರಲ್ಲೂ ಸರಳವಾಗಿ ಬದುಕೋದೇ ಈ ಸಿದ್ಧಾಂತದ ಮೊದಲನೇ ಹಂತವೂ, ಕೊನೆಯ ಹಂತವೂ ಆಗಿದೆ. ಹಾಕುವ ಬಟ್ಟೆಯೂ ಸರಳ, ನೋಡುವ ನೋಟವೂ ಸರಳ, ಮಾಡುವ ಊಟವೂ ಅಷ್ಟೇ… ಸಿಂಪಲ್ಲಾಗ್ ಹೇಳಬೇಕೆಂದರೆ ಸರಳ ಜೀವನ ಶೈಲಿಯಲ್ಲೇ ಚಿಲ್ ಹಾಗೂ ಥ್ರಿಲ್ಲಾಗಿ ಬದುಕುವವರೇ ಈ ಸಿಂಪಲ್ ಸಿಂಪಲ್ ಲಿಟಲ್ ಸ್ಟಾರುಗಳು! “ಮಿನಿಮಲಿಸ್ಟ್’ ಅಂತಲೇ ಇವರು ಫೇಮಸ್ಸು.
Advertisement
ಮಿನಿಮಲಿಸ್ಟ್ ಹೇಗಿರ್ತಾರೆ?ಬಾಹ್ಯದ ಆಡಂಬರ ಇವರಿಗೆ ಬೇಕಿಲ್ಲ. ಬ್ರಾಂಡೆಡ್ ಡ್ರೆಸ್ಸು, ದುಬಾರಿ ವಾಚುಗಳಾಚೆ ಇವರ ಚಿಂತನೆ ಇರುತ್ತದೆ. ನಾವು ಕಾಣುವ ಕನಸು, ಮಾಡುವ ಯೋ(ಜ)ಚನೆ, ಜೀವನಪ್ರೀತಿ, ಪ್ರತಿ ಕ್ಷಣವೂ ಖುಷಿಯಿಂದ ಎಂಜಾಯ್ ಮಾಡೋದು, ನಮ್ಮ ಬದುಕಿಗೆ ಅತಿಯಾದ ಆಧುನೀಕತೆ… ಯಾವುದೂ ಬೇಡ. ಒಟ್ಟಾರೆ ನಮ್ಮ ಆಂತರಿಕ ಸುಖವನ್ನು ಯಾವುದು ಕಸಿದುಕೊಳ್ಳುತ್ತೋ ಅದ್ಯಾವುದೂ ಬೇಡ. ಸರಳವಾಗಿ ಬದುಕೋದೇ ಪರಮ ಧ್ಯೇಯ. “ಹಾಗೇ ಇರ್ತೇವೆ ಕೂಡ’ ಎನ್ನುವುದು ಈ ಮಿನಿಮಲಿಸ್ಟ್‌ಗಳ ತತ್ವ. ಇವರು ಏನನ್ನೂ ಅಷ್ಟು ಸುಲಭಕ್ಕೆ ವೇಸ್ಟ್ ಮಾಡೋಲ್ಲ, ಟೈಮನ್ನು ಕೂಡ. ದಿನಕ್ಕೊಂದು ಡ್ರೆಸ್ಸು ಹಾಕುವವರಲ್ಲ. ಇರುವ ನಾಲ್ಕೇ ಡ್ರೆಸ್ಸಿನಲ್ಲೇ ಸುಖ ಕಾಣುವವರು. ಸರಳ ಗೀತೆ ಹಾಡಿದೆ!
ನೋಡುವ ಕಣ್ಣುಗಳು ಇವನೊಬ್ಬ ಗಾಂಧಿವಾದಿ, ಗುಗ್ಗು, ಬಚ್ಚಾ ಅಂತೆಲ್ಲಾ ಗೊಂಬೆಯಾಡಿಸಿ ಬಿಡುತ್ತವೆ. ಆದರೆ, ಒಂದು ವಿಚಾರ ತಿಳಿದಿರಲಿ… ಕಾಲೇಜಿನ ಕೊನೆಯ ಹಂತ ತಲುಪುವಾಗ ಷೋಕಿ ಬದುಕು ಬದುಕೇ ಅಲ್ಲ ಅಂತನ್ನಿಸುತ್ತದೆ. ಆ ಬದುಕನ್ನೂ ಮೀರಿದ್ದು ಒಂದಿದೆ ಅಂತ ಅರಿವಾಗುತ್ತೆ. ಹಾಗೆ ನೋಡಿದರೆ, ಸಿಂಪಲ್ಲಾಗ್ ಬದುಕೋದನ್ನು ಅಭ್ಯಾಸ ಮಾಡಿದವರಿಗೆ ಬದುಕು ಕಷ್ಟವೇ ಅಲ್ಲ. ಅವರು ಪಾಸಿಟಿವ್ ಆಗಿಯೇ ಯೋಚಿಸುತ್ತಾರೆ. ಏನೂ ಇಲ್ಲ ಅಂತ ಕೊರಗೋದಿಲ್ಲ. ಇದ್ದುದರಲ್ಲಿ ಬದುಕಿನ ವೈಭವ ಕಾಣಾ¤ರೆ. ಕಂಜೂಸ್‌ತನವಲ್ಲ…
ಸಿಂಪಲ್ಲಾಗಿ ಬದುಕೋದೆಂದರೆ, ಹೊಟ್ಟೆಗೆ ಹಿಟ್ಟಿಲ್ಲದೇ ಅಥವಾ ಎಲ್ಲದ್ದಕ್ಕೂ ಉಳಿತಾಯ ಮಾಡಿ ಕಂಜೂಸ್ ಆಗಿ ಬದುಕಿ ಅಂತಲ್ಲ. ಯಾವತ್ತೂ ಹತ್ತಿಪ್ಪತ್ತು ವೆರೈಟಿಗಳ ತಿಂಡಿಗಳನ್ನು ಸವಿಯುತ್ತಾ ದುಬಾರಿ ಹೋಟೆಲ್ಲುಗಳನ್ನೇ ಹುಡುಕುವವರು ಒಂದಿನ ನಿಮ್ಮೂರ ಸಣ್ಣ ಕ್ಯಾಂಟೀನಿನಲ್ಲಿ ಸರಳವಾದ ತಿಂಡಿಯನ್ನೊಮ್ಮೆ ತಿಂದುಬನ್ನಿ. ಯಾವತ್ತೂ ಕಾರಿನಲ್ಲೇ ಸುತ್ತುವವರು ಒಮ್ಮೆ ಬಸ್ ಪಯಣದ ಸುಖವನ್ನೊಮ್ಮೆ ಅನುಭವಿಸಿ. ಖುಷಿ ಕಾಣಲು ಸರಳವಾಗಿ ಬದುಕಲು ದೊಡ್ಡ ದೊಡ್ಡ ಸುಖಗಳೇ ಬೇಕೆನ್ನುವ ಮನಃಸ್ಥಿತಿ ಬೇಡ. ಸಣ್ಣ ಸಣ್ಣ ಖುಷಿಯನ್ನು ಆಸ್ವಾದಿಸಿದರೆ ಸಾಕು. ಸಿಂಪಲ್ಲಾಗಿ ಯೋಚಿಸಿ, ದೊಡ್ಡದಾಗಿ ಅಳವಡಿಸಿ. “ಸಿಂಪ್ಲಿ ಲಿವಿಂಗ್, ಹೈಲಿ ಥಿಂಕಿಂಗ್’ ಅನ್ನೋ ಟ್ಯಾಗ್‌ಲೈನ್ ಒಮ್ಮೆಯಾದರೂ ನಿಮ್ಮ ಬದುಕಿನ ವೇದಿಕೆ ಏರಿ ಬರಲಿ. ಅವನ ಬಳಿ ಇರೋದು ಹದಿನೈದೇ ವಸ್ತು!
ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ. ನ್ಯೂಯಾರ್ಕ್‌ನ ಆಂಡ್ರೋ ಹೈಡ್ ಅನ್ನೋ ಯುವಕ 2010ರಿಂದ ಬರೀ 15 ಅತ್ಯಲ್ಪ ವಸ್ತುಗಳಲ್ಲೇ ಜೀವನ ನಡೆಸುತ್ತಿದ್ದಾನೆ. ಕೋಟ್ಯಧಿಪತಿಯಷ್ಟೇ ಖುಷಿ ಆಗಿದ್ದೇನೆನ್ನುವ ಈ ಮಹಾನುಭಾವನ ಬಳಿ ಬ್ಯಾಗ್, ಒಂದು ಜೊತೆ ಜೀನ್ಸ್ ಪ್ಯಾಂಟ್, ಎರಡು ಜೊತೆ ಟೀ ಶರ್ಟು, ಶರ್ಟ್, ಶಾರ್ಟ್, ಒಂದು ಟವೆಲ್, ಸನ್‌ಗಾÉಸ್, ವಾಲೆಟ್, ಐಫೋನ್, ರೈನ್‌ಕೊಟ್, ಶೂ, ನೋಟ್‌ಬುಕ್- ಹೀಗೆ ಅತ್ಯಲ್ಪ 15 ವಸ್ತುಗಳಷ್ಟೇ ಇವೆ! “ಈ ಜೀವನಶೈಲಿ ನನ್ನನ್ನು ಹೆಚ್ಚು ಸುಖೀಯಾಗಿಸಿದೆ ಹಾಗೂ ಅನಗತ್ಯ ವಸ್ತು ಪ್ರಪಂಚದಿಂದ ನನ್ನನ್ನು ಮುಕ್ತನನ್ನಾಗಿಸಿದೆ’ ಎಂದು ಆತ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ.
—
ಸಿಂಪ್ಲಿ ಲೈಫ್ಗೆ 3 ಟಿಪ್ಸ್
– ನಿಮಗೆ ಅಗತ್ಯವಿಲ್ಲದ ವಸ್ತುಗಳನ್ನು ಉಪಯೋಗ ಇರುವವರಿಗೆ ದಾಟಿಸಿ ಬಿಡಿ.
– ಅತ್ಯಲ್ಪ ವಸ್ತುಗಳ ಜೊತೆ ಸಿಂಪಲ್ ಪ್ರಯಾಣ ಆರಂಭಿಸಿ, ದಿನಕ್ಕೆಷ್ಟು ವಸ್ತುಗಳ ಅಗತ್ಯವಿದೆ ಎಂದು ಆಗ ಗೊತ್ತಾಗುತ್ತೆ.
– ಹೆಚ್ಚು ವಸ್ತು ಇದ್ದಷ್ಟು ಟೆನÒನ್ ಹೆಚ್ಚು. ಕಡಿಮೆ ವಸ್ತುಗಳಲ್ಲಿ ನೆಮ್ಮದಿಯ ಸುಖವಿದೆ ಎಂಬುದು ಗೊತ್ತಿರಲಿ.
—
ಸ್ಟೀವ್ ಜಾಬ್ಸ್ನ ಮನೆಯಲ್ಲಿದ್ದಿದ್ದು ಐನ್‌ಸ್ಟಿàನ್ ಫೋಟೋ ಮಾತ್ರ!
ಆ್ಯಪಲ್ ಸ್ಥಾಪಕ ಸ್ಟೀವ್ ಜಾಬ್ಸ್ ಜಗತ್ತಿಗೆ ಲಕ್ಷುರಿ ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನುಗಳನ್ನು ಕೊಟ್ಟರೂ, ಅವರು ಕೂಡ ಮಿನಿಮಲಿಸ್ಟ್ ಆಗಿದ್ರು. ಆ್ಯಪಲ್‌ನ ಅಂದಿನ ಸಿಇಒ ಜಾನ್ ಸ್ಕಾಲ್ಲೆ ಒಮ್ಮೆ ಸ್ಟೀವ್ ಮನೆಗೆ ಹೋಗಿದ್ರಂತೆ. ಅಲ್ಲಿ ಯಾವುದೇ ಫನೀìಚರುಗಳನ್ನು ಕಾಣದೆ, ಮನೆ ಫುಲ್ ಖಾಲಿ ಅಂತನ್ನಿಸಿತಂತೆ. ಅವರ ಮನೆಯ ಹಾಲ್‌ನಲ್ಲಿದ್ದಿದ್ದು ಕೇವಲ ಐನ್‌ಸ್ಟಿàನ್ ಫೋಟೋ ಮಾತ್ರ! ಅವರ ಬೆಡ್‌ರೂಮೂ ಅಷ್ಟೇ. ಒಂದು ಟಿಫನಿ ಲ್ಯಾಂಪ್, ಒಂದು ಕುರ್ಚಿ ಮತ್ತು ಒಂದು ಬೆಡ್ ಅಷ್ಟೇ!
—
ಸ್ಟಾರ್‌ಗಳೂ ಮಿನಿಮಲಿಸ್ಟ್!
– ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖೀ ಸೆಲೆಬ್ರಿಟಿಯೇ ಆದರೂ, ವೀಕೆಂಡಿನಲ್ಲಿ ತವರೂರಾದ ಬುಧಾನ ಹಳ್ಳಿಯ ಹೊಲದಲ್ಲಿ ಗುದ್ದಲಿ ಹಿಡಿದು ರೈತ ಆಗ್ತಾರೆ!
– “ಮ್ಯಾಡ್ ಮೆನ್’ ಖ್ಯಾತಿಯ ಹಾಲಿವುಡ್ ನಟ ವಿನ್ಸೆಂಟ್ ಕಾರ್ಥೀಸರ್ ಕಾರ್ ಇಟ್ಟುಕೊಂಡಿಲ್ಲ. ಬಸ್ಸಿನಲ್ಲೇ ನ್ಯೂಯಾರ್ಕ್ ಸುತ್ತುತ್ತಾನೆ!
– ಅಗರ್ಭ ಶ್ರೀಮಂತ, ಅಮೆರಿಕದ ವಾರೆನ್ ಬಫೆಟ್ ಇವತ್ತಿಗೂ ಸ್ಮಾರ್ಟ್‌ಫೋನ್ ಇಟ್ಕೊಂಡಿಲ್ಲ!
– “ದಿ ಟ್ವಿಲೈಟ್ ಸಾಗಾ’ ಸ್ಟಾರ್ ರಾಬರ್ಟ್ ಪ್ಯಾಟಿನ್ಸನ್ ಬಿಲಿಯನೇರ್ ಆದರೂ ಇರೋದು ಬಾಡಿಗೆ ಮನೆಯಲ್ಲಿ!
– ಉರುಗ್ವೆಯ ಮಾಜಿ ರಾಷ್ಟ್ರಾಧ್ಯಕ್ಷ ಜೋಸ್ ಮುಜಿಕಾ ಇವತ್ತಿಗೂ ಹೊಲದಲ್ಲಿ ಉಳುಮೆ ಮಾಡ್ತಾರೆ!
– ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ ಬ್ಯಾಂಕ್ ಖಾತೆಯ ಮೊತ್ತ 20 ಸಾವಿರ ರೂ. ದಾಟುವುದಿಲ್ಲ! ಇವರ ಪತ್ನಿ ಓಡಾಡೋದು ರಿಕ್ಷಾದಲ್ಲಿ! – ಪ್ರಸಾದ್ ಶೆಣೈ ಆರ್.ಕೆ.